ಭಾರತಕ್ಕೆ ಬಂದ ಡ್ರೋನ್ ಬೇಟೆಯಾಡುವ ಹದ್ದುಗಳು; ತೆಲಂಗಾಣ ಪೊಲೀಸರಿಂದ ವಿಶೇಷ ತರಬೇತಿ!

ತೆಲಂಗಾಣ ಪೊಲೀಸರು ಡ್ರೋನ್‌ಗಳನ್ನು ಹೊಡೆದುರುಳಿಸಲು ಹದ್ದು ಮತ್ತು ಗಿಡುಗಗಳಿಗೆ ತರಬೇತಿ ನೀಡುತ್ತಿದ್ದಾರೆ. ವಿಐಪಿ ಮತ್ತು ವಿವಿಐಪಿ ಭೇಟಿಗಳ ಸಮಯದಲ್ಲಿ ಭದ್ರತೆಯನ್ನು ಹೆಚ್ಚಿಸಲು ಈ ಪಕ್ಷಿಗಳನ್ನು ಬಳಸಿಕೊಳ್ಳಲಾಗುತ್ತದೆ. ಈ ತರಬೇತಿ ಪಡೆದ ಪಕ್ಷಿಗಳನ್ನು ಗರುಡ ಪಡೆಗೆ ಸೇರಿಸಲಾಗಿದೆ.

Telangana Police Garuda Squad Trains Raptors to Hunt Rogue Drones sat

ಹೈದರಾಬಾದ್ (ಫೆ.16): ಭಾರತದಲ್ಲಿ ಮೊದಲ ಬಾರಿಗೆ ತೆಲಂಗಾಣ ಪೊಲೀಸರ ಗರುಡ ಪಡೆಗೆ ಹದ್ದು, ಗಿಡುಗ ಸೇರಿದಂತೆ ಇತರೆ ಜಾತಿಯ ಪಕ್ಷಿಗಳನ್ನು ಸೇರಿಸಲಾಗಿದೆ. ಹದ್ದು, ಗಿಡುಗ ಸೇರಿದಂತೆ ಕೆಲವಯ ಜಾತಿಯ ಪಕ್ಷಿಗಳಿಗೆ ತರಬೇತಿ ನೀಡಿ ಅವುಗಳಿಗೆ ಡ್ರೋನ್‌ಗಳನ್ನು ಬೇಟೆಯಾಡಿ ಹೊಡೆದುರುಳಿಸುವ ತರಬೇತಿಯನ್ನು ನೀಡಲಾಗುತ್ತದೆ. ರಾಜ್ಯದಲ್ಲಿ ವಿಐಪಿ, ವಿವಿಐಪಿ ಭೇಟಿ ವೇಳೆ ಡ್ರೋನ್‌ಗಳಿಂದ ಭದ್ರತೆಗೆ ಸಮಸ್ಯೆ ಉಂಟಾಗುವುದನ್ನು ತಡೆಗಟ್ಟಲು ಹದ್ದುಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ತೆಲಂಗಾಣ ಪೊಲೀಸರು ತಿಳಿಸಿದ್ದಾರೆ.

ಹೈದರಾಬಾದ್ ನಗರದ ಮೊಯಿನಾಬಾದ್‌ನ ಇಂಟಿಗ್ರೇಟೆಡ್ ಇಂಟೆಲಿಜೆನ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ (ಐಐಟಿಎ) ತರಬೇತಿ ನೀಡಲಾಗುತ್ತಿದೆ. ಡ್ರೋನ್‌ಗಳ ವಿರುದ್ಧದ ಭದ್ರತಾ ಕ್ರಮಗಳು ಮತ್ತು ಕಣ್ಗಾವಲು ಅಗತ್ಯಗಳಿಗಾಗಿ ಇವುಗಳನ್ನು ಬಳಸಲಾಗುತ್ತದೆ. ರಾಜ್ಯದಲ್ಲಿ ವಿಐಪಿ, ವಿವಿಐಪಿ ಭೇಟಿ ವೇಳೆ ಡ್ರೋನ್ (ಯುಎವಿ) ಹಾರಾಟದಿಂದ ಭದ್ರತಾ ಬೆದರಿಕೆ ಉಂಟಾಗುವ ಸಂದರ್ಭದಲ್ಲಿ ಹದ್ದುಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ತೆಲಂಗಾಣ ಪೊಲೀಸರು ತಿಳಿಸಿದ್ದಾರೆ.

ದೇಶದಲ್ಲಿ ಮೊದಲ ಬಾರಿಗೆ ಇಂತಹ ಪಡೆಯನ್ನು ಪರಿಚಯಿಸಿದ್ದು ತೆಲಂಗಾಣ. ಜಾಗತಿಕ ಮಟ್ಟದಲ್ಲಿ ಭದ್ರತಾ ಉದ್ದೇಶಗಳಿಗಾಗಿ ಹದ್ದು ಮತ್ತು ಗಿಡುಗಗಳನ್ನು ಸಾಕಣೆ ಮತ್ತು ನಿಯೋಜಿಸುವಲ್ಲಿ ನೆದರ್‌ಲ್ಯಾಂಡ್ಸ್ ನಂತರ ಎರಡನೇ ಸ್ಥಾನದಲ್ಲಿದೆ ತೆಲಂಗಾಣ. ಇಲ್ಲಿ ಒಟ್ಟು 5 ಜಾತಿಯ ಪಕ್ಷಿಗಳಿಗೆ ಡ್ರೋನ್‌ಗಳ ವಿರುದ್ಧ ಹೋರಾಡಲು ಮೊದಲು ಯಶಸ್ವಿಯಾಗಿ ತರಬೇತಿ ನೀಡಲಾಗಿತ್ತು. ತರಬೇತಿ ಪಡೆದ ಪಕ್ಷಿಗಳನ್ನು ಅಗತ್ಯವಿರುವಲ್ಲೆಲ್ಲಾ ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈಗ ಹೆಚ್ಚಿನ ಪಕ್ಷಿಗಳನ್ನು ಗರುಡ ಪಡೆಗೆ ಸೇರಿಸಲಾಗುತ್ತಿದೆ.

ಇದನ್ನೂ ಓದಿ: ಇಡೀ ಒಂಟೆಯನ್ನೇ ರೋಸ್ಟ್ ಮಾಡಿ ಅತಿಥಿಗಳಿಗೆ ಉಪಚಾರ: ಪಾಕಿಸ್ತಾನದ ಮದುವೆ ವೀಡಿಯೋ ವೈರಲ್

ನಾವು ಪಕ್ಷಿಗಳ ಕಾಲಿಗೆ ವಿಶೇಷ ಬಲೆ ಕಟ್ಟುತ್ತೇವೆ. ಈ ಬಲೆಯಲ್ಲಿ ಡ್ರೋನ್‌ನ ರೆಕ್ಕೆಗಳು ಸಿಕ್ಕಿಹಾಕಿಕೊಳ್ಳುತ್ತವೆ. ನಂತರ, ಈ ಪಕ್ಷಿಗಳು ಡ್ರೋನ್ ಅನ್ನು ನಿಷ್ಕ್ರಿಯಗೊಳಿಸಲು ಜನವಸತಿಯಿಲ್ಲದ ಸ್ಥಳಕ್ಕೆ ಕೊಂಡೊಯ್ಯುತ್ತದೆ. ಹೀಗೆ ಡ್ರೋನ್ ಬೇಟೆಗೆ ಪಕ್ಷಿಗಳನ್ನು ಬಳಸಲಾಗುತ್ತದೆ ಎಂದು ಪೊಲೀಸರು ಹೇಳಿದರು. ಇನ್ನು ಪಕ್ಷಿಗಳಿಗೆ ತರಬೇತಿ ವೇಳೆ ಗಾಯಗಳಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

 
 
 
 
 
 
 
 
 
 
 
 
 
 
 

A post shared by NewsX (@newsxofficial)

ಈ ಮೂಲಕ ಭದ್ರತಾ ಕಣ್ಗಾವಲಿಗೂ ಪಕ್ಷಿಗಳನ್ನು ಬಳಸಲಾಗುತ್ತಿದೆ. ಪಕ್ಷಿಗಳ ಕಾಲಿಗೆ ಸಣ್ಣ ಹೈ ಡೆಫಿನಿಷನ್ ಕ್ಯಾಮೆರಾ ಅಳವಡಿಸಿ ಅದನ್ನು ಲ್ಯಾಪ್‌ಟಾಪ್‌ಗೆ ಸಂಪರ್ಕಿಸಿ ಕಣ್ಗಾವಲು ನಡೆಸಲಾಗುತ್ತದೆ. ಹದ್ದುಗಳನ್ನು ಈ ಕೆಲಸಕ್ಕೆ ನಿಯೋಜಿಸಲಾಗಿದೆ. ಇದರಿಂದ ಹೈದರಾಬಾದ್‌ನಲ್ಲಿ ವಿವಿಐಪಿ ಭದ್ರತೆಗಳಿಗಾಗಿ ಎತ್ತರ ಪ್ರದೇಶದಲ್ಲಿ ಕಾವಲು ಕುಳಿತು ವೀಕ್ಷಣೆ ಮಾಡುವುದರ ಅಗತ್ಯತೆ ಕಡಿಮೆ ಆಗಲಿದೆ. ಹದ್ದುಗಳು ಉತ್ತಮವಾಗಿ ತರಬೇತಿಯನ್ನು ಪಡೆದುಕೊಂಡಿದ್ದು, ಪೊಲೀಸ್ ಇಲಾಖೆಗೆ ನೆರವಾಗುತ್ತಿವೆ ಎಂದು ತಿಳಿಸಿದರು.

ಇದನ್ನೂ ಓದಿ: ರಷ್ಯಾದ ಬಿಯರ್ ಬಾಟಲಿ ಮೇಲೆ ಗಾಂಧೀಜಿ ಹೆಸರು, ಭಾವಚಿತ್ರ ಬಳಕೆ: ಗಾಂಧಿ ಅಭಿಮಾನಿಗಳಿಂದ ಭಾರೀ ಆಕ್ರೋಶ!

Latest Videos
Follow Us:
Download App:
  • android
  • ios