Ramzan Row: ತೆಲಂಗಾಣ ಸರ್ಕಾರದಿಂದ ಮುಸ್ಲಿಂ ನೌಕರರಿಗೆ 1 ಗಂಟೆ ರಂಜಾನ್ ಬ್ರೇಕ್, ನವರಾತ್ರಿ ಉಪವಾಸಕ್ಕೆ ಏಕಿಲ್ಲ ? ಬಿಜೆಪಿ ಕಿಡಿ

Ramzan Row: ರಂಜಾನ್‌ ಮಾಸದಲ್ಲಿ ಮುಸ್ಲಿಂ ಉದ್ಯೋಗಿಗಳಿಗೆ ಸಂಜೆ 4 ಗಂಟೆಗೆ ಕೆಲಸದಿಂದ ತೆರಳಲು ತೆಲಂಗಾಣ ಸರ್ಕಾರ ಅವಕಾಶ ನೀಡಿದೆ. ಈ ಕ್ರಮವನ್ನು ಬಿಜೆಪಿ ಟೀಕಿಸಿದ್ದು, ತುಷ್ಟೀಕರಣ ಎಂದು ಆರೋಪಿಸಿದೆ.

Telangana govt to allow Muslim employees to leave offices early during Ramzan bjp outraged rav

ಹೈದರಾಬಾದ್‌ (ಫೆ.19): ರಂಜಾನ್‌ ಸಮಯದಲ್ಲಿ ಮುಸ್ಲಿಂ ಉದ್ಯೋಗಿಗಳು ಕಚೇರಿಯಿಂದ 1 ಗಂಟೆ ಮುಂಚೆ ತೆರಳಬಹುದು ಎಂದು ತೆಲಂಗಾಣ ಸರ್ಕಾರ ಆದೇಶ ಹೊರಡಿಸಿದೆ.

 ಮಾರ್ಚ್‌ 2 ರಿಂದ 31 ರವರೆಗೆ ಈ ನಿಯಮವು ಜಾರಿಯಲ್ಲಿರಲಿದೆ. ಮುಸ್ಲಿಂ ಉದ್ಯೋಗಿಗಳಿಗೆ ಸಂಜೆ 5 ಗಂಟೆಯ ಬದಲು 4 ಗಂಟೆಗೆ ಕೆಲಸದಿಂದ ಬಿಡುವು ಸಿಗಲಿದೆ. ಶಿಕ್ಷಕರು, ಗುತ್ತಿಗೆ ಮತ್ತು ಹೊರ ಗುತ್ತಿಗೆ ಸಿಬ್ಬಂದಿ ಸೇರಿದಂತೆ ಎಲ್ಲ ಮುಸ್ಲಿಂ ಉದ್ಯೋಗಿಗಳಿಗೆ ಮತ್ತು ಮಂಡಳಿಗಳು, ನಿಗಮಗಳು ಮತ್ತು ಸಾರ್ವಜನಿಕ ಕೆಲಸದಲ್ಲಿ ಕೆಲಸ ಮಾಡುವ ನೌಕರರಿಗೆ ಅನ್ವಯಿಸುತ್ತದೆ. ರಂಜಾನ್ ಉಪವಾಸದ ತಿಂಗಳಿನಲ್ಲಿ ತಮ್ಮ ಧಾರ್ಮಿಕ ಕರ್ತವ್ಯಗಳು ಮತ್ತು ಪ್ರಾರ್ಥನೆಗಳನ್ನು ಬೆಂಬಲಿಸಲು ಈ ಕ್ರಮ ಎಂದು ಸರ್ಕಾರ ಹೇಳಿದೆ.

ಈ ನಡುವೆ ಸರ್ಕಾರದ ಕ್ರಮವನ್ನು ಟೀಕಿಸಿರುವ ಬಿಜೆಪಿ ಶಾಸಕ ಟಿ.ರಾಜಾ, ‘ಕಾಂಗ್ರೆಸ್‌ ಕೇವಲ ಮುಸ್ಲಿಂ ಮತಗಳನ್ನು ಅವಲಂಬಿಸಿ ಅಧಿಕಾರವನ್ನು ಗಳಿಸಿದೆ. ಇಂಥ ನಿರ್ಧಾರ ತುಷ್ಟೀಕರಣದ ರಾಜಕೀಯ ಉತ್ತುಂಗವನ್ನು ಪ್ರತಿನಿಧಿಸುತ್ತದೆ’ ಎಂದಿದ್ದಾರೆ. 

ಇದನ್ನೂ ಓದಿ: ರಂಜಾನ್ ಪ್ರಯುಕ್ತ ಮುಸ್ಲಿಮ್ ನೌಕರರಿಗೆ ವಿನಾಯಿತಿ, ಸರ್ಕಾರ ಆದೇಶದಿಂದ ವಿವಾದ

ಇನ್ನು ಬಿಜೆಪಿ ಐಟಿ ಮುಖ್ಯಸ್ಥ ಅಮಿತ್‌ ಮಾಳವಿಯ ಪ್ರತಿಕ್ರಿಯಿಸಿ ‘ನವರಾತ್ರಿಯಂತಹ ಹಬ್ಬಗಳಲ್ಲಿ ಹಿಂದೂಗಳು ಉಪವಾಸವನ್ನು ಆಚರಿಸುವಾಗ ಅಂತಹ ಯಾವುದೇ ರಿಯಾಯಿತಿ ನೀಡಲಾಗುವುದಿಲ್ಲ. ಕೇವಲ ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಒಂದು ಸಮುದಾಯದವರ ಧಾರ್ಮಿಕ ಆಚರಣೆಗಳನ್ನು ಸರ್ಕಾರ ಮಾಡುತ್ತಿದೆ. ಈ ಕ್ರಮವನ್ನು ವಿರೋಧಿಸಬೇಕು’ ಎಂದಿದ್ದಾರೆ.

Latest Videos
Follow Us:
Download App:
  • android
  • ios