ದುಬೈ ಏರ್ ಶೋ 2025 ರಲ್ಲಿ ಭಾರತೀಯ ವಾಯುಪಡೆಯ ತೇಜಸ್ ಫೈಟರ್ ಜೆಟ್ ಪತನಗೊಂಡು ಪೈಲಟ್ ವಿಂಗ್ ಕಮಾಂಡರ್ ನಾಮ್ನಾಶ್ ಸಯಾಲ್ ಮೃತಪಟ್ಟಿದ್ದಾರೆ. ಈ ದುರಂತಕ್ಕೆ ಜಿ-ಫೋರ್ಸ್ ಬ್ಲ್ಯಾಕೌಟ್ ಅಥವಾ ಪೈಲಟ್ ನಿಯಂತ್ರಣ ಕಳೆದುಕೊಂಡಿರುವುದು ಕಾರಣವಿರಬಹುದೆಂದು ರಕ್ಷಣಾ ತಜ್ಞರು ಶಂಕಿಸಿದ್ದು, ವಾಯುಪಡೆ ತನಿಖೆ ಆರಂಭ
ದುಬೈ ಏರ್ ಶೋ 2025 ರ ಪ್ರದರ್ಶನ ಹಾರಾಟದ ಸಮಯದಲ್ಲಿ ಭಾರತೀಯ ವಾಯುಪಡೆಯ (IAF) ತೇಜಸ್ ಫೈಟರ್ ಜೆಟ್ ಭೀಕರ ಅಪಘಾತಕ್ಕೀಡಾದ ಘಟನೆಗೆ ಸಂಬಂಧಿಸಿದ ಸಂದರ್ಭಗಳು ಇನ್ನೂ ಸ್ಪಷ್ಟವಾಗಿಲ್ಲವಾದರೂ, ರಕ್ಷಣಾ ತಜ್ಞರು ಗಂಭೀರ ಆತಂಕಗಳನ್ನು ವ್ಯಕ್ತಪಡಿಸಿದ್ದಾರೆ. ತಜ್ಞರ ಪ್ರಕಾರ, ಘಟನೆಯ ಚಿತ್ರಣಗಳಲ್ಲಿ ಕಡಿಮೆ ಎತ್ತರದಲ್ಲಿ ಶೋ ನಡೆಸುತ್ತಿದ್ದ ತೇಜಸ್ ಜೆಟ್ ಇದ್ದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡು ನೆಲಕ್ಕೆ ಬೀಳುವುದನ್ನು ಗಮನಿಸಲಾಗಿದೆ. ಇದರ ಪರಿಣಾಮವಾಗಿ, ಅಪಘಾತಕ್ಕೆ ಜಿ-ಫೋರ್ಸ್ ಬ್ಲ್ಯಾಕೌಟ್ ಅಥವಾ ಪೈಲಟ್‌ನಿಂದ ನಿಯಂತ್ರಣ ಕಡಿತವಾಗಿದ್ದರಿಂದ.. ಎಂಬ ಸಾಧ್ಯತೆಯನ್ನು ತಜ್ಞರು ಸೂಚಿಸಿದ್ದಾರೆ.
ತೇಜಸ್ ಅಪಘಾತಕ್ಕೆಕಾರಣವೇನು?
ಘಟನೆಯ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ರಕ್ಷಣಾ ತಜ್ಞ ಮತ್ತು ನಿವೃತ್ತ ಕ್ಯಾಪ್ಟನ್ ಅನಿಲ್ ಗೌರ್ ಅವರು, ಅಪಘಾತದ ಸ್ವರೂಪವು ಬಹಳ ಭಯಾನಕವಾಗಿದೆ ಎಂದು ಹೇಳಿದರು. ವಾಯು ಪ್ರದರ್ಶನದ ಸಮಯದಲ್ಲಿ ಪೈಲಟ್ ಯುದ್ಧ ವಿಮಾನದ ನಿಯಂತ್ರಣ ಕಳೆದುಕೊಂಡಿರಬಹುದು ಅಥವಾ ಹೆಚ್ಚಿನ ಗುರುತ್ವಾಕರ್ಷಣ ಬಲದಿಂದಾಗಿ ವಿಮಾನ ಅಪಘಾತಕ್ಕೀಡಾಗಿರಬಹುದು ಎಂದು ತೋರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ದುಬೈ ಏರ್ ಶೋನಲ್ಲಿ ನಮ್ಮ ತೇಜಸ್ ಯುದ್ಧ ವಿಮಾನ ಅಪಘಾತಕ್ಕೀಡಾಗಿದ್ದು, ಈ ದುರ್ಘಟನೆಯಲ್ಲಿ ಧೈರ್ಯಶಾಲಿ ಪೈಲಟ್, ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ನಾಮ್ನಾಶ್ ಸಯಾಲ್ ಅವರು ಪ್ರಾಣ ಕಳೆದುಕೊಂಡಿರುವುದು ಅತ್ಯಂತ ದುಃಖಕರ ಎಂದು ಕ್ಯಾಪ್ಟನ್ ಗೌರ್ ದುಃಖ ವ್ಯಕ್ತಪಡಿಸಿದರು.
ಕ್ಯಾ.ಗೌರ್ ನಿಯಂತ್ರಣ ಕಳೆದುಕೊಂಡರೆ ಅಥವಾ..?
ಕ್ಯಾಪ್ಟನ್ ಗೌರ್ ಅವರ ಪ್ರಕಾರ, ಏರ್ ಶೋನ ದೃಶ್ಯಗಳು ಪೈಲಟ್ ಸ್ಕಿಲ್ ವೇಳೆ ವಿಮಾನದ ನಿಯಂತ್ರಣ ಕಳೆದುಕೊಂಡಿದ್ದಾರೆ ಅಥವಾ ಹೆಚ್ಚಿನ ಗುರುತ್ವಾಕರ್ಷಣ ಬಲದಿಂದಾಗಿ (ಜಿ-ಬ್ಲ್ಯಾಕೌಟ್) ಕತ್ತಲೆಯಾಗಿ ಬಿದ್ದಿರಬಹುದು ಎಂಬುದನ್ನು ಸೂಚಿಸುತ್ತವೆ. ಪೈಲಟ್‌ಗಳು ತಮ್ಮ ಕಾಲುಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಜಿ-ಸೂಟ್‌ಗಳನ್ನು ಧರಿಸಿದ್ದರೂ, ಕಾಕ್‌ಪಿಟ್‌ನಿಂದ ಬರುವ ದತ್ತಾಂಶ (Cockpit Data) ಮಾತ್ರ ಅಪಘಾತದ ನಿಜವಾದ ಕಾರಣವನ್ನು ಖಚಿತವಾಗಿ ಬಹಿರಂಗಪಡಿಸುತ್ತದೆ ಎಂದು ಹೇಳಿದ್ದಾರೆ.
ಈ ದತ್ತಾಂಶಕ್ಕಾಗಿ ಇಡೀ ದೇಶ ಕಾತರದಿಂದ ಕಾಯುತ್ತಿದೆ. ಶುಕ್ರವಾರ (ನವೆಂಬರ್ 21, 2025) ಸ್ಥಳೀಯ ಸಮಯ ಮಧ್ಯಾಹ್ನ 2:10 ಕ್ಕೆ ದುಬೈ ಏರ್ ಶೋನಲ್ಲಿ ಪ್ರದರ್ಶನ ಹಾರಾಟದ ಸಮಯದಲ್ಲಿ ಭಾರತೀಯ ವಾಯುಪಡೆಯ ತೇಜಸ್ ಯುದ್ಧ ವಿಮಾನ ಅಪಘಾತಕ್ಕೀಡಾಯಿತು. ವಿಮಾನವು ಗಾಳಿಯಲ್ಲಿ ಅದ್ಭುತವಾದ ಏರೋಬ್ಯಾಟಿಕ್ಸ್ ಪ್ರದರ್ಶಿಸುತ್ತಿದ್ದಾಗ ಪೈಲಟ್ ಇದ್ದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡಿದ್ದರು ಎಂದು ವರದಿಯಾಗಿದೆ. ಈ ಅಪಘಾತದ ಬಗ್ಗೆ ಭಾರತೀಯ ವಾಯುಪಡೆ ತನಿಖೆಯನ್ನು ಆರಂಭಿಸಿದೆ.


