ನವದೆಹಲಿ (ನ. 13): 2018​-19ನೇ ಸಾಲಿನ ಹಣಕಾಸು ವರ್ಷದಲ್ಲಿ ಚೆಕ್‌ ಮತ್ತು ಆನ್‌ಲೈನ್‌ ಪಾವತಿ ಮೂಲಕ 700 ಕೋಟಿ ರು. ದೇಣಿಗೆ ಸ್ವೀಕರಿಸಿರುವುದಾಗಿ ಬಿಜೆಪಿ ಬಹಿರಂಗಪಡಿಸಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಮಾಹಿತಿಯ ಪ್ರಕಾರ, ಬಿಜೆಪಿ ಸ್ವೀಕರಿಸಿದ ದೇಣಿಗೆಗಳ ಪೈಕಿ ಅರ್ಧದಷ್ಟುಹಣವನ್ನು ಟಾಟಾ ಸಮೂಹವೇ ನೀಡಿದೆ.

17 ಶಾಸಕರ ಅನರ್ಹತೆ ಎತ್ತಿ ಹಿಡಿದ ಸುಪ್ರೀಂಕೋರ್ಟ್: ಕೊಂಚ ರಿಲೀಫ್

ಟಾಟಾ ಸಮೂಹದ ನಿಯಂತ್ರಣದಲ್ಲಿರುವ ಪ್ರೋಗ್ರೆಸ್ಸಿವ್‌ ಎಲೆಕ್ಟೋರಲ್‌ ಟ್ರಸ್ಟ್‌ನಿಂದ ಬಿಜೆಪಿ 356 ಕೋಟಿ ರು. ದೇಣಿಗೆಯನ್ನು ಸ್ವೀಕರಿಸಿದೆ. ಭಾರತದ ಶ್ರೀಮಂತ ಟ್ರಸ್ಟ್‌ ಆಗಿರುವ ‘ದ ಪ್ರುಡೆಂಟ್‌ ಎಲೆಕ್ಟೋರಲ್‌ ಟ್ರಸ್ಟ್‌’ ಬಿಜೆಪಿಗೆ ದೇಣಿಗೆ ರೂಪದಲ್ಲಿ 54.25 ಕೋಟಿ ರು. ನೀಡಿದೆ. ಭಾರ್ತಿ ಗ್ರೂಪ್‌, ಹೀರೋ ಮೋಟೊಕಾಪ್‌ರ್‍, ಜುಬಿಲಿಯಂಟ್‌ ಫುಡ್‌ವರ್ಕ್ಸ್‌ ಸೇರಿದಂತೆ ಪ್ರಮುಖ ಕಾರ್ಪೊರೇಟ್‌ ಕಂಪನಿಗಳನ್ನು ಪ್ರುಡೆಂಟ್‌ ಟ್ರಸ್ಟ್‌ ಒಳಗೊಂಡಿದೆ.

20,000 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಹಣವನ್ನು ಪಕ್ಷ ಚೆಕ್‌ ಮತ್ತು ಆನ್‌ಲೈನ್‌ ಮೂಲಕ ಸ್ವೀಕರಿಸಿದೆ. ಇಲೆಕ್ಟೋರಿಯಲ್‌ ಬಾಂಡ್‌ಗಳ ಮೂಲಕ ಸ್ವೀಕರಿಸಿದ ದೇಣಿಗೆಯ ವಿವರಗಳನ್ನು ಬಿಜೆಪಿ ಚುನಾವಣಾ ಆಯೋಗಕ್ಕೆ ಸಲ್ಲಿಸಿಲ್ಲ.

ಶೋಧಿಸಿದ ಹೊಸ ಜೇಡಕ್ಕೆ ಸಚಿನ್ ಹೆಸರಿಟ್ಟ ಗುಜರಾತ್ ವಿಜ್ಞಾನಿ

ಚುನಾವಣಾ ಆಯೋಗದ ನಿಯಮದ ಪ್ರಕಾರ 20 ಸಾವಿರಕ್ಕಿಂತ ಕಡಿಮೆ ದೇಣಿಗೆ ನೀಡಿದ ಸಂಸ್ಥೆ ಅಥವಾ ವ್ಯಕ್ತಿಯ ಹೆಸರನ್ನು ಪಕ್ಷ ಬಹಿರಂಗಪಡಿಸಬೇಕಾದ ಅಗತ್ಯವಿಲ್ಲ. ಹೀಗಾಗಿ ಪಕ್ಷಕ್ಕೆ ಸಂದಾಯವಾಗುವ ಬಹುತೇಕ ದೇಣಿಗೆಗಳ ಮೂಲ ರಹಸ್ಯವಾಗಿಯೇ ಉಳಿಯಲಿದೆ.

ನವೆಂಬರ್ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: