ಲೋಕಸಭಾ ಚುನಾವವಣೆ ತಯಾರಿಗಳು ಆರಂಭಗೊಂಡಿದೆ. ಇದೀಗ ಬಿಜೆಪಿ 2024ರ ಲೋಕಸಭೆ ಚುನಾವಣೆಗೆ ಘೋಷವಾಕ್ಯ ನಿರ್ಧರಿಸಿದೆ. 3ನೇ ಸಲ ಮೋದಿ ಸರ್ಕಾರ, 400ಕ್ಕಿಂತ ಹೆಚ್ಚು ಸ್ಥಾನ ಈ ಬಾರಿ ಅನ್ನೋ ಘೋಷವಾಕ್ಯವನ್ನು ಬಿಡೆಪಿ ಬಿಡುಗಡೆ ಮಾಡಿದೆ.  

ನವದೆಹಲಿ(ಜ.02) ರಾಮ ಮಂದಿರ ಉದ್ಘಾಟನೆ ಹಿನ್ನಲೆಯಲ್ಲಿ ದೇಶದೆಲ್ಲೆಡೆ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಇದರ ನಡುವೆ ಲೋಕಸಭಾ ಚುನಾವಣೆಗೆ ತಯಾರಿಗಳು ಭರ್ಜರಿಯಾಗಿ ನಡೆಯುತ್ತಿದೆ. ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟದ ಮೈತ್ರಿ ಪಕ್ಷಗಳು ಸತತ ಸಭೆ ನಡೆಸುತ್ತಿದೆ. ಇತ್ತ ಬಿಜೆಪಿ 2024ರ ಚುನಾವವಣೆಗೆಯ ಘೋಷವಾಕ್ಯ ಬಿಡುಗಡೆ ಮಾಡಿದೆ. ತೀಸ್ರಿ ಬಾರ್ ಮೋದಿ ಸರ್ಕಾರ್, ಅಬ್ ಕಿ ಬಾರ್ 400 ಪಾರ್( ಮೂರನೇ ಬಾರಿ ಮೋದಿ ಸರ್ಕಾರ, ಈ ಬಾರಿ 400ಕ್ಕಿಂತ ಹೆಚ್ಚು ಸ್ಥಾನ) ಅನ್ನೋ ಘೋಷವಾಕ್ಯವನ್ನು ಬಜೆಪಿ ಬಿಡುಗಡೆ ಮಾಡಿದೆ.

ಬಿಜೆಪಿ ಕೇಂದ್ರ ಕಚೇರಿ ದೆಹಲಿಯಲ್ಲಿ ನಡೆದ ಬಿಜೆಪಿ ಚುನಾವಣಾ ಸಭೆಯಲ್ಲಿ ಈ ಘೋಷವಾಕ್ಯ ನಿರ್ಧರಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಕೇಂದ್ರ ಸಚಿವ ಭೂಪೇಂದ್ರ ಯಾದವ್, ಅಶ್ವಿನಿ ವೈಷ್ಣವ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಪ್ರಧಾನ ಕಾರ್ಯದರ್ಶಿ ತರುಣ್ ಚುಗ್, ಸುನಿಲ್ ಬನ್ಸಾಲ್ ಸೇರಿದಂತೆ ಹಲವು ಪ್ರಮುಖ ನಾಯಕರು ಪಾಲ್ಗೊಂಡಿದ್ದರು.

3ರಿಂದ 4 ಲೋಕಸಭಾ ಕ್ಷೇತ್ರಗಳು ಜೆಡಿಎಸ್‌ಗೆ?: ಬಿಜೆಪಿ ಜತೆ ಮೈತ್ರಿ ಕ್ಷೇತ್ರಗಳ ಹಂಚಿಕೆಗೆ ದಳ ನಾಯಕರ ಸರ್ಕಸ್‌..!

2024ರ ಲೋಕಸಭೆ ಚುನಾವಣೆಯಲ್ಲಿ 400ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ಟಾರ್ಗೆಟ್‌ನೊಂದಿಗೆ ಚುನಾವಣಾ ಅಖಾಡಕ್ಕೆ ಧುಮುಕಲು ನಿರ್ಧರಿಸಲಾಗಿದೆ. ಈಗಾಗಲೇ ಪ್ರಧಾನಿ ಮೋದಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅಬ್ ಕಿ ಬಾರ್ 400 ಪಾರ್( ಈ ಬಾರಿ 400ಕ್ಕಿಂತ ಹೆಚ್ಚು ಸ್ಥಾನ) ಅನ್ನೋ ಘೋಷಣೆಯನ್ನು ಮಾಡಿದ್ದಾರೆ. ಇದೇ ಘೋಷಣೆಗೆ ತೀಸ್ರಿ ಬಾರ್ ಮೋದಿ ಸರ್ಕಾರ್ ಅನ್ನೋ ವಾಕ್ಯವನ್ನು ಸೇರಿಸಲಾಗಿದೆ.

ಇಂಡಿಯಾ ಒಕ್ಕೂಟ ಸತತ ಸಭೆಗಳನ್ನು ನಡೆಸುತ್ತಿದೆ. ಆದರೆ ಸೀಟು ಹಂಚಿಕೆ ಭಾರಿ ಕಗ್ಗಂಟಾಗಿದೆ. ಆಮ್ ಆದ್ಮಿ ಪಾರ್ಟಿ ಹಾಗೂ ಕಾಂಗ್ರೆಸ್ ಇದೇ ವಿಚಾರದಲ್ಲಿ ಮುನಿಸಿಕೊಂಡಿದೆ. ಈಗಾಗಲೇ ನಾಯಕರು ಬಹಿರಂಗ ಹೇಳಿಕೆ ಮೂಲಕ ಮನಸ್ತಾಪವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ದಹೆಲಿ ಹಾಗೂ ಪಂಜಾಬ್‌ನಲ್ಲಿ ಆಪ್ ಯಾವುದೇ ಸೀಟು ಹಂಚಿಕೆಗೆ ತಯಾರಿಲ್ಲ. ಏಕಾಂಗಿಯಾಗಿ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿದ. ಇತ್ತ ಪಶ್ಚಿಮ ಬಂಗಾಳದಲ್ಲೂ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಸೀಟು ಹಂಚಿಕೆ ಮಾಡದೆ ಏಕಾಂಗಿ ಸ್ಪರ್ಧೆಗೆ ಮುಂದಾಗಿದೆ.

ಮೋದಿ ವಿರುದ್ಧ ಸ್ಪರ್ಧಿಸುವ ರಿಸ್ಕ್‌ ಬೇಡ, ಕರ್ನಾಟಕದಿಂದ ಪ್ರಿಯಾಂಕಾ ಸ್ಪರ್ಧೆ: ಕಾಂಗ್ರೆಸ್ಸಲ್ಲಿ ಚಿಂತನೆ

ಸಾಧನೆ ಕುರಿತ ಅಭಿಪ್ರಾಯ ತಿಳಿಸಲು ಮೋದಿ ಮನವಿ
10 ವರ್ಷದ ಆಡಳಿತ ಕಾರ್ಯವೈಖರಿಯ ಕುರಿತು ನಮೋ ಆ್ಯಪ್‌ನಲ್ಲಿ ಜನಮನ ಸಮೀಕ್ಷೆ ಆರಂಭಿಸಲಾಗಿದ್ದು, ಜನರು ಅಭಿಪ್ರಾಯ ತಿಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಜನರಿಗೆ ಮನವಿ ಮಾಡಿದ್ದಾರೆ. ಲೋಕಸಭೆ ಚುನಾವಣೆಗೆ ಸಜ್ಜಾಗುವ ನಿಟ್ಟಿನಲ್ಲಿ ಈ ಸಮೀಕ್ಷೆ ಆರಂಭಿಸಲಾಗಿದೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ಕಳೆದ 10 ವರ್ಷಗಳಲ್ಲಿ ಸರ್ಕಾರವು ವಿವಿಧ ವಲಯಗಳಲ್ಲಿ ಸಾಧಿಸಿದ ಪ್ರಗತಿಯ ಕುರಿತು ನಿಮ್ಮ ಅಭಿಪ್ರಾಯವನ್ನು ನಮೋ ಆ್ಯಪ್‌ನಲ್ಲಿರುವ ಜನಮನ ಸರ್ವೆಯ ಮೂಲಕ ಹಂಚಿಕೊಳ್ಳಿ’ ಎಂದು ಮನವಿ ಮಾಡಿದ್ದಾರೆ. ಅಲ್ಲದೆ ಸಮೀಕ್ಷೆಯ ಲಿಂಕ್‌ ಸಹ ಟ್ಯಾಗ್‌ ಮಾಡಿದ್ದಾರೆ. ಈ ಸಮೀಕ್ಷೆಯಲ್ಲಿ ಆಡಳಿತದ ಕಾರ್ಯವೈಖರಿ, ನಾಯಕತ್ವ, ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ಕ್ಷೇತ್ರವಾರು ಸಮಸ್ಯೆಗಳ ಕುರಿತು ಅಭಿಪ್ರಾಯ ಸಂಗ್ರಹಿಸುತ್ತದೆ.