Asianet Suvarna News Asianet Suvarna News

ಬಾಲಯೋಗಿಗೆ ಡೆಪ್ಯೂಟಿ ಸ್ಪೀಕರ್ ಸ್ಥಾನ, ಅಪ್ಪನ ಬಳಿಕ ಮಗನಿಗೂ ಸಿಗುತ್ತಾ ಪಟ್ಟ?

ಅಟಲ್ ಸರ್ಕಾರದಲ್ಲಿ ಜೆಎಂಸಿ ಬಾಲಯೋಗಿ ಸ್ಪೀಕರ್ ಆಗಿದ್ದರು. ಇದೀಗ ಮಗ ಹರಿಶ್ ಬಾಲಯೋಗಿಗೆ ಉಪ ಸ್ಪೀಕರ್ ಸ್ಥಾನ ನೀಡಲು ಬಿಜೆಪಿ ಮುಂದಾಗಿದೆ. ಈ ಕುರಿತು ಕೆಲ ಕುತೂಹಲ ಮಾಹಿತಿ ಇಲ್ಲಿದೆ.
 

TDP Leader Harish Balayogi favourites for deputy speaker post says Report ckm
Author
First Published Jun 28, 2024, 8:35 AM IST

ನವದೆಹಲಿ(ಜೂ.28) : ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯಲ್ಲಿ ತೆರವಾಗಿದ್ದ ಡೆಪ್ಯುಟಿ ಸ್ಪೀಕರ್ ಭರ್ತಿಗೆ ಈಗ ಚರ್ಚೆಗಳು ಆರಂಭವಾಗಿ. ಸಭಾಧ್ಯಕ್ಷ ಹುದ್ದೆಯನ್ನು ತೆಲುಗದೇಶಂ ಹಾಗೂ ಜೆಡಿಯು ಬೇಡಿಕೆಗೆ ಮಣಿಯಯೇ ತನ್ನ ಬಳಿಯೇ ಇಟ್ಟುಕೊಂಡ ಬಿಜೆಪಿ, ಉಪ ಸ್ಪೀಕರ್ ಹುದ್ದೆಯನ್ನು ಟಿಡಿಪಿಗೆ ನೀಡಿವ ನಿರೀಕ್ಷೆ ಇದೆ ಎಂದು ತಿಳಿದುಬಂದಿದೆ. ಈ ಬಾರಿ ಈ ಸ್ಥಾನ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷಕ್ಕೆ ಸೇರಬಹುದು ಎಂಬ ಊಹಾಪೋಹವಿದೆ. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದ ವೇಳೆ ಸ್ಪೀಕರ್‌ ಆಗಿದ್ದ ತೆಲುಗುದೇಶಂನ ಜಿಎಂಸಿ ಬಾಲಯೋಗಿ ಅವರ ಪುತ್ರ ಹರೀಶ್ ಬಾಲಯೋಗಿಗೆ ಈ ಸ್ಥಾನ ಲಭಿಸಬಹುದು ಎಂಬ ನಿರೀಕ್ಷೆಯಿದೆ.

ಭಾರಿ ಕುತೂಹಲ ಕೆರಳಿಸಿದ್ದ ಸ್ಪೀಕರ್ ಆಯ್ಕೆಯಲ್ಲಿ ಬಿಜೆಪಿ ಮೈಲುಗೈ ಸಾಧಿಸಿದೆ. ಬೇಡಿಕೆ, ಒತ್ತಾಯದ ನಡುವೆ ಸ್ಪೀಕರ್ ಸ್ಥಾನ ತನ್ನ ಬಳಿ ಇರಿಸಿಕೊಂಡಿದೆ. ಇತ್ತ ಡೆಪ್ಯೂಟಿ ಸ್ಪೀಕರ್ ಸ್ಥಾನಕ್ಕೆ ವಿಪಕ್ಷಗಳು ಪಟ್ಟು ಹಿಡಿದ ಕಾರಣ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯುವ ಪರಿಸ್ಥಿತಿ ಎದುರಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಓಂ ಬಿರ್ಲಾ ಹೆಸರನ್ನು ಸ್ಪೀಕರ್‌ ಸ್ಥಾನಕ್ಕೆ ಆಯ್ಕೆ ಮಾಡುವ ನಿರ್ಣಯ ಮಂಡಿಸಿದರು. ಆದರೆ ಕಾಂಗ್ರೆಸ್‌ ಸದಸ್ಯ ಕೋಡಿಕುನ್ನಿಲ್‌ ಸುರೇಶ್‌ ಅವರ ಹೆಸರನ್ನು ಅಭ್ಯರ್ಥಿಯನ್ನಾಗಿ ಮುಂದಿಟ್ಟಿದ್ದ ಇಂಡಿಯಾ ಕೂಟದ ಪ್ರತಿಪಕ್ಷಗಳು, ಸದನಕ್ಕೆ ಮತ ಹಾಕಲು ಒತ್ತಾಯಿಸಲಿಲ್ಲ. ಹೀಗಾಗಿ ಧ್ವನಿಮತದಿಂದ ಓಂ ಬಿರ್ಲಾ ಅವರು ಸ್ಪೀಕರ್‌ ಆಗಿ ಆಯ್ಕೆ ಆಗಿದ್ದಾರೆ ಎಂದು ಹಂಗಾಮಿ ಸ್ಪೀಕರ್‌ ಭರ್ತೃಹರಿ ಮಹ್ತಬ್‌ ಘೋಷಣೆ ಮಾಡಿದರು.

ರಾಜಸ್ಥಾನದ ಕೋಟಾ ಕ್ಷೇತ್ರದ ಬಿಜೆಪಿ ಸಂಸದ ಬಿರ್ಲಾ ಅವರು ಸತತ ಎರಡನೇ ಬಾರಿಗೆ ಲೋಕಸಭೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಂತಾಗಿದೆ. ಅಲ್ಲದೆ, 2ನೇ ಬಾರಿ ಸ್ಪೀಕರ್‌ ಆಗಿ ಕಾರ್ಯನಿರ್ವಹಿಸುತ್ತಿರುವ 5ನೇ ವ್ಯಕ್ತಿ ಆಗಿ ಬಿರ್ಲಾ ಹೊರಹೊಮ್ಮಿದ್ದಾರೆ.

ಡೆಪ್ಯೂಟಿ ಸ್ಪೀಕರ್ ತಮಗೆ ನೀಡಿದರೆ ಮಾತ್ರ ಒಂ ಬಿರ್ಲಾಗೆ ಬೆಂಬಲ ನೀಡುತ್ತೇವೆ ಎಂದು ವಿಪಕ್ಷಗಳು ಪಟ್ಟು ಹಿಡಿದಿತ್ತು. ಆದರೆ ಬಿಜೆಪಿ ರಣತಂತ್ರದ ಮುಂದೆ ಕಾಂಗ್ರೆಸ್ ಹಾಗೂ ವಿಪಕ್ಷ ಮಂಕಾಗಿದೆ. ಅಡ್ಡಿ ಆತಂಕವಿಲ್ಲದೆ ಒಮ್ ಬಿರ್ಲಾ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಇದೀಗ ಡೆಪ್ಯೂಟಿ ಸ್ಪೀಕರ್ ಸ್ಥಾನವನ್ನು ಟಿಡಿಪಿಗೆ ನೀಡುವ ಮೂಲಕ ಮೈತ್ರಿ ಗಟ್ಟಿಗೊಳಿಸಲು ಕೆಲ ತಂತ್ರ ಹೂಡಿದೆ.

ನನಗೆ ಅಡ್ವೈಸ್ ಮಾಡಬೇಡಿ ಕುಳಿತುಕೊಳ್ಳಿ :ಕಾಂಗ್ರೆಸ್ ಸಂಸದನಿಗೆ ಸ್ಪೀಕರ್ ಕ್ಲಾಸ್

Latest Videos
Follow Us:
Download App:
  • android
  • ios