ಹೈದರಾಬಾದ್(ಜೂ.03): ಅತ್ತೆ-ಸೊಸೆಯರ ಜಗಳ ನಡೆಯೋದು ಹೊಸದೇನೂ ಅಲ್ಲ. ಹಿಂದೆಯೂ ನಡೆದಿತ್ತು, ಈಗಲೂ ನಡೆಯುತ್ತಿದೆ, ಇದು ಮುಂದುವರಿಯೋದರಲ್ಲೂ ಡೌಟೇ ಇಲ್ಲ. ಆದರೆ ಇಲ್ಲೊಬ್ಬ ಸಿಟ್ಟಾದ ಅತ್ತೆ ಮಾಡಿದ ಮೂರ್ಖತನದಿಂದ ಸೊಸೆಯೂ ಈಗ ಕೊರೋನಾ ಸೋಂಕಿತಳಾಗಿದ್ದಾಳೆ.

ಸೋಂಕಿತ ಅತ್ತೆಯಿಂದ ದೂರ ಉಳಿಯುತ್ತಿರುವುದಕ್ಕೆ ಸಿಟ್ಟಾದ ಅತ್ತೆ ಬಲವಂತವಾಗಿ ಸೊಸೆಯನ್ನು ಗಟ್ಟಿ ತಬ್ಬಿಕೊಂಡ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. 20 ಆಸುಪಾಸಿನಲ್ಲಿರೋ ಸೊಸೆಗೆ ಕೊರೋನಾ ಪಾಸಿಟಿವ್ ದೃಢಪಟ್ಟಾಗ ಆಕೆಯನ್ನು ಮನೆಯಿಂದ ಹೊರ ಹಾಕಲಾಗಿದೆ. ಈ ಘಟನೆ ಸೋಮಾರಿಪೇಟ ಗ್ರಾಮದಲ್ಲಿ ನಡೆದಿದೆ.

ವ್ಯಾಕ್ಸೀನ್ ಕಾಂಟ್ರಾಕ್ಟ್ ಯಾರಿಗೆ ಸಿಕ್ತು ಎಂದು ಕೇಳಿದ್ದಕ್ಕೆ ನಿಮ್ಮಪ್ಪನಿಗೆ ಎಂದ ಮೇಯರ್...

ಮೇ 29ರಂದು ಯುವತಿಯನ್ನು ರಾಜಣ್ಣ ಸಿರ್ಸಿಲ ಜಿಲ್ಲೆಯಲ್ಲಿರುವ ತವರು ಮನೆಗೆ ಕರೆತರಲಾಗಿದೆ. ಬೇಸತ್ತ ಸೊಸೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಮೇ 31ರಂದು ಈಕೆಯ ಮನೆಗೆ ಬಂದ ಆರೋಗ್ಯಾಧಿಕಾರಿಗಳಲ್ಲಿಯೂ ಯುವತಿ ಇದನ್ನೇ ಹೇಳಿದ್ದಾರೆ.

ಅತ್ತೆಗೆ ಪಾಸಿಟಿವ್ ಬಂದ ಮೇಲೆ ನಾನು ಅಂತರ ಕಾಯ್ದುಕೊಳ್ಳುತ್ತಿದ್ದಕ್ಕೆ ಆಕೆ ಸಿಟ್ಟಾಗಿದ್ದಾಳೆ ಎಂದಿದ್ದಾರೆ ಸೊಸೆ. ಯುವತಿ ತನ್ನ ಪುಟ್ಟ ಮಕ್ಕಳನ್ನೂ ಸೋಂಕಿತ ಅಜ್ಜಿ ಬಳಿ ಬಿಡುತ್ತಿರಲಿಲ್ಲ, ಹಾಗೆಯೇ ಸೋಂಕಿತೆಗೆ ಆಹಾರವನ್ನೂ ನಿಗದಿತ ಸ್ಥಳದಲ್ಲಿಡಲಾಗುತ್ತಿತ್ತು.

ಭದ್ರತಾ ಸಿಬ್ಬಂದಿಯನ್ನು ಬಿಟ್ಟು ಹೋದ BJP ಕೌನ್ಸಿಲರ್‌ ಉಗ್ರರ ಗುಂಡಿನಿಂದ ಸಾವು

ನಾನು ಸಾಯೋವಾಗ ನೀವೆಲ್ಲರೂ ಸುಖವಾಗಿ ಬಾಳಬೇಕಾ ಎಂದು ಪ್ರಶ್ನಿಸಿ ಸೊಸೆಯನ್ನು ಗಟ್ಟಿ ತಬ್ಬಿದ್ದಾಳೆ ಅತ್ತೆ. ಸೋಂಕು ಹರಡುವ ಉದ್ದೇಶದಿಂದಲೇ ಈ ರೀತಿ ಅತ್ತೆ ಮಾಡಿರುವುದು ಸಾಬೀತಾಗಿದೆ.