Asianet Suvarna News Asianet Suvarna News

ಜಮ್ಮು ರೈಲು ನಿಲ್ದಾಣದಲ್ಲಿ 18 ಡಿಟೋನೇಟರ್, ಸ್ಫೋಟಕಗಳಿದ್ದ ಬ್ಯಾಗ್ ಪತ್ತೆ!

2 ಬಾಕ್ಸ್‌ಗಳಲ್ಲಿ ಪ್ಯಾಕ್ ಮಾಡಲಾಗಿದ್ದ ಸ್ಫೋಟಕ ಸಾಮಗ್ರಿಗಳು, 18 ಡಿಟೋನೇಟರ್‌ಗಳು ಮತ್ತು ಕೆಲವು ವೈರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಭೀತಿ ಆರಂಭವಾಗಿದೆ.
 

Jammu Railway Station Bag with explosives 18 detonators found san
Author
First Published Oct 27, 2022, 4:47 PM IST

ಜಮ್ಮು (ಅ.27): ಜಮ್ಮು ರೈಲು ನಿಲ್ದಾಣದ ಟ್ಯಾಕ್ಸಿ ನಿಲ್ದಾಣದ ಬಳಿ ಗುರುವಾರ  ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದೆ. ಬ್ಯಾಗ್‌ನಲ್ಲಿ ಸ್ಫೋಟಕಗಳು ಮತ್ತು ಕನಿಷ್ಠ 18 ಡಿಟೋನೇಟರ್‌ಗಳಿವೆ ಎಂದು ಎಸ್‌ಎಸ್‌ಪಿ ಜಿಆರ್‌ಪಿ ಆರಿಫ್ ರಿಶು ತಿಳಿಸಿದ್ದಾರೆ. ಜಮ್ಮು ರೈಲ್ವೇ ನಿಲ್ದಾಣದ ಟ್ಯಾಕ್ಸಿ ಸ್ಟ್ಯಾಂಡ್ ಬಳಿ ನಾವು ಬ್ಯಾಗ್ ಅನ್ನು ವಶಪಡಿಸಿಕೊಂಡಿದ್ದೇವೆ. ಬ್ಯಾಗ್‌ನಲ್ಲಿ 2 ಬಾಕ್ಸ್‌ಗಳಲ್ಲಿ ಪ್ಯಾಕ್ ಮಾಡಲಾದ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ. 18 ಡಿಟೋನೇಟರ್‌ಗಳು ಮತ್ತು ಕೆಲವು ವೈರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಾಕ್ಸ್‌ನಲ್ಲಿ ಸುಮಾರು 500 ಗ್ರಾಂ ವ್ಯಾಕ್ಸ್ ಮಾದರಿಯ ವಸ್ತುಗಳನ್ನು ಪ್ಯಾಕ್ ಮಾಡಲಾಗಿದೆ. ವಶಪಡಿಸಿಕೊಳ್ಳಲಾಗಿದೆ ಎಂದು ರಿಶು ಮಾಧ್ಯಮದವರಿಗೆ ತಿಳಿಸಿದ್ದಾರೆ.ಪೊಲೀಸರ ಪ್ರಕಾರ, ಸ್ಫೋಟಕಗಳನ್ನು ಸ್ಪೋಟ ಮಾಡುವ ಮೂಲಕ ಜಮ್ಮು ರೈಲು ನಿಲ್ದಾಣವನ್ನು ಗುರಿಯಾಗಿಸುವುದು ಉದ್ದೇಶವಾಗಿತ್ತು. ಈ ರೈ;ಲ್ವೆ ನಿಲ್ದಾಣವು ಯಾವುದೇ ಸಮಯದಲ್ಲೂ ಜನರಿಂದ ತುಂಬು ತುಳುಕುತ್ತಿರುತ್ತದೆ.

ಜಮ್ಮು ನಗರದ ರೈಲ್ವೆ ನಿಲ್ದಾಣದ ಟ್ಯಾಕ್ಸಿ ನಿಲ್ದಾಣದ ಬಳಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದೆ. ಬ್ಯಾಗ್‌ನಲ್ಲಿ ಹಲವಾರು ಡಿಟೋನೇಟರ್‌ಗಳು ಮತ್ತು ಐಡಿಗಳು ಪತ್ತೆಯಾಗಿವೆ. ಪೊಲೀಸ್ ಮತ್ತು ಭದ್ರತಾ ಪಡೆಗಳ ತಂಡಗಳು ಸ್ಥಳದಲ್ಲಿವೆ. ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಲಾಗಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ತಂಡದಿಂದ ಶೋಧ ಕಾರ್ಯವೂ ನಡೆಯುತ್ತಿದೆ. ಮಾಹಿತಿ ಪ್ರಕಾರ ಜಮ್ಮು ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದೆ. ತನಿಖೆಯಲ್ಲಿ, ಬ್ಯಾಗ್‌ನಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಮತ್ತು ಸುಮಾರು 18 ಡಿಟೋನೇಟರ್‌ಗಳು (ಒಂದು ರೀತಿಯ ಸ್ಫೋಟಕ) ಪತ್ತೆಯಾಗಿವೆ. ಪೊಲೀಸ್ ತಂಡ ಅವರನ್ನು ವಶಕ್ಕೆ ತೆಗೆದುಕೊಂಡಿದೆ. ಸುತ್ತಮುತ್ತಲ ಪ್ರದೇಶದಲ್ಲಿ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.

1947ರ ಬಳಿಕ ಮೊದಲ ಬಾರಿ ಜಮ್ಮು ಕಾಶ್ಮೀರದ ಶಾರದಾ ದೇಗುಲದಲ್ಲಿ Deepavali

ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಶೌರ್ಯ ದಿವಸ್ ಆಚರಿಸಲಾಗುತ್ತಿದೆ. ಇದೇ ವೇಳೆ ಜಮ್ಮು ನಗರದ ಹೃದಯ ಭಾಗದಲ್ಲಿರುವ ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಈ ಬಗ್ಗೆ ತನಿಖೆ ನಡೆಸುತ್ತಿವೆ.

PM Modi In Kargil: ಶಕ್ತಿ ಇಲ್ಲದೆ ಶಾಂತಿ ಸಾಧ್ಯವಿಲ್ಲ: ಪ್ರಧಾನಿ ಮೋದಿ

ನಿಲ್ದಾಣದ ಟ್ಯಾಕ್ಸಿ ಪಾರ್ಕಿಂಗ್ ಪ್ರದೇಶದಲ್ಲಿ ರೈಲ್ವೆ ಹಳಿಯಿಂದ ಸುಮಾರು 100 ಮೀಟರ್ ದೂರದಲ್ಲಿ ವಶಪಡಿಸಿಕೊಳ್ಳಲಾಗಿದೆ. ಸ್ಥಳದಲ್ಲಿ ಹಲವು ಪೊಲೀಸ್ ಅಧಿಕಾರಿಗಳು ಜಮಾಯಿಸಿದ್ದಾರೆ, ಚರಂಡಿಯಲ್ಲಿ ಸ್ಫೋಟಕಗಳ ಎರಡು ಬಾಕ್ಸ್‌ಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಎಫ್‌ಐಆರ್ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ. "ಚರಂಡಿಯಿಂದ ಒಂದು ಚೀಲವನ್ನು ವಶಪಡಿಸಿಕೊಳ್ಳಲಾಗಿದೆ. ಬ್ಯಾಗ್‌ನೊಳಗೆ ಎರಡು ಬಾಕ್ಸ್‌ಗಳು ಪತ್ತೆಯಾಗಿವೆ. ಒಂದು ಬಾಕ್ಸ್‌ನಲ್ಲಿ ಸ್ಫೋಟಕ ವಸ್ತುವಿತ್ತು. ಇನ್ನೊಂದು ಬಾಕ್ಸ್‌ನಲ್ಲಿ 18 ಡಿಟೋನೇಟರ್‌ಗಳು ಮತ್ತು ಕೆಲವು ವೈರ್‌ಗಳಿವೆ. ತನಿಖೆ ಮುಂದುವರೆದಿದೆ" ಎಂದು ಪೊಲೀಸರು ತಿಳಿಸಿದ್ದಾರೆ.

Follow Us:
Download App:
  • android
  • ios