ನಿಜಾಮಾಬಾದ್(ಏ.06)‌: ತೆಲಂಗಾಣದ ನಿಜಾಮಾಬಾದ್‌ ಜಿಲ್ಲೆಯ ಹನಮ್‌ಜಿತ್‌ಪೇಟ್‌ ಗ್ರಾಮದಲ್ಲಿ ನಡೆದ ವಿವಾಹ ಸಮಾರಂಭವೊಂದು ಬರೋಬ್ಬರಿ 87 ಮಂದಿಗೆ ಸೋಂಕು ಹರಡಲು ಕಾರಣವಾಗಿದೆ.

ವಿವಾಹಕ್ಕೆ ಒಟ್ಟು 370 ಮಂದಿ ಭಾಗವಹಿಸಿದ್ದು, ಎಲ್ಲರೂ ಕೊರೋನಾ ಪರೀಕ್ಷೆಗೆ ಒಳಪಟ್ಟಿದ್ದರು. ಈ ವೇಳೆ 87 ಮಂದಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರನ್ನು ಕ್ವಾರಂಟೈನ್‌ ಮಾಡಲಾಗಿದೆ.

ಮದುವೆಗೆ ಆಗಮಿಸಿದ್ದ ಪಕ್ಕರ ಊರಿನವರಲ್ಲೂ ಕೋವಿಡ್‌ ಸೋಂಕು ಪತ್ತೆಯಾಗಿದೆ. ಈ ನಡುವೆ ನಿಜಾಮಾಬಾದ್‌ನಲ್ಲಿ 24 ತಾಸಿನಲ್ಲಿ 96 ಕೋವಿಡ್‌ ಕೇಸ್‌ ಪತ್ತೆಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಲಾಕ್‌ಡೌನ್‌ ವಿಧಿಸಿದ್ದಾರೆ.