ತೆಲಂಗಾಣದಲ್ಲಿ ಹೂಡಿಕೆ ಕುರಿತು ಅದಾನಿ ಗ್ರೂಪ್ ಜೊತೆ ಸಿಎಂ ರೇವಂತ್ ರೆಡ್ಡಿ ಮಾತುಕತೆ!
ಒಂದೆಡೆ ಕಾಂಗ್ರೆಸ್ ಹಾಗೂ ಅದರ ಮೈತ್ರಿ ಪಕ್ಷಗಳು ಅದಾನಿ ಗ್ರೂಪ್‌ನ ಮೇಲೆ ಆರೋಪಗಳ ಮೇಲೆ ಆರೋಪ ಮಾಡುತ್ತಿದ್ದರೆ, ಇನ್ನೊಂದೆಡೆ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿರುವ ರಾಜ್ಯವಾದ ತೆಲಂಗಾಣ ಅದಾನಿ ಗ್ರೂಪ್ ಜೊತೆ ಹೂಡಿಕೆ ಮಾತುಕತೆ ನಡೆಸಿದೆ.
ನವದೆಹಲಿ (ಜ.3): ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರ ಪುತ್ರ ಮತ್ತು ಅದಾನಿ ಪೋರ್ಟ್ಸ್ ಮತ್ತು SEZ ಲಿಮಿಟೆಡ್‌ನ ಸಿಇಒ ಆಗಿರುವ ಕರಣ್ ಅದಾನಿ ಮತ್ತು ಅವರ ತಂಡವು ಜನವರಿ 3ರಂದು ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಮತ್ತು ಕೈಗಾರಿಕಾ ಸಚಿವ ಡಿ ಶ್ರೀಧರ್ ಬಾಬು ಅವರನ್ನು ಭೇಟಿಯಾಗಿ ತೆಲಂಗಾಣದಲ್ಲಿನ ಸಂಭಾವ್ಯ ಹೂಡಿಕೆಯ ಬಗ್ಗೆ ಚರ್ಚೆ ಮಾಡಿದ್ದಾರೆ. ಒಂದೆಡೆ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ಅದಾನಿ ಗ್ರೂಪ್ ಮೇಲೆ ನಿರಂತರವಾಗಿ ಟೀಕಾಪ್ರಹಾರ ನಡೆಸುತ್ತಿದ್ದರೆ, ಇನ್ನೊಂದೆಡೆ ಅದಾನಿ ಗ್ರೂಪ್‌ನಿಂದಲೇ ತಾನು ಅಧಿಕಾರ ವಹಿಸಿಕೊಂಡಿರುವ ರಾಜ್ಯದಲ್ಲಿ ಹೂಡಿಕೆಯ ಬಗ್ಗೆ ಚರ್ಚೆ ಮಾಡುತ್ತಿದೆ. ರಾಜ್ಯ ಸರ್ಕಾರ ಮತ್ತು ಅದಾನಿ ಗ್ರೂಪ್ ನಡುವಿನ ಸಭೆಯು ತೆಲಂಗಾಣದಲ್ಲಿ ಬಂಡವಾಳ ಹೂಡಿಕೆಯ ಸಂಭಾವ್ಯ ಕ್ಷೇತ್ರಗಳ ಸುತ್ತ ಸುತ್ತಿದೆ ಎಂದು ವರದಿಯಾಗಿದೆ.
ಮಹಬೂಬ್‌ನಗರದಲ್ಲಿ ಕಂಪನಿಯ ಗಿಗಾ ಕಾರಿಡಾರ್ ಯೋಜನೆ ಮತ್ತು ಶಂಶಾಬಾದ್‌ನಲ್ಲಿ ಆರ್ & ಡಿ ಹಬ್ ಕುರಿತು ಅಮಾರಾ ರಾಜಾ ಕಂನಿ ತಂಡದೊಂದಿಗೆ ಮುಖ್ಯಮಂತ್ರಿಗಳ ಸಭೆಯ ನಂತರ, ಅದಾನಿ ಗ್ರೂಪ್‌ನ ಜೊತೆ ಇವರು ಚರ್ಚೆ ನಡೆಸಿದ್ದಾರೆ.