ಆರು ವರ್ಷಗಳ ಬಳಿಕ ಎನ್‌ಡಿಎಗೆ ಚಂದ್ರಬಾಬು ನಾಯ್ಡು?

ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರೊಂದಿಗಿನ ಸಭೆಯ ಬಳಿಕ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮರಳಿ ಎನ್‌ಡಿಎ ತೆಕ್ಕೆಗೆ ಬರುವ ಇರಾದೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
 

Telugu Desam Party chief Chandrababu Naidu may return to NDA 6 years after breaking ties san

ನವದೆಹಲಿ (ಮಾ.8):  ತೆಲುಗು ದೇಶಂ ಪಾರ್ಟಿ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ದು ಆರು ವರ್ಷಗಳ ಬಳಿಕ ಮತ್ತೆ ಎನ್‌ಡಿಎಗೆ ತೆಕ್ಕೆಗೆ ಸೇರುವ ಸಾಧ್ಯತೆ ಇದೆ. ಬಿಜೆಪಿ ನೇತೃತ್ವದ ಎನ್‌ಡಿಎಯಲ್ಲಿ ಟಿಡಿಪಿ ದಕ್ಷಿಣದ ಪ್ರಮುಖ ಪಕ್ಷವಾಗಿತ್ತು. ಆದರೆ, 2018ರಲ್ಲಿ ಚಂದ್ರಬಾಬು ನಾಯ್ಡು ಆಂಧ್ರಪ್ರದೇಶದ ಸಿಎಂ ಆಗಿದ್ದಾಗಲೇ ಮೈತ್ರಿಕೂಟದಿಂದ ಹೊರಬರುವ ನಿರ್ಧಾರ ಮಾಡಿದ್ದರು. ಅಂದಿನಿಂದ ರಾಜಕೀಯದಲ್ಲಿ ಕುಸಿತವನ್ನೇ ಕಂಡಿರುವ ಚಂದ್ರಬಾಬು ನಾಯ್ಡು ಈಗ ಮತ್ತೆ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಸೇರುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಗುರುವಾರ ರಾತ್ರಿ ಚಂದ್ರಬಾಬು ನಾಯ್ಡು ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಭೇಟಿ ನಡೆದ ಬೆನ್ನಲಿಯೇ ಈ ಬೆಳವಣಿಗೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಉಭಯ ನಾಯಕರು ಪ್ರಮುಖವಾಗಿ ಮಾತುಕತೆ ನಡೆಸಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಕೂಡ ಈ ಚರ್ಚೆಯಲ್ಲಿ ಭಾಗವಾಗಿದ್ದರು ಎಂದು ಮೂಲಗಳು ತಿಳಿಸಿವೆ. ಎರಡೂ ಪಕ್ಷಗಳು ರಾಜ್ಯದಲ್ಲಿ ಮುಕ್ತವಾಗಿ ಕೈಜೋಡಿಸಲು ಒಪ್ಪಿಕೊಂಡಿದೆ. ಆದರೆ, ಎರಡೂ ಪಕ್ಷಗಳು ಒಪ್ಪುವ ಸೀಟುವ ಹಂಚಿಕೆ ವ್ಯವಸ್ಥೆಯ ಮೇಲೆ ಇದು ಪ್ರಮುಖವಾಗಿ ನಿರ್ಧಾರವಾಗಲಿದೆ ಎನ್ನಲಾಗಿದೆ. ಇದಲ್ಲದೆ, ಶುಕ್ರವಾರ ಕೂಡ ನಾಯ್ಡು ಮತ್ತು ಶಾ ಭೇಟಿಯಾಗುವ ಸಾಧ್ಯತೆಯಿದೆ. ಸಭೆಯಲ್ಲಿ ಜನಸೇನಾ ಪಕ್ಷದ (ಜೆಎಸ್‌ಪಿ) ಅಧ್ಯಕ್ಷ ಪವನ್ ಕಲ್ಯಾಣ್ ಕೂಡ ಉಪಸ್ಥಿತರಿರುವ ಸಾಧ್ಯತೆ ಇದೆ.

ಶುಕ್ರವಾರದ ನಾಯಕರ ಸಭೆಯು ಟಿಡಿಪಿ-ಬಿಜೆಪಿ-ಜನಸೇನೆ ನಡುವಿನ ಸೀಟು ಹಂಚಿಕೆ ಸೂತ್ರಕ್ಕೆ ಅಂತಿಮ ಮುದ್ರೆ ಬೀಳುವ ನಿರೀಕ್ಷೆ ಇದೆ. ಟಿಡಿಪಿ ಬಿಜೆಪಿ ನೇತೃತ್ವದ ಎನ್‌ಡಿಎ ಭಾಗವಾಗಿತ್ತು ಆದರೆ ನಾಯ್ಡು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ 2018 ರಲ್ಲಿ ಮೈತ್ರಿಕೂಟದಿಮದ ಹೊರಬರುವ ನಿರ್ಧಾರ ಮಾಡಿತ್ತು.

ಚುನಾವಣೆ ಸಮೀಪವಾಗುತ್ತಿರುವ ಹೊತ್ತಿನಲ್ಲಿ ಮೈತ್ರಿ ರಚನೆಯನ್ನು ಆಗುವ ವಿಳಂಬ ಪ್ರಯೋಜನೆ ನೀಡುವುದಿಲ್ಲ. ಯಾವುದೇ ಅಸ್ಪಷ್ಟತೆಯು ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಗೊಂದಲಗೊಳಿಸುತ್ತದೆ ಎಂದು ಟಿಡಿಪಿ ನಾಯಕರು ಹೇಳಿದ್ದಾರೆ. ಈ ನಡುವೆ, ಎನ್‌ಡಿಎ ಸದಸ್ಯರಾಗಿರುವ ಪವನ್‌ ಕಲ್ಯಾಣ್‌ ಅವರ ಜನಸೇನೆ ಈಗಾಗಲೇ ಟಿಡಿಪಿಯೊಂದಿಗೆ ಕೈಜೋಡಿಸಿದೆ ಮತ್ತು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವಂತೆ ಒತ್ತಾಯ ಮಾಡಿದೆ.

ತಮಿಳುನಾಡಿನ ಹಲವು ನಾಯಕರು ಬಿಜೆಪಿಗೆ: ಎನ್‌ಡಿಎ ಜೊತೆ ಮತ್ತೆ ಮೈತ್ರಿಗೆ ಚಂದ್ರಬಾಬು ನಾಯ್ಡು ಒಲವು

ಚಂದ್ರಬಾಬು ನಾಯ್ಡು ಅವರು ಈ ವರ್ಷದ ಫೆಬ್ರವರಿಯಲ್ಲಿ ಶಾ ಮತ್ತು ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದರು. ಈ ವೇಳೆಯೇ ಆಂಧ್ರದಲ್ಲಿ ಟಿಡಿಪಿ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಊಹಾಪೋಹಗಳು ಎದ್ದಿದ್ದವು. ಒಡಿಶಾದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ಬಿಜು ಜನತಾ ದಳ ತಮ್ಮ ಮೈತ್ರಿಯನ್ನು ಅಂತಿಮಗೊಳಿಸುವ ಹಂತದಲ್ಲಿದೆ ಎಂಬ ಊಹಾಪೋಹಗಳು ಕೂಡ ಹರಡಿದ್ದು, ಉಭಯ ಪಕ್ಷಗಳ ಹಿರಿಯ ನಾಯಕರು ಬುಧವಾರ ಪ್ರತ್ಯೇಕ ಸಭೆ ನಡೆಸಿ ಅಂತಹ ಸಾಧ್ಯತೆಯ ಸುಳಿವು ಬಿಟ್ಟುಕೊಟ್ಟಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.  ಆಂಧ್ರಪ್ರದೇಶವು 25 ಲೋಕಸಭೆ ಮತ್ತು 175 ವಿಧಾನಸಭಾ ಸ್ಥಾನಗಳನ್ನು ಹೊಂದಿದ್ದು, ಎಂಟರಿಂದ 10 ಸಂಸದೀಯ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಿಜೆಪಿ ಉತ್ಸುಕವಾಗಿದೆ.

Skill Development Scam Case: ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ ಜಾಮೀನು

Latest Videos
Follow Us:
Download App:
  • android
  • ios