Asianet Suvarna News Asianet Suvarna News

ಹಿಂದಿ ಭಾಷಿಕರು ಶೌಚಾಲಯ ತೊಳೆಯುತ್ತಾರೆ ಎಂಬ ಮಾರನ್‌ ಹೇಳಿಕೆಗೆ ವ್ಯಾಪಕ ಖಂಡನೆ

ಹಿಂದಿ ಭಾಷಿಕರ ವಿರುದ್ಧ ಮಾರನ್‌ ಹೇಳಿಕೆ, ವಿಪಕ್ಷಗಳಿಂದಲೇ ಖಂಡನೆ. ಅನ್ಯ ಭಾಷಿಕರಿಗೆ ಗೌರವ ನೀಡುವುದನ್ನು ಕಲಿಯಬೇಕು ಎಂದು ತೇಜಸ್ವಿ ಯಾದವ್‌ ತಿರುಗೇಟು.

Tejashwi Yadav condemned DMK MP Dayanidhi Maran's controversial remark on Hindi Speakers gow
Author
First Published Dec 25, 2023, 10:55 AM IST

ಪಾಟ್ನಾ (ಡಿ.25): ಹಿಂದಿ ಮಾತನಾಡುವ ಜನರು ಚೆನ್ನೈನಲ್ಲಿ ಶೌಚಾಲಯಗಳು ಮತ್ತು ರಸ್ತೆಗಳನ್ನು ಸ್ವಚ್ಛಗೊಳಿಸುವ ಚಾಕರಿ ಮಾಡುತ್ತಾರೆ ಎಂದು ಡಿಎಂಕೆ ಮುಖಂಡ ದಯಾನಿಧಿ ಮಾರನ್‌ ನೀಡಿದ ಹೇಳಿಕೆ ವಿವಾದಕ್ಕೀಡಾಗಿದೆ. ಬಿಜೆಪಿ ಮುಖಂಡರು ಈ ಹೇಳಿಕೆಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಮಾರನ್‌ ವಿರುದ್ಧ ಕಿಡಿಕಾರಿದ್ದಾರೆ. 

ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ಕೂಡ ಇತರ ರಾಜ್ಯಗಳ ನಾಯಕರು ಇತರ ರಾಜ್ಯಗಳ ಜನರ ವಿರುದ್ಧ ಇಂತಹ ಹೇಳಿಕೆಗಳನ್ನು ನೀಡುವುದನ್ನು ತಡೆಯಬೇಕು ಎಂದು ಹೇಳಿದ್ದಾರೆ. ಅಂತಹ ಹೇಳಿಕೆಗಳು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಇಡೀ  ಬಿಹಾರ ಮತ್ತು ಉತ್ತರಪ್ರದೇಶದ ಜನರ ಗೌರವ ಕುಗ್ಗಿಸುವ ಡಿಎಂಕೆ ನಾಯಕನ ಹೇಳಿಕೆಯು ಖಂಡನಾರ್ಹವಾಗಿದೆ. ದೇಶದ ಇತರ ಭಾಗಗಳಿಂದ ಬರುವ ಜನರನ್ನು ಗೌರವಿಸಬೇಕು ಎಂದಿದ್ದಾರೆ.

‘ಗೋಮಾಂಸ ಪ್ರಚಾರಕಿ’ ಕಾಮಿಯಾ ಜಗನ್ನಾಥ ದೇಗುಲ ಪ್ರವೇಶ ಭಾರೀ ವಿವಾದ

ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಹಿಂದಿಯನ್ನು ಮಾತ್ರ ಕಲಿಯುವವರು ತಮಿಳುನಾಡಿನಲ್ಲಿ ಮನೆ ಕಟ್ಟುತ್ತಾರೆ, ರಸ್ತೆ ಗುಡಿಸುತ್ತಾರೆ ಮತ್ತು ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಾರೆ. ಆದರೆ ತಮಿಳುನಾಡಿನಲ್ಲಿ ಇಂಗ್ಲಿಷ್ ತಿಳಿದಿರುವವರು ಐಟಿ ಕ್ಷೇತ್ರದಲ್ಲಿ ಕೊಬ್ಬಿದ ಸಂಬಳ ಪಡೆಯುತ್ತಾರೆ ಎಂದು ಮಾರನ್ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ.

ಅಂಬರೀಷ್ ಸಹ ವಿಲನ್ ಇದ್ರು ನಂತ್ರ ಹೀರೋ ಆದ್ರು, ನಾನು ಹಾಗೇ ಆಗುತ್ತೇನೆ: ಯತ್ನಾಳ್‌

ಇದಕ್ಕೆ ಪ್ರತಿಕ್ರಿಯಿಸಿದ ತೇಜಸ್ವಿ, ಎಂ ಕರುಣಾನಿಧಿಯವರ ಪಕ್ಷವಾದ ಡಿಎಂಕೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟಿದೆ. ಮೊದಲನೆಯದಾಗಿ, ನಾನು ಹೇಳಲೇಬೇಕು, ಡಿಎಂಕೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಹೊಂದಿದೆ. ಆ ಪಕ್ಷದ ಯಾವುದೇ ನಾಯಕರು ಯುಪಿ ಮತ್ತು ಬಿಹಾರದ ಜನರ ಬಗ್ಗೆ ಏನಾದರೂ ಹೇಳಿದ್ದರೆ ಅದು ಖಂಡನೀಯ. ನಾವು ಅದನ್ನು ಒಪ್ಪುವುದಿಲ್ಲ. ಯುಪಿ ಮತ್ತು ಬಿಹಾರದ ಕಾರ್ಮಿಕರಿಗೆ ದೇಶದಾದ್ಯಂತ ಬೇಡಿಕೆಯಿದೆ. ಬಿಹಾರ ಮತ್ತು ಯುಪಿಯ ಜನರು ಬೇರೆ ರಾಜ್ಯಗಳಿಗೆ ಹೋಗದಿದ್ದರೆ ಅದು ಆರ್ಥಿಕ ಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತದೆ. ಜನ ಅದನ್ನು ಅರ್ಥ ಮಾಡಿಕೊಳ್ಳಬೇಕು. ಆದರೆ ಬಿಹಾರ ಮತ್ತು ಯುಪಿಯ ಇಡೀ ಜನತೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ. ಅಂತಹ ಯಾವುದೇ ಹೇಳಿಕೆಯನ್ನು ನಾವು ಅದನ್ನು ಖಂಡಿಸುತ್ತೇವೆ ಎಂದು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ಪಾಟ್ನಾದಲ್ಲಿ ನಡೆದ ರಾಜ್ಯ ಯುವ ಮಹೋತ್ಸವದಲ್ಲಿ ಹೇಳಿದ್ದಾರೆ.

Follow Us:
Download App:
  • android
  • ios