Asianet Suvarna News Asianet Suvarna News

ರಾಮೋಜಿ ರಾವ್ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ಚಂದ್ರಬಾಬು ನಾಯ್ಡು

ಮಾಧ್ಯಮ ಲೋಕದ ದಿಗ್ಗಜ, ಈಟಿವಿ ಈನಾಡು ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳ ಜನಕ ರಾಮೋಜಿ ರಾವ್ ಅವರು ನಿನ್ನೆನಿಧನರಾಗಿದ್ದು, ಅವರ ಪಾರ್ಥಿವ ಶರೀರಕ್ಕೆ ಟಿಡಿಪಿ ನಾಯಕ ಎನ್. ಚಂದ್ರಬಾಬು ನಾಯ್ಡು ಹೆಗಲು ಕೊಟ್ಟು ಸಾಗುತ್ತಿರುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

TDP Leader Chandrababu Naidu shouldered body of Industrialist and media mogul Ramoji Rao in Last Rites akb
Author
First Published Jun 9, 2024, 1:24 PM IST

ಹೈದರಾಬಾದ್: ಮಾಧ್ಯಮ ಲೋಕದ ದಿಗ್ಗಜ, ಈಟಿವಿ ಈನಾಡು ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳ ಜನಕ ರಾಮೋಜಿ ರಾವ್ ಅವರು ನಿನ್ನೆನಿಧನರಾಗಿದ್ದು, ಅವರ ಪಾರ್ಥಿವ ಶರೀರಕ್ಕೆ ಟಿಡಿಪಿ ನಾಯಕ ಎನ್. ಚಂದ್ರಬಾಬು ನಾಯ್ಡು ಹೆಗಲು ಕೊಟ್ಟು ಸಾಗುತ್ತಿರುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಮೋಜಿ ರಾವ್ ಅವರ ಅಂತ್ಯಕ್ರಿಯೆ ಇಂದು ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಬೆಳಗ್ಗೆ ನಡೆಯಿತು. ತೆಲಂಗಾಣ ಸರ್ಕಾರದ ಸರ್ಕಾರಿ ಗೌರವದೊಂದಿಗೆ ಮಾಧ್ಯಮ ದಿಗ್ಗಜ್ಜ ರಾಮೋಜಿ ರಾವ್ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ಕಾರ್ಯದಲ್ಲಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಭಾಗಿಯಾಗಿದ್ದರು. 

ಆಂಧ್ರ ಪ್ರದೇಶ ಸರ್ಕಾರವೂ ಕೂಡ ಮೂವರು ಐಎಎಸ್ ಅಧಿಕಾರಿಗಳನ್ನು ರಾಮೋಜಿ ರಾವ್ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ನೇಮಿಸಿತ್ತು. ಜೊತೆಗೆ ರಾಜ್ಯ ಸರ್ಕಾರವು ಜೂನ್ ನಿನ್ನೆ ಹಾಗೂ ಇಂದು ಎರಡು ದಿನಗಳ ಕಾಲ ಶೋಕಾಚರಣೆ ಘೋಷಿಸಿದೆ. ಹೈದರಾಬಾದ್‌ನ ಆಸ್ಪತ್ರೆಯಲ್ಲಿ ನಿನ್ನೆ ಮುಂಜಾನೆ ರಾಮೋಜಿ ರಾವ್ ಅವರು ನಿಧನರಾಗಿದ್ದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಮಾಧ್ಯಮ ದಿಗ್ಗಜ್ಜನ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಸೇರಿದಂತೆ ದೇಶದ  ಪ್ರಮುಖ ರಾಜಕೀಯ ನಾಯಕರು ಸೇರಿದಂತೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದರು. 

ಇಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣವಚನ ಸ್ವೀಕಾರ ಸಮಾರಂಭವಿದ್ದು, ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಕಿಂಗ್‌ ಮೇಕರ್‌ ಚಂದ್ರಬಾಬು ನಾಯ್ಡು ಇತ್ತ ಹೈದರಾಬಾದ್‌ನಲ್ಲಿ ಅಂತ್ಯಸಂಸ್ಕಾರ ಕಾರ್ಯದಲ್ಲಿ ಭಾಗಿಯಾಗಿರುವುದರಿಂದ ಅನೇಕರು ನಾಯ್ಡು ಪ್ರಮಾಣವಚನ ಸಮಾರಂಭದಲ್ಲಿ ಭಾಗಿಯಾಗುವುದಿಲ್ಲವೇ ಎಂದು ವೀಡಿಯೋ ನೋಡಿದ ಅನೇಕರು ಕುತೂಹಲದಿಂದ ಪ್ರಶ್ನೆ ಮಾಡಿದ್ದಾರೆ. 

ಇತ್ತ ರಾಮೋಜಿ ರಾವ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ನಾನು ರಾಮೋಜಿ ರಾವ್ ಅವರ ಬಗ್ಗೆ ಯೋಚಿಸಿದಾಗ, ನಾನು ಅವರ ಬಹುಮುಖ ಪ್ರತಿಭೆಯನ್ನು ನೆನಪಿಸಿಕೊಳ್ಳುತ್ತೇನೆ, ಅವರ ತೇಜಸ್ಸಿಗೆ ಸಮಾನಾಂತರವಿಲ್ಲ. ಅವರು ಕೃಷಿಕ ಕುಟುಂಬದಿಂದ ಬಂದವರು ಮತ್ತು ಸಿನಿಮಾ, ಮನೋರಂಜನೆ, ಮಾಧ್ಯಮ, ಕೃಷಿ, ಶಿಕ್ಷಣ ಮತ್ತು ಆಡಳಿತ ಮುಂತಾದ ವೈವಿಧ್ಯಮಯ ಪ್ರಪಂಚಗಳಲ್ಲಿ ತಮ್ಮದೇ ಛಾಪು ಮೂಡಿಸಿದವರು. ಇಷ್ಟೊಂದು ಎತ್ತರಕ್ಕೆ ಬೆಳೆದರು ಅವರ ಇಡೀ ಜೀವನ ಪಯಣದಲ್ಲಿ ಸಾಮಾನ್ಯವಾಗಿ ಉಳಿದುಕೊಂಡಿರುವುದು ಅವರ ನಮ್ರತೆ ಮತ್ತು ತಳಮಟ್ಟ ದೊಂದಿಗೆ ಅವರ ಸಂಪರ್ಕ. ಅವರ ಈ ಗುಣಲಕ್ಷಣಗಳು ಅವರನ್ನು ವಿಶಾಲ ವ್ಯಾಪ್ತಿಯ ಜನರಿಗೆ ಇಷ್ಟವಾಗುವಂತೆ ಮಾಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 

3ನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರಕ್ಕೂ ಮೊದಲು ಗಾಂಧಿ, ಅಟಲ್ ಸ್ಮಾರಕಕ್ಕೆ ಮೋದಿ ನಮನ

 

Latest Videos
Follow Us:
Download App:
  • android
  • ios