Asianet Suvarna News Asianet Suvarna News

ಇಂದು ತೆಲಂಗಾಣ ಚುನಾವಣೆ: 119 ಕ್ಷೇತ್ರಗಳಲ್ಲಿ ಏಕ ಹಂತದ ಮತದಾನ

ಬಿಆರ್‌ಎಸ್‌-ಕಾಂಗ್ರೆಸ್‌-ಬಿಜೆಪಿ ನಡುವೆ ತೀವ್ರ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿರುವ ತೆಲಂಗಾಣ ವಿಧಾನಸಭೆಗೆ ನ.30ರ ಗುರುವಾರ ಮತದಾನ ನಡೆಯಲಿದೆ. ಇದರೊಂದಿಗೆ ಪಂಚರಾಜ್ಯಗಳ ಚುನಾವಣೆಗೆ ಇದೇ ದಿನವೇ ಅಂತಿಮ ತೆರೆ ಬೀಳಲಿದೆ.

Telangana Assembly Elections Today Single phase polling in 119 constituencies BRS Congress BJP triangular Fight akb
Author
First Published Nov 30, 2023, 6:53 AM IST

ಹೈದರಾಬಾದ್‌: ಬಿಆರ್‌ಎಸ್‌-ಕಾಂಗ್ರೆಸ್‌-ಬಿಜೆಪಿ ನಡುವೆ ತೀವ್ರ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿರುವ ತೆಲಂಗಾಣ ವಿಧಾನಸಭೆಗೆ ನ.30ರ ಗುರುವಾರ ಮತದಾನ ನಡೆಯಲಿದೆ. ಇದರೊಂದಿಗೆ ಪಂಚರಾಜ್ಯಗಳ ಚುನಾವಣೆಗೆ ಇದೇ ದಿನವೇ ಅಂತಿಮ ತೆರೆ ಬೀಳಲಿದೆ. ಈ ಮುನ್ನ ಮಿಜೋರಂ, ಛತ್ತೀಸ್‌ಗಢ, ರಾಜಸ್ಥಾನ ಹಾಗೂ ಮಧ್ಯಪ್ರದೇಶ ಚುನಾವಣೆಗಳು 2 ತಿಂಗಳ ಅವಧಿಯಲ್ಲಿ ಮುಗಿದಿವೆ. ಈ ಎಲ್ಲ ರಾಜ್ಯಗಳ ಜತೆಗೆ ತೆಲಂಗಾಣದಲ್ಲೂ ಡಿ.3ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.

ತೆಲಂಗಾನದಲ್ಲಿ 119 ಕ್ಷೇತ್ರಗಳಿವೆ. ಒಟ್ಟು 2290 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 3.13 ಕೋಟಿ ಮತದಾರರಿದ್ದು, ಅದರಲ್ಲಿ 1.57 ಪುರುಷರು, 1.56 ಮಹಿಳೆಯರು 2,226 ತೃತೀಯ ಲಿಂಗಿಗಳು (Transgender) ಇದ್ದಾರೆ. ಬಹಿರಂಗ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ. ಕೇಂದ್ರ ಸಚಿವ ಅಮಿತ್‌ ಶಾ, ಕಾಂಗ್ರೆಸ್‌ನ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ (Mallikharjun Kharge) ಹಾಗೂ ಬಿಆರ್‌ಎಸ್‌ (BRS) ಸ್ಥಾಪಕ, ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಮಿಂಚಿದರು.

ಸುಮ್ನೆ ಕೂತ್ಕೊಳ್ಳಿ, ಇಲ್ಲಾ ಎದ್ದೋಗಿ; ಕಾಂಗ್ರೆಸ್ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಗರಂ!

ರಾಜ್ಯದಲ್ಲಿ ಹಾಲಿ ಬಿಆರ್‌ಎಸ್ ಸರ್ಕಾರವಿದ್ದು, ಅದನ್ನು ಮಣಿಸಿ ಅಧಿಕಾರಕ್ಕೇರಲು ಕಾಂಗ್ರೆಸ್ ಶತಾಯ ಗತಾಯ ಯತ್ನ ನಡೆಸಿದೆ. ಬಿಜೆಪಿ ಕೂಡ ಹಿಂದೆದಿಗಿಂತ ಹೆಚ್ಚು ಬಲದೊಂದಿಗೆ ಸ್ಪರ್ಧೆಗೆ ಇಳಿದಿದ್ದು, ಗಮನಾರ್ಹ ಸ್ಥಾನ ಗಳಿಸುವ ವಿಶ್ವಾಸದಲ್ಲಿದೆ.

ಇಂದು ಎಕ್ಸಿಟ್‌ ಪೋಲ್‌

ನವದೆಹಲಿ: ಪಂಚರಾಜ್ಯ ಚುನಾವಣೆಗಳು ತೆಲಂಗಾಣದೊಂದಿಗೆ ಮುಕ್ತಾಯವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಗುರುವಾರ ಸಂಜೆಯಿಂದ ಎಕ್ಸಿಟ್‌ಪೋಲ್‌ಗಳು (ಚುನಾವಣೋತ್ತರ ಸಮೀಕ್ಷೆ) ಮಾಧ್ಯಮಗಳಲ್ಲಿ ಪ್ರಕಟವಾಗಲಿವೆ.  ಸಂಜೆ 5 ಗಂಟೆಗೆ ಚುನಾವಣೆಗಳು ಮುಗಿಯಲಿವೆ. ಚುನಾವಣಾ ಆಯೋಗದ (election commission) ನೀತಿ ಸಂಹಿತೆ ಅನ್ವಯ ಮತದಾನ ಮುಗಿದ 1 ತಾಸಿನ ಬಳಿಕ ಅಂದರೆ ಸಂಜೆ 6 ಗಂಟೆಯಿಂದ ಸಮೀಕ್ಷೆಗಳು ಪ್ರಕಟವಾಗಲಿದ್ದು, ಯಾವ ರಾಜ್ಯದಲ್ಲಿ ಯಾರು ಗೆಲ್ಲಬಹುದು ಎಂಬ ಭವಿಷ್ಯ ನುಡಿಯಲಿವೆ. ಡಿ.3ರಂದು ಅಧಿಕೃತ ಫಲಿತಾಂಶ ಘೋಷಣೆ ಆಗಲಿದೆ.

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಮೋದಿ: ಭಕ್ತಾದಿಗಳಿಗೆ VIP ದರ್ಶನ ರದ್ದು

Follow Us:
Download App:
  • android
  • ios