Asianet Suvarna News Asianet Suvarna News

ಮೋದಿ ಹಾರಾಡಿದ್ದರಿಂದ ತೇಜಸ್ ಕೂಡ ಪತನವಾಗಬಹುದು: ಟಿಎಂಸಿ ನಾಯಕನ ಹೇಳಿಕೆ

ಮೋದಿ ಹಾರಾಡಿದ ತೇಜಸ್‌ ಯುದ್ಧ ವಿಮಾನ ಕೂಡ ಅಪಶಕುನ ತಾಗಿ ಪತನವಾಗುವ ಸಾಧ್ಯತೆ ಇದೆ ಎಂದು ಟಿಎಂಸಿ ನಾಯಕ ಶಾಂತನು ಸೇನ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.

Tejas flown by Modi likely to crash TMC leader controversial statement akb
Author
First Published Nov 27, 2023, 10:15 AM IST

ಕೋಲ್ಕತಾ: ಪ್ರಧಾನಿ ನರೇಂದ್ರ ಮೋದಿ ಅವರು ಅಪಶಕುನ (ಪನೌತಿ) ಎಂಬ ವಿಪಕ್ಷ ನಾಯಕರ ಟೀಕೆಗಳು ಮುಂದುವರಿದಿದ್ದು, ಮೋದಿ ಹಾರಾಡಿದ ತೇಜಸ್‌ ಯುದ್ಧ ವಿಮಾನ ಕೂಡ ಅಪಶಕುನ ತಾಗಿ ಪತನವಾಗುವ ಸಾಧ್ಯತೆ ಇದೆ ಎಂದು ಟಿಎಂಸಿ ನಾಯಕ ಶಾಂತನು ಸೇನ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಭಾನುವಾರ ಮಾತನಾಡಿದ ಅವರು, ಪ್ರಧಾನಿಗೆ ಅಪಶಕುನ ತಾಗಿದೆ. ಅವರು ತೆರಳಿದ ಕಡೆಯೆಲ್ಲ ಅಪಜಯ ಉಂಟಾಗುತ್ತಿದೆ. ಅದೇ ರೀತಿ ಶನಿವಾರ ಬೆಂಗಳೂರಿನಲ್ಲಿ ತೇಜಸ್‌ ಯುದ್ಧ ವಿಮಾನದ ಪರೀಕ್ಷೆಗೆ ತೆರಳಿ ಅದರಲ್ಲಿ ಕೆಲ ಕಾಲ ಹಾರಾಡಿದ್ದಾರೆ. ಹಾಗಾಗಿ ಅವರಿಗೆ ತಾಗಿರುವ ಅಪಶಕುನದ ಫಲವಾಗಿ ತೇಜಸ್‌ ಯುದ್ಧ ವಿಮಾನವೂ ಕೂಡ ಸೇನಾ ಕಾರ್ಯಾಚರಣೆ ನಡೆಸುವಾಗ ಪತನವಾದರೂ ಅಚ್ಚರಿ ಪಡಬೇಕಿಲ್ಲ ಎಂದಿದ್ದಾರೆ.

ಇದಕ್ಕೆ ಬಿಜೆಪಿ ನಾಯಕರಾದ ಮಂಜಿಂದರ್ ಸಿಂಗ್‌ ಸಿರ್ಸಾ ಹಾಗೂ ಶಹಜಾದ್‌ ಪೂನಾವಾಲಾ ಕಿಡಿಕಾರಿದ್ದು, ತೇಜಸ್ ಪತನ ಆಗುತ್ತದೆ ಎಂದು ಸೇನ್‌ ಯಾವ ಆಧಾರದಲ್ಲಿ ಹೇಳಿದ್ದಾರೆ? ಕೂಡಲೇ ಅವರನ್ನು ಸಂಸದ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಮೋದಿ ವೀಕ್ಷಿಸಿದ್ದರಿಂದಲೇ ಅಪಶಕುನವಾಗಿ (ಪನೌತಿ) ಭಾರತ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಸೋತಿತು ಎಂದು ಇತ್ತೀಚೆಗೆ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಹೇಳಿದ್ದರು. ಅದರ ಬಳಿಕ ಅಪಶಕುನದ ಚರ್ಚೆ ಆರಂಭವಾಗಿತ್ತು.

ಬೆಂಗಳೂರಲ್ಲಿ ನಮೋ: ತೇಜಸ್ ಯುದ್ಧ ವಿಮಾನದಲ್ಲಿ ಪ್ರಧಾನಿ ಮೋದಿ ಹಾರಾಟ

ಬಾಲಿವುಡ್‌ ಕ್ವೀನ್‌ ಖಾತೆಗೆ ಮತ್ತೊಂದು ಫ್ಲಾಫ್‌ ಸಿನಿಮಾ: ಪ್ರೇಕ್ಷಕರಿಲ್ಲದೇ ತೇಜಸ್‌ನ ಹಲವು ಪ್ರದರ್ಶನಗಳು ರದ್ದು!

 

Follow Us:
Download App:
  • android
  • ios