Asianet Suvarna News Asianet Suvarna News
breaking news image

ಸರ್ಜಿಕಲ್‌ ದಾಳಿ ನಡೆದಿದ್ದೇ ಡೌಟು: ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ

ಪುಲ್ವಾಮಾ ದಾಳಿ ನಡೆದಾಗ ನೀವೇನು ಮಾಡುತ್ತಿದ್ದಿರಿ? ಪುಲ್ವಾಮಾ ಘಟನೆ ಏಕೆ ನಡೆಯಿತು? ಅದನ್ನು ನಡೆಯಲು ನೀವು ಅವಕಾಶ ಕೊಟ್ಟಿದ್ದಾದರೂ ಏಕೆ? ದೇಶದ ಆಂತರಿಕ ಭದ್ರತೆ ಬಗ್ಗೆ ನೀವೇನು ಮಾಡುತ್ತಿದ್ದಿರಿ? ನೀವು ಐಬಿ, ರಾ ಮೊದಲಾದ ಸಂಸ್ಥೆಗಳನ್ನು ಏಕೆ ಬಳಸಲಿಲ್ಲ? ಅದು ನಿಮ್ಮ ವೈಫಲ್ಯ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ತೆಲಂಗಾಣದ ಮುಖ್ಯಮಂತ್ರಿ ರೇವಂತ್‌ ರೆಡ್ಡಿ 

Telangana CM Revanth Reddy Expressed Doubt about the Surgical Strike grg
Author
First Published May 12, 2024, 9:13 AM IST

ಹೈದರಾಬಾದ್‌(ಮೇ.12): 40 ಯೋಧರನ್ನು ಬಲಿ ಪಡೆದ ಪುಲ್ವಾಮಾ ಉಗ್ರ ದಾಳಿಯ ಬಳಿಕ ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ನಡೆಸಿದ ಸರ್ಜಿಕಲ್‌ ದಾಳಿಯ ಕುರಿತು ತೆಲಂಗಾಣದ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಅನುಮಾನ ವ್ಯಕ್ತಪಡಿಸಿದ್ದಾರೆ. ವಾಸ್ತವವಾಗಿ ಇಂಥದ್ದೊಂದು ಘಟನೆ ನಡೆದ ಬಗ್ಗೆ ಯಾರಿಗೂ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಂತ್‌ ರೆಡ್ಡಿ, ‘ಪುಲ್ವಾಮಾ ದಾಳಿ ನಡೆದಾಗ ನೀವೇನು ಮಾಡುತ್ತಿದ್ದಿರಿ? ಪುಲ್ವಾಮಾ ಘಟನೆ ಏಕೆ ನಡೆಯಿತು? ಅದನ್ನು ನಡೆಯಲು ನೀವು ಅವಕಾಶ ಕೊಟ್ಟಿದ್ದಾದರೂ ಏಕೆ? ದೇಶದ ಆಂತರಿಕ ಭದ್ರತೆ ಬಗ್ಗೆ ನೀವೇನು ಮಾಡುತ್ತಿದ್ದಿರಿ? ನೀವು ಐಬಿ, ರಾ ಮೊದಲಾದ ಸಂಸ್ಥೆಗಳನ್ನು ಏಕೆ ಬಳಸಲಿಲ್ಲ? ಅದು ನಿಮ್ಮ ವೈಫಲ್ಯ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ದೆಹಲಿ ಪೊಲೀಸರನ್ನು ಮೋದಿ ನನ್ನ ಮನೆಗೆ ಛೂ ಬಿಟ್ಟಿದ್ದಾರೆ: ತೆಲಂಗಾಣ ಸಿಎಂ ರೇವಂತ ರೆಡ್ಡಿ

ಜೊತೆಗೆ ‘ವಾಸ್ತವವಾಗಿ ಸರ್ಜಿಕಲ್‌ ದಾಳಿ ನಡೆದಿರುವ ಬಗ್ಗೆ ಯಾರಿಗೂ ಗೊತ್ತಿಲ್ಲ’ ಎಂದು ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ಸರ್ಜಿಕಲ್‌ ದಾಳಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios