ನವಿಲನ್ನು ಕೊಂದು ಯೂಟ್ಯೂಬ್‌ನಲ್ಲಿ ರಾಷ್ಟ್ರಪಕ್ಷಿಯ ಕರಿ ರೆಸಿಪಿ ಹರಿಬಿಟ್ಟ ಯೂಟ್ಯೂಬರ್ ಅಂದರ್
ತೆಲಂಗಾಣದ ಯೂಟ್ಯೂಬರ್ ಒಬ್ಬ ರಾಷ್ಟ್ರಪಕ್ಷಿಯನ್ನೇ ಹಿಡಿದು ಕೊಂದು ಸಾಂಬಾರು ಮಾಡಿದ್ದಾನೆ. ಬರೀ ಇಷ್ಟೇ ಅಲ್ಲ ಇದರ ವೀಡಿಯೋ ಮಾಡಿ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದಾನೆ.
ನವಿಲು ನಮ್ಮ ರಾಷ್ಟ್ರ ಪಕ್ಷಿ, ರಾಷ್ಟ್ರಪಕ್ಷಿಯೂ ಸೇರಿದಂತೆ ಯಾವುದೇ ವನ್ಯಜೀವಿಗಳನ್ನು ಹತ್ಯೆ ಮಾಡುವುದು ವನ್ಯಜೀವಿ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧ. ಆದರೆ ತೆಲಂಗಾಣದ ಯೂಟ್ಯೂಬರ್ ಒಬ್ಬ ರಾಷ್ಟ್ರಪಕ್ಷಿಯನ್ನೇ ಹಿಡಿದು ಕೊಂದು ಸಾಂಬಾರು ಮಾಡಿದ್ದಾನೆ. ಬರೀ ಇಷ್ಟೇ ಅಲ್ಲ ಇದರ ವೀಡಿಯೋ ಮಾಡಿ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯೂಟ್ಯೂಬರ್‌ನನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಹೀಗೆ ನವಿಲನ್ನೇ ಕೊಂದು ಅದರ ಮಾಂಸದ ಸಾರು ಮಾಡುವ ರೆಸಿಪಿಯನ್ನು ಯೂಟ್ಯೂಬ್‌ನಲ್ಲಿ ಪ್ರಕಟಿಸಿದ ಯೂಟ್ಯೂಬರ್‌ನನ್ನು(YouTuber) ತೆಲಂಗಾಣದ ರಾಜಣ್ಣ ಸಿರಿಸಿಲ್ಲ(Rajanna Siricilla)ಜಿಲ್ಲೆಯ ತಂಗಲಪಲ್ಲಿ ಗ್ರಾಮದ ಕೊಡಂ ಪ್ರಣಯ್ ಕುಮಾರ್ (Kodam Pranay Kumar) ಎಂದು ಗುರುತಿಸಲಾಗಿದೆ. ಈತ ಯೂಟ್ಯೂಬನಲ್ಲಿ ನವಿಲು ಸಾಂಬಾರಿನ ಸಂಪ್ರದಾಯಿಕ ವಿಧಾನ ಎಂದು ಶೀರ್ಷಿಕೆ ನೀಡಿ ಯೂಟ್ಯೂಬ್‌ನಲ್ಲಿ ವೀಡಿಯೋ ಪೋಸ್ಟ್ ಮಾಡಿದ್ದ. ಈ ವೀಡಿಯೋ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಈತನ ಕೃತ್ಯದ ಬಗ್ಗೆ ವ್ಯಾಪಕ ಆಕ್ರೋಶ ಕೇಳಿ ಬಂದಿತ್ತು. ಇದಾದ ನಂತರ ವಿಚಾರ ತಿಳಿದ ಪೊಲೀಸರು ಆತನ ವಿರುದ್ಧ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಮನೆಯ ಯಾವ ದಿಕ್ಕಿಗೆ ನವಿಲು ಗರಿಗಳನ್ನು ಇಡುವುದರಿಂದ ಆರ್ಥಿಕ ಲಾಭವಾಗುತ್ತೆ ಗೊತ್ತಾ?
ಈತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ರೀತಿ ಕೃತ್ಯವೆಸಗುವ ಯಾರೇ ಆಗಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜಣ್ಣ ಸಿರಿಸಿಲ್ಲಾ ಜಿಲ್ಲೆಯ ಎಸ್‌ಪಿ ಅಖಿಲ್ ಮಹಾಜನ್ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರಕರಣ ದಾಖಲಾದ ನಂತರ ಈ ವೀಡಿಯೋವನ್ನು ಯೂಟ್ಯೂಬ್‌ನಿಂದ ಡಿಲೀಟ್ ಮಾಡಲಾಗಿದೆ. ಹಾಗೆಯೇ ಯೂಟ್ಯೂಬರ್ ಪ್ರಣಯ್‌ನನ್ನು ಬಂಧಿಸಿದ ಅರಣ್ಯ ಇಲಾಖೆ ಪೊಲೀಸರು ಆತ ಕೃತ್ಯವೆಸಗಿದ ಸ್ಥಳ ಮಹಜರು ಮಾಡಿದ್ದಾರೆ. ಅಲ್ಲದೇ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವುದಕ್ಕಾಗಿ ಕೆಲ ಮಾದರಿಗಳನ್ನು ಸ್ಥಳದಿಂದ ಸಂಗ್ರಹಿಸಿದ್ದಾರೆ.
ಯೂಟ್ಯೂಬರ್‌ನ ರಕ್ತದ ಮಾದರಿ ಹಾಗೂ ನವಿಲು ಸಾಂಬಾರ್‌ನ ಕೆಲ ಭಾಗಗಳನ್ನು ಕೂಡ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.
ಬೆಳಗಾವಿಯಲ್ಲಿ ವಿಷದ ಬೀಜ ಹಾಕಿ ರಾಷ್ಟ್ರಪಕ್ಷಿ ನವಿಲುಗಳನ್ನು ಕೊಂದ ಕಿರಾತಕರು! ಶಿಕ್ಷೆ ಏನು ಗೊತ್ತಾ?