* ರಿಯಲ್‌ ಎಸ್ಟೇಟ್‌ ಕಂಪನಿಯಲ್ಲಿ 4 ದಿನದಿಂದ ಪರಿಶೀಲನೆ, 24 ಲಾಕರ್‌ ವಶ* 1 ಕೋಟಿ ನಗದು ಅಧಿಕಾರಿಗಳಿಂದ ಜಪ್ತಿ* ಐಟಿ ದಾಳಿ: ಗುಜರಾತ್‌ ಕಂಪನಿ 500 ಕೋಟಿ ರು. ಅಕ್ರಮ ಪತ್ತೆ

ನವದೆಹಲಿ(ಅ.02): ಗುಜರಾತಿನ(Gujarat) ರಿಯಲ್‌ ಎಸ್ಟೇಟ್‌ ಕಂಪನಿಯೊಂದರ(Real Estate company) ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ(IT Raid) ನಡೆಸಿದ್ದು, ಈ ವೇಳೆ 500 ಕೋಟಿ ರು.ಗೂ ಅಧಿಕ ದಾಖಲೆರಹಿತ ವಹಿವಾಟು ಪತ್ತೆಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಹಮದಾಬಾದ್‌ ಮೂಲದ ರಿಯಲ್‌ ಎಸ್ಟೇಟ್‌ ಕಂಪನಿ ಹಾಗೂ ಅದಕ್ಕೆ ಸಂಬಂಧಿಸಿದ ಬ್ರೋಕರ್‌ಗಳ ಮೇಲೆ ಸೆ.28ರಂದು ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಕಂಪನಿಯ 22 ಸ್ಥಳಗಳಲ್ಲಿ ಪರಿಶೀಲನೆ ಇನ್ನೂ ಮುಂದುವರಿದಿದೆ. ಈ ವೇಳೆ, ಕಂಪನಿಯ ಬಳಿ 200 ಕೋಟಿ ರು. ಅಧಿಕ ಅಕ್ರಮ ವಹಿವಾಟು ಬೆಳಕಿಗೆ ಬಂದಿದ್ದರೆ, ಬ್ರೋಕರ್‌ಗಳ ಬಳಿಯ ದಾಖಲೆಗಳ ಪರಿಶೀಲನೆ ವೇಳೆ 200 ಕೋಟಿ ರು. ದಾಖಲೆರಹಿತ ವಹಿವಾಟು ಪತ್ತೆಯಾಗಿದೆ ಎಂದು ತೆರಿಗೆ ಇಲಾಖೆ(IT Department) ಹೇಳಿಕೆಯಲ್ಲಿ ತಿಳಿಸಿದೆ.

ಇದೇ ವೇಳೆ 1 ಕೋಟಿ ರು. ನಗದು, 98 ಲಕ್ಷ ರು. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. 24 ಲಾಕರ್‌ಗಳ ಬಳಕೆಯನ್ನು ನಿರ್ಬಂಧಿಸಲಾಗಿದೆ. ಈ ಕಂಪನಿ ಆಸ್ತಿಯನ್ನು ಬೇನಾಮಿ ವ್ಯಕ್ತಿಗಳ ಹೆಸರಿನಲ್ಲಿ ಖರೀದಿಸಿರುವುದು ಪತ್ತೆಯಾಗಿದೆ.

ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳು, ಬಿಡಿ ಹಾಳೆಗಳು, ಡಿಜಿಟಲ್‌ ಸಾಕ್ಷ್ಯಗಳನ್ನು ರಿಯಲ್‌ ಎಸ್ಟೇಟ್‌ ಕಂಪನಿಯಿಂದ ವಶಪಡಿಸಿಕೊಳ್ಳಲಾಗಿದೆ. ಹಲವಾರು ಹಣಕಾಸು ವರ್ಷಗಳಲ್ಲಿ ಈ ಕಂಪನಿ ಅಕ್ರಮ ವಹಿವಾಟು ನಡೆಸಿರುವ ಮಾಹಿತಿಯನ್ನು ಈ ದಾಖಲೆಗಳು ಹೊಂದಿವೆ ಎಂದು ತೆರಿಗೆ ಇಲಾಖೆ ತಿಳಿಸಿದೆ.