ಹೈದರಾಬಾದ್ (ಜೂ. 15)   ಕೊರೋನಾ ಲಾಕ್ ಡೌನ್ ನಡುವೆ ಈ ಯುವತಿ ಡಬಲ್ ಮದುವೆಯಾಗಿದ್ದಾರೆ. ಅದು ಕೇವಲ48  ಗಂಟೆ ಅಂತರದಲ್ಲಿ! ತೆಲಂಗಾಣದ ನಲ್ಗೊಂಡ ಜಿಲ್ಲೆಯ ಪ್ರಕರಣ ಸದ್ಯ ಎಲ್ಲ ಕಡೆ ಚರ್ಚೆಯ ವಸ್ತುವಾಗಿದೆ. 

 ನಲ್ಗೊಂಡ ಜಿಲ್ಲೆಯ ಕನಗಲ್ ಪ್ರದೇಶದಲ್ಲಿ ನಡೆದಿದೆ. ಶಾಬ್ದುಲ್ಲಾಪುರ ಗ್ರಾಮದ ಮೋನಿಕಾ 48 ಗಂಟೆಯಲ್ಲಿ ಪೋಷಕರ ಮುಂದೆಯೇ ಎರಡು ಮದುವೆಯಾಗಿದ್ದು ತನ್ನ ಪ್ರೀತಿಯನ್ನು ಕೊನೆಗೂ ಪಡೆದುಕೊಂಡಿದ್ದಾಳೆ.

ಮದುವೆ ಮಾತುಕತೆ ಮುಗಿಸಿದ ಡಿಕೆಶಿ ಕುಟುಂಬ, ಪೋಟೋಗಳು

ಮೋನಿಕಾ ಕುಟುಂಬ  ಹತ್ತು ವರ್ಷಗಳಿಂದ ಕುರಂಪಲ್ಲಿನಲ್ಲಿ ವಾಸವಿದೆ.  ಮೋನಿಕಾ ವ್ಯಾಸಂಗ ಮುಗಿಸಿದ ನಂತರ ಪೋಷಕರು ಮದುವೆ ಮಾಡಲು ಹುಡುಗನನ್ನು ಹುಡುಕುತ್ತಿದ್ದರು. ದೇವರಕೊಂಡ ಗ್ರಾಮದ ಯುವಕನೊಂದಿಗೆ ಮೋನಿಕಾಳ ಮದುವೆಯನ್ನು ಪೋಷಕರು ನಿಗದಿ ಮಾಡಿದ್ದರು. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಹತ್ತಿರ ಸಂಬಂಧಿಗಳು ಮತ್ತು ಹಿರಿಯರ ಸಮ್ಮುಖದಲ್ಲಿ ವಿವಾಹ ಮಾಡಿ ಮುಗಿಸಿದ್ದರು.

ವಿವಾಹವಾದ ಬಳಿಕ ಮೋನಿಕಾ ಪತಿಯ ಮನೆಗೆ ಹೋಗಲು ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಳ್ಳುತ್ತಿದ್ದ ಸಂದರ್ಭ ಮೋನಿಕಾಳ ಗೆಳೆಯ ರಾಜೇಶ್  ಸ್ಥಳಕ್ಕೆ ಬಂದಿದ್ದಾನೆ. ಅವನನ್ನು ನೋಡಿದ ತಕ್ಷಣ ಓಡಿ ಹೋಗಿ ತಬ್ಬಿಕೊಂಡು ಕಣ್ಣೀರು ಹಾಕಿದ್ದಾಳೆ. ಇದನ್ನು ನೋಡಿ ಕೋಪಗೊಂಡ ವರ ನನಗೆ ಮೋಸ ಆಗಿದೆ ಎಂದು ಪೊಲೀಸರ ಬಳಿ ತೆರಳಿದ್ದಾನೆ.

ಪೊಲೀಸರು ಮಾತುಕತೆ ಮುಖೇನ ಇದನ್ನು ಬಗೆಹರಿಸಿಕೊಳ್ಳಿ ಎಂಬ ಸಲಹೆ ನೀಡಿದ್ದಾರೆ.  ಇದಾದ ಮೇಲೆ ಒಂದು ತೀರ್ಮಾನಕ್ಕೆ ಬಂದ ಊರ ಹಿರಿಯರು ಮತ್ತು ಕುಟುಂಬದವರು ರಾಜೇಶ್ ನೊಂದಿಗೆ ಮೋನಿಕಾರ ಮದುವೆ ಮಾಡಲು ತೀರ್ಮಾನಿಸಿದ್ದಾರೆ. ಅದೆ ದಿನ ಮದುವೆಯನ್ನು ನೆರವೇರಿಸಿದ್ದು ನವಜೋಡಿ ಇದೀಗ ಸಂತಸದಿಂದಿದೆ.