ಹೈದರಾಬಾದ್(ಡಿ. 21)  ಈ ದೇಶದಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆ ಮಾಡಲು ರಾಹುಲ್ ಗಾಂಧಿ ಅವರಿಂದ ಮಾತ್ರ ಸಾಧ್ಯ ಎಂದು ತೆಲಂಗಾಣ ಕಾಂಗ್ರೆಸ್ ಹೇಳಿದೆ.

ರಾಹುಲ್ ಗಾಂಧಿ ಅವರಿಗೆ ಪಕ್ಷ ಮುನ್ನಡೆಸಲು ಅವಕಾಶ ಮಾಡಿಕೊಡಬೇಕು ಎಂದು  ಹೇಳಿದೆ. ರಾಹುಲ್ ಸಹ ತಾವು ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧ  ಎಂದು ಹೇಳಿದ್ದರು. ಗೊಂದಲಗಳನ್ನು ಬಗೆಹರಿಸಲು ಸಭೆ ಕರೆದಿರುವ ಸೋನಿಯಾ ಗಾಂಧಿ ಅವರಿಗೂ ಧನ್ಯವಾದ ಸಲ್ಲಿಕೆ ಮಾಡಿದೆ.

ಮತ್ತೆ ರಾಹುಲ್ ಜಪ ಶುರುವಾಗಿದ್ದು  ಯಾಕೆ? 

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗೆ ಬರೆದ ಪತ್ರದಲ್ಲಿ ಧನ್ಯವಾದ ಸಲ್ಲಿಸಿರುವ ತೆಲಂಗಾಣ ಕಾಂಗ್ರೆಸ್, ಚಿಂತನ್ ಬೈಠಕ್ ಗೆ ಎಲ್ಲರನ್ನು ಕರೆದಿದ್ದನ್ನು ಸ್ವಾಗತ ಮಾಡಿದೆ.

ದೇಶದ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ. ಆರ್ಥಿಕ ವ್ಯವಸ್ಥೆ ಹಳ್ಳ ಹಿಡಿದಿದೆ.  ರಾಹುಲ್ ಅಧ್ಯಕ್ಷರಾದರೆ ಈ ಎಲ್ಲ ಸಮಸ್ಯೆಗಳಿಂದ ಹೊರಗೆ ತರಬಲ್ಲರು. ಪ್ರಜಾಪ್ರಭುತ್ವ ಮರುಸ್ಥಾಪನೆ ರಾಹುಲ್ ಅವರಿಂದಲೇ ಸಾಧ್ಯ ಎಂದು  ಕೊಂಡಾಡಿದೆ.