ತೆಲಂಗಾಣ ಮುಖ್ಯ ಕಾರ್ಯದರ್ಶಿಯಿಂದ ಸುತ್ತೋಲೆ ಜಾರಿ ಬೇಗನೆ ಮನಗೆ ತೆರಳಲು ಸರ್ಕಾರಿ ಉದ್ಯೋಗಿಗಳಿಗೆ ಅವಕಾಶ ಎಪ್ರಿಲ್ 2 ರಿಂದ ಮೇ 2ರವರೆಗೆ ಒಂದು ತಿಂಗಳ ಕಾಲ ಅವಕಾಶ
ಹೈದರಾಬಾದ್(ಏ.01): ಮುಸ್ಲಿಮ್ ಸಮುದಾಯದ ರಂಜಾನ್ ಆಚರನೆ ಎಪ್ರಿಲ್ 2 ರಿಂದ ಆರಂಭಗೊಳ್ಳುತ್ತಿದೆ. ಮೇ.2ರ ವರೆಗೆ ಆಚರಿಸುವ ಮುಸ್ಲಿಮರ ಪವಿತ್ರ ಹಬ್ಬ ರಂಜಾನ್‌ಗೆ ತೆಲಂಗಾಣ ಸರ್ಕಾರ ಭರ್ಜರಿ ಆಫರ್ ಘೋಷಿಸಿದೆ. ತೆಲಂಗಾಣ ಸರ್ಕಾರದ ಮುಸ್ಲಿಮ್ ಉದ್ಯೋಗಿಗಳು ಬಹುಬೇಗನೆ ಮನೆಗೆ ತೆರಳಲು ಅವಕಾಶ ನೀಡಿದೆ.
ತೆಲಂಗಾಣ ಸರ್ಕಾರದ ಎಲ್ಲಾ ಮುಸ್ಲಿಮ್ ನೌಕರರು, ಕಾಂಟ್ರಾಕ್ಟ್ ಉದ್ಯೋಗಿಗಳು, ಹೊರ ಗುತ್ತಿಗೆ ಉದ್ಯೋಗಿಗಳು ಸೇರಿದಂತೆ ಎಲ್ಲಾ ಸರ್ಕಾರಿ ಉದ್ಯೋಗಿಗಳು ರಂಜಾನ್ ಅವಧಿಯಲ್ಲಿ ಬೇಗನೆ ಮನೆಗೆ ತೆರಳಲು ಅವಕಾಶ ನೀಡಿದೆ.ಸಂಜೇ 4 ಗಂಟೆಗೆ ಕೆಲಸ ನಿಲ್ಲಿಸಿ ಮನೆಗೆ ತೆರಳಲು ಅವಕಾಶ ನೀಡಲಾಗಿದೆ. ಶಾಲೆಗಳು ಕೂಡ ಸಂಜೆ 4ರ ವರೆಗೆ ಮಾತ್ರ ಇರಲಿದೆ ಎಂದು ತೆಲಂಗಾಣ ಸರ್ಕಾರ ಅವಕಾಶ ನೀಡಿದೆ.
Expensive camel ಈದ್ ಹಬ್ಬದ ಪ್ರಯುಕ್ತ ಒಂಟೆ ಹರಾಜು, ಬರೋಬ್ಬರಿ 14 ಕೋಟಿ ರೂಗೆ ಮಾರಾಟ!
ಈ ಕುರಿತು ತೆಲಂಗಾಣ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ. ಇದೀಗ ಸುತ್ತೋಲೆ ವಿವಾದಕ್ಕೂ ಕಾರಣವಾಗಿದೆ. ಕೆಲ ಹಿಂದೂ ಪರ ಸಂಘಟನೆಗಳ ನಾಯಕರು ಅಸಮಧಾನ ಹೊರಹಾಕಿದ್ದಾರೆ. ಮುಸ್ಲಿಮ್ ಉದ್ಯೋಗಿಗಳಿಗೆ ಬಹುಬೇಗನೆ ಮನೆಗೆ ತೆರಳಲು ಅವಕಾಶ ನೀಡಿರುವುದರ ಕುರಿತು ಯಾವುದೇ ತಕರಾರಿಲ್ಲ. ಆದರೆ ಶಾಲೆಗಳನ್ನು 4 ಗಂಟೆಗೂ ಮೊದಲೇ ಮುಚ್ಚುವ ನಿರ್ಧಾರ ಸರಿಯಲ್ಲ ಎಂದಿದ್ದಾರೆ.
ತೆಲಂಗಾಣದಲ್ಲಿನ ಹೊಸ ಸುತ್ತೋಲೆ ಇದೀಗ ಮುಸ್ಲಿಮ್ ಉದ್ಯೋಗಿಗಳಿಗೆ ಅನೂಕೂಲ ಮಾಡಿಕೊಡಲಿದೆ. ಉಪವಾಸದಿಂದ ಇರುವ ಉದ್ಯೋಗಿಗಳು ಬಹುಬೇಗನೆ ಮನಗೆ ಮರಳಿ ವಿಶ್ರಾಂತಿ ಪಡೆಯಬಹುದು ಎಂದು ಮುಸ್ಲಿಮ್ ನಾಯಕರು ಹೇಳಿದ್ದಾರೆ. ಇತರ ರಾಜ್ಯಗಳು ಈ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದೆ.
Hijab Row: 'ಶುಕ್ರವಾರ, ರಂಜಾನ್ ಮಾಸದಲ್ಲಾದರೂ ಹಿಜಾಬ್‌ಗೆ ಅವಕಾಶ ಕೊಡಿ
ರಂಜಾನ್ ತಿಂಗಳಿನಲ್ಲಿ ಪ್ರತಿದಿನ 2 ಬಾರಿ ಪ್ರಾರ್ಥನೆ ವ್ಯವಸ್ಥೆ
ನಗರದ ವಿನೋಬಾ ರಸ್ತೆ ಶಿವರಾಂಪೇಟೆಯಲ್ಲಿನ ಹಾಲಿ ಮೆಮೂನ್ ಜಮಾತ್ ಮಸೀದಿಯಲ್ಲಿ ಇಸ್ಲಾಮಿಕ್ 1443 ಹಿಜರಿ ರಂಜಾನ್ ತಿಂಗಳು ಏ.3 ರಂದು ಪ್ರಾರಂಭವಾಗಲಿದೆ. ಈ ರಂಜಾನ್ ತಿಂಗಳಿನಲ್ಲಿ ಪ್ರತಿದಿನ 2 ಬಾರಿ ಅಂದರೆ ಜುಹರ್ ಮತ್ತು ಅಸರ್ ಪ್ರಾರ್ಥನೆಗಳನ್ನು ಏರ್ಪಡಿಸಲಾಗಿದೆ ಎಂದು ಮಸೀದಿಯ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಮನ್ಸೂರ್ ಮಜೀದ್ ಸೇಟ್ ಕುಶಾಲಿ ತಿಳಿಸಿದ್ದಾರೆ. ಜುಹರ್ ಪ್ರಾರ್ಥನೆ: ಮೊದಲನೇ ಜಮಾತ್ ಮಧ್ಯಾಹ್ನ 1.30, ಎರಡನೇ ಜಮಾತ್ ಮಧ್ಯಾಹ್ನ 2.15ಕ್ಕೆ ಹಾಗೂ ಅಸರ್ ಪ್ರಾರ್ಥನೆ: ಮೊದಲನೇ ಜಮಾತ್ ಸಂಜೆ 5.15 ಮತ್ತು ಎರಡನೇ ಜಮಾತ್ ಸಂಜೆ 5.45ಕ್ಕೆ ನಡೆಯಲಿದೆ. ಪ್ರತಿದಿನ ರಾತ್ರಿ 9ಕ್ಕೆ ಇಶಾ ಪ್ರಾರ್ಥನೆ ಸಲ್ಲಿಸಲಾಗುವುದು. ಉಪವಾಸ ಇರುವವರಿಗಾಗಿ ಪ್ರತಿದಿನ ಸಂಜೆ ಮಗ್ರಿಬ್ ಪ್ರಾರ್ಥನೆಯ ಸಮಯದಲ್ಲಿ ಇಫ್ತಾರ್ ಅನ್ನು ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪವಿತ್ರ ರಂಜಾನ್ ಮಾಸವು ವೃತ್ತ ಅನುಷ್ಠಾನದೊಂದಿಗೆ ದಾನ, ಧರ್ಮಗಳ ಹಾಗೂ ಒಳಿತುಗಳ ಮೂಲಕ ಆತ್ಮವನ್ನು ಬೆಳಗಿಸುವ ಪುಣ್ಯಮಾಸ ರಂಜಾನ್ ಆಗಿದೆ ಎಂದು ಸುನ್ನಿ ಸ್ಟುಡೆಂಟ್ಸ್ ಫೆಡರೇಷನ್ ರಾಷ್ಟ್ರೀಯ ನಾಯಕ ಹಾಗೂ ಮಸ್ ದರ್ ಎಜ್ಯು ಆ್ಯಂಡ್ ಚಾರಿಟಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಫೀಝ್ ಮೊಹಮ್ಮದ್ ಸುಫ್ಯಾನ್ ಸಖಾಫಿ ಕಾವಳಕಟ್ಟೆಹೇಳಿದರು.
