ಟಿಎಂಸಿ ಹಾಗೂ ಸಿಎಂ ಮಮತಾ ಬ್ಯಾನರ್ಜಿಗೆ ಶಿಕ್ಷಕರ ನೇಮಕಾತಿ ಹಗರಣ ತೀವ್ರ ತಲೆನೋವು ತರುತ್ತಿದೆ. ಸಚಿವ ಪಾರ್ಥ ಚಟರ್ಜಿ ಬಂಧನದ ಬಳಿಕ ಒಂದೊಂದೆ ಸ್ಪೋಟಕ ಮಾಹಿತಿಗಳು ಹೊರಬರುತ್ತಿದೆ. ಇದೀಗ ಇದೇ ಪ್ರಕರಣ ಸಂಬಂಧ ಮತ್ತೊರ್ವ ಶಾಸಕನ ಬಂಧಿಸಲಾಗಿದೆ.
ಕೋಲ್ಕತಾ(ಏ.17): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಶಿಕ್ಷಕರ ನೇಮಕಾತಿ ಹಗರಣ ತೀವ್ರ ಹಿನ್ನಡೆ ತರುತ್ತಿದೆ. ಹಗರಣದ ತನಿಖೆ ಚುರುಕುಗೊಳಿಸಿರುವ ಸಿಬಿಐ ಅಧಿಕಾರಿಗಳು ಟಿಎಂಸಿ ಮತ್ತೊರ್ವ ಶಾಸಕ ಜಿಬಾನ್ ಕೃಷ್ಣ ಸಾಹ ಅವರನ್ನು ಬಂಧಿಸಿದೆ. ಶುಕ್ರವಾರ ಜಿಬಾನ್ ಮನೆ ಹಾಗೂ ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ಮಾಹಿತಿ ಕಲೆ ಹಾಕಿದ್ದರು. ದಾಳಿ ವೇಳೆ ತಮ್ಮ ಮೊಬೈಲ್‌ನ್ನು ಜಿಬಾನ್ ಕೃಷ್ಣ ಸಾಹ ಕೆರೆಗೆ ಎಸೆದಿದ್ದರು. ಕಳೆರಡು ದಿನದಿಂದ ಸತತ ವಿಚಾರಣೆ ನಡೆಸಿದ ಸಿಬಿಐ ಅಧಿಕಾರಿಗಳು ಇದೀಗ ಬಂಧಿಸಿದ್ದಾರೆ. ಸಿಬಿಐ ಮೂಲಗಳ ಪ್ರಕಾರ ಜಿಬಾನ್ ಕೃಷ್ಣ ಸಾಹ, ಅಭ್ಯರ್ಥಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಎಂದು ಆರೋಪಿಸಿದೆ.
ಶಿಕ್ಷಕರ ನೇಮಕಾತಿ ಹಗರಣದಲ್ಲಿ ಈವರಗೆ ಟಿಎಂಸಿಯ ಮೂವರು ನಾಯಕರು ಬಂಧನಕ್ಕೊಳಗಾಗಿದ್ದಾರೆ. ಸಚಿವ ಪಾರ್ಥ ಚಟರ್ಜಿ ಬಂಧನದ ಬಳಿಕ ಶಿಕ್ಷಕರ ನೇಮಕಾತಿ ಹರಗಣದ ತೀವ್ರತೆ ಬೆಳಕಿಗೆ ಬಂದಿತ್ತು. ಇಷ್ಟೇ ಅಲ್ಲ ಸಾವಿರಾರು ಕೋಟಿ ರೂಪಾಯಿ ಅಕ್ರಮವೂ ಬೆಳಕಿಗೆ ಬಂದಿತ್ತು. ಚಟರ್ಜಿ ಬಂಧನ ಬಳಿಕ ಟಿಎಂಸಿ ಶಾಸಕ ಮಾಣಿಕ್ ಭಟ್ಟಾಚಾರ್ಯ ಅರೆಸ್ಟ್ ಆಗಿದ್ದರು. ಇದೀಗ ಜಿಬಾನ್ ಕೃಷ್ಣ ಸಾಹ ಅವರನ್ನೂ ಸಿಬಿಐ ಬಂಧಿಸಿದೆ.
ಮುಸ್ಲಿಮರಿದ್ದ ಕಡೆ ರಾಮನವಮಿ ಏಕೆ : ಮಮತಾ ಬ್ಯಾನರ್ಜಿ
ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ತೃಣಮೂಲ ಕಾಂಗ್ರೆಸ್ ಶಾಸಕ ಜಿಬನ್ ಕೃಷ್ಣ ಸಾಹ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಿದ ವೇಳೆ ಅವರು ತಮ್ಮ ಮೊಬೈಲನ್ನು ಕೆರೆಗೆ ಎಸೆದಿದ್ದರು. ಬಳಿಕ ಸಿಬಿಐ ಅಧಿಕಾರಿಗಳು ಇತರ ಸಿಬ್ಬಂದಿಗಳ ನೆರವಿನಿಂದ ಜಿಬಾನ್ ಕೃಷ್ಣ ಅವರ ಮೊಬೈಲ್‌ನ್ನು ಕೆರೆಯಿಂದ ಹೊರತೆಗೆದು ವಶಕ್ಕೆ ತೆಗೆದುಕೊಂಡಿದ್ದರು. ನಿಖೆಯ ವೇಳೆ ಶೌಚಾಲಯಕ್ಕೆ ತೆರಳಲು ಅನುಮತಿ ಪಡೆದುಕೊಂಡ ಜಿಬಾನ್, ನೇರವಾಗಿ ತಮ್ಮ ನಿವಾಸದ ಬಳಿಯ ಕೆರೆಯತ್ತ ತೆರಳಿ ತಮ್ಮ ಮೊಬೈಲ್ ಫೋನ್ ಅನ್ನು ಕೆರೆಗೆ ಎಸೆದಿದ್ದಾರೆ. ಬಳಿಕ ಸಿಬಿಐ ಅಧಿಕಾರಿಗಳು ಮೊಬೈಲನ್ನು ವಶಕ್ಕೆ ಪಡೆಯಲು ಕೆರೆಯ ನೀರನ್ನು ಖಾಲಿ ಮಾಡಿಸಿದ್ದರು.. ಈ ಮೊಬೈಲ್‌ನಲ್ಲಿ ಹಗರಣಕ್ಕೆ ಸಂಬಂಧಿತ ಮಹತ್ವದ ಸುಳಿವುಗಳು ಸಿಗುವ ಸಾಧ್ಯತೆಗಳಿವೆ.
ಪಾರ್ಥ ಚಟರ್ಜಿ ಮನೆ ಮೇಲೆ ನಡೆಸಿದ ದಾಳಿ ವೇಳೆ ಶಿಕ್ಷಕ ನೇಮಕಾತಿ ಪರೀಕ್ಷೆಯ ಪ್ರವೇಶ ಪತ್ರ, ನೇಮಕಾತಿ ಪತ್ರ ಮತ್ತು ಆಸ್ತಿ ಪತ್ರಗಳು ಪತ್ತೆಯಾಗಿತ್ತು. ಅಲ್ಲದೇ ಅವರ ಆಪ್ತೆ ಅರ್ಪಿತಾ ಮುಖರ್ಜಿ ಮತ್ತು ಅವರ ಕಂಪನಿಯ ಹೆಸರಿನಲ್ಲಿರುವ ಅನೇಕ ದಾಖಲೆಗಳನ್ನು ಸಹ ವಶ ಪಡಿಸಿಕೊಳ್ಳಲಾಗಿತ್ತು. ಗ್ರೂಪ್ ಸಿ ಮತ್ತು ಡಿ ನೇಮಕಾತಿಗೆ ಸಂಬಂಧಿಸಿದ ದಾಖಲಾತಿಗಳು, ಅಭ್ಯರ್ಥಿಗಳ ಅಡ್ಮಿಟ್ ಕಾರ್ಡ್, ಪರೀಕ್ಷೆಯ ಅಂತಿಮ ಫಲಿತಾಂಶ, ವೆರಿಫಿಕೇಶನ್‌ಗಾಗಿ ಕಳುಹಿಸುವ ಸೂಚನಾ ಪತ್ರಗಳು ಸೇರಿದಂತೆ ಹಲವು ದಾಖಲೆಗಳನ್ನು ಪಾರ್ಥ ಚಟರ್ಜಿ ಅವರ ಮನೆಯಲ್ಲೇ ವಶಪಡಿಸಿಕೊಳ್ಳಲಾಗಿತ್ತು.
ಬಂಗಾಳದಲ್ಲಿ ಮತ್ತೆ ಹಿಂಸಾಚಾರ: 45 ಮಂದಿ ಬಂಧನ, ನಿಷೇಧಾಜ್ಞೆ ಜಾರಿ; ಘಟನೆಗೆ ಬಿಜೆಪಿ ಕಾರಣ ಎಂದ ದೀದಿ
ಇತ್ತೀಚೆಗೆ 20 ಕೋಟಿ ನಗದು ಪತ್ತೆಯಾದ ಪಾರ್ಥ ಚಟರ್ಜಿ ಆಪ್ತೆ ಅರ್ಪಿತಾ, ತನ್ನ ಹೆಸರಲ್ಲಿ 12 ನಕಲಿ ಕಂಪನಿಗಳನ್ನು ಹೊಂದಿದ್ದಾಳೆ. ಇದನ್ನು ನಕಲಿ ವ್ಯವಹಾರಗಳಿಗೆ ಮತ್ತು ಅಕ್ರಮ ಹಣ ವರ್ಗಕ್ಕೆ ಬಳಸುತ್ತಿದ್ದ ಶಂಕೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಂಧನಕ್ಕೆ ಒಳಗಾದ ಬಳಿಕ ಪಾರ್ಥ ಅವರು ತಡರಾತ್ರಿ, ಬಂಗಾಳ ಮುಖ್ಯಮಂತ್ರಿ ಮಮತಾಗೆ 3 ಬಾರಿ ಕರೆ ಮಾಡಿದ್ದಾರೆ. ಆದರೆ ಮೂರೂ ಕರೆಗಳಿಗೂ ಮಮತಾ ಉತ್ತರಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
