ಎಬಿವಿಪಿ ವಿದ್ಯಾರ್ಥಿನಿ ಕೂದಲು ಹಿಡಿದು ಎಳೆದೊಯ್ದ ಮಹಿಳಾ ಪೊಲೀಸರು: ವಿಡಿಯೋ ವೈರಲ್; ಬಿಜೆಪಿ, ಬಿಆರ್‌ಎಸ್ ಆಕ್ರೋಶ
ವಿಡಿಯೋ ವೈರಲ್ ಆದ ಕೂಡಲೇ, ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹಾಗೂ ಮಾನವ ಹಕ್ಕುಗಳ ಆಯೋಗವನ್ನು ಈ ವಿಷಯವನ್ನು ಪರಿಶೀಲಿಸುವಂತೆ ಮನವಿ ಮಾಡಿದೆ.
ಹೈದರಾಬಾದ್ (ಜನವರಿ 25, 2024): ತೆಲಂಗಾಣದಲ್ಲಿ ಆಘಾತಕಾರಿ ವಿಡಿಯೋವೊಂದು ಹೊರಬಿದ್ದಿದ್ದು, ಇಬ್ಬರು ಮಹಿಳಾ ಪೊಲೀಸರು ಪ್ರತಿಭಟನಾನಿರತ ವಿದ್ಯಾರ್ಥಿನಿಯನ್ನು ಆಕೆಯ ಕೂದಲಲ್ಲಿ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿದೆ. ವಿದ್ಯಾರ್ಥಿನಿಯು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರ್‌ಎಸ್‌ಎಸ್) ನಂಟು ಹೊಂದಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯನಾಗಿದ್ದು, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಳು ಎಂದು ವರದಿಯಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ದೃಶ್ಯಾವಳಿಗಳ ಪ್ರಕಾರ, ಇಬ್ಬರು ಮಹಿಳಾ ಪೊಲೀಸರು ಸ್ಕೂಟರ್‌ನಲ್ಲಿ ಯುವ ಕಾಲೇಜು ವಿದ್ಯಾರ್ಥಿನಿ ಓಡುತ್ತಿರುವಾಗ ಹಿಂಬಾಲಿಸಿದ್ದಾರೆ. ಅವಳು ಕೆಲವು ಹೆಜ್ಜೆ ಓಡುತ್ತಿರುವಾಗ ವಾಹನದಲ್ಲಿ ಹಿಂದೆ ಸವಾರಿ ಮಾಡುತ್ತಿದ್ದ ಪೊಲೀಸ್ ಮಹಿಳೆ ಅಕೆಯ ಕೂದಲನ್ನು ಹಿಡಿದು ರಸ್ತೆಯಲ್ಲಿ ಬೀಳುವಂತೆ ಮಾಡುತ್ತಾಳೆ.
ಪ್ರಿಯತಮನಿಗೆ 108 ಬಾರಿ ಇರಿದು ಕೊಂದ್ರೂ ಜೈಲು ಶಿಕ್ಷೆಯಿಂದ ಪಾರಾದ ಮಹಿಳೆ! ಕಾರಣ ಇಲ್ಲಿದೆ..
ತೆಲಂಗಾಣ ರಾಜ್ಯ ಕೃಷಿ ವಿಶ್ವವಿದ್ಯಾನಿಲಯದ (ಪಿಜೆಟಿಎಸ್‌ಎಯು) ಪ್ರಾಧ್ಯಾಪಕ ಜಯಶಂಕರ್ ಅವರಿಗೆ ಸೇರಿದ ಜಾಗವನ್ನು ನೂತನ ಹೈಕೋರ್ಟ್ ಸಂಕೀರ್ಣ ನಿರ್ಮಿಸಲು ಮಂಜೂರು ಮಾಡುವ ನಿರ್ಧಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದ ತೆಲಂಗಾಣ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು..
.
ಕಠಿಣ ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ, ಬಿಆರ್‌ಎಸ್
ವಿಡಿಯೋ ವೈರಲ್ ಆದ ಕೂಡಲೇ, ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹಾಗೂ ಮಾನವ ಹಕ್ಕುಗಳ ಆಯೋಗವನ್ನು ಈ ವಿಷಯವನ್ನು ಪರಿಶೀಲಿಸುವಂತೆ ಮನವಿ ಮಾಡಿದೆ.
ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ಪೊಲೀಸಪ್ಪ; ದೂರು ದಾಖಲಾಗ್ತಿದ್ದಂತೆ ನಾಪತ್ತೆ!
ಇನ್ನು, ವಿದ್ಯಾರ್ಥಿಗಳು ಮತ್ತು ಮಹಿಳೆಯರ ಬಗ್ಗೆ ಕಾಂಗ್ರೆಸ್ ವರ್ತನೆಯ ಬಗ್ಗೆ ರಾಹುಲ್ ಗಾಂಧಿಯನ್ನು ಪ್ರಶ್ನಿಸಿದ ಆಂಧ್ರಪ್ರದೇಶದ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಷ್ಣುವರ್ಧನ್ ರೆಡ್ಡಿ ಅವರು ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಬರೆದಿದ್ದಾರೆ, ನಾನು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸುತ್ತೇನೆ ಮತ್ತು ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಈ ಸಂಬಂಧ ಹಸ್ತಕ್ಷೇಪ ಮಾಡುವಂತೆ ವಿನಂತಿಸುತ್ತೇನೆ ಎಂದಿದ್ದರೆ. ಅವರು ತಮ್ಮ ಪೋಸ್ಟ್‌ನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಟ್ಯಾಗ್ ಮಾಡಿದ್ದು, ಅಲ್ಲಿ ಅವರು ತೆಲಂಗಾಣ ಪೊಲೀಸರ ಅಸಭ್ಯ ಕೃತ್ಯದ ವಿಡಿಯೋ ಹಂಚಿಕೊಂಡಿದ್ದಾರೆ.
ತೆಲಂಗಾಣ ಪೊಲೀಸರನ್ನು ಒಳಗೊಂಡ ಇತ್ತೀಚಿನ ಘಟನೆಯು ಸ್ವೀಕಾರಾರ್ಹವಲ್ಲ ಎಂದು ಬಿಆರ್‌ಎಸ್‌ನ ನಾಯಕಿ ಮತ್ತು ತೆಲಂಗಾಣ ಮಾಜಿ ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ. ಕವಿತಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ದುರಹಂಕಾರದ ನಡವಳಿಕೆಯ ವಿರುದ್ಧ ತೆಲಂಗಾಣ ಪೊಲೀಸರು ಬೇಷರತ್ ಕ್ಷಮೆಯಾಚಿಸಬೇಕು ಎಂದೂ ಅವರು ಹೇಳಿದರು.