*ದುರ್ಬಲವಾಗಿರುವೆಡೆ ಮೈತ್ರಿ ಮಾಡಿಕೊಳ್ಳಲು ಸಲಹೆ*ಸೋನಿಯಾ ಅಂಡ್‌ ಟೀಂಗೆ ತಂತ್ರಗಾರನ ಪ್ರಾತ್ಯಕ್ಷಿಕೆ*ಪಕ್ಷ ಸೇರಲು ಪ್ರಶಾಂತ್‌ಗೆ ಕಾಂಗ್ರೆಸ್ಸಿಂದ ಆಹ್ವಾನ*ಚುನಾವಣಾ ತಂತ್ರಗಾರನ ನಡೆ ಬಗ್ಗೆ ಕುತೂಹಲ

ನವದೆಹಲಿ (ಏ. 17): ಸತತ ಚುನಾವಣೆ ಸೋಲುಗಳಿಂದ ಮಂಕಾಗಿರುವ ಕಾಂಗ್ರೆಸ್ಸನ್ನು (Congress) ಪುನರುತ್ಥಾನಗೊಳಿಸುವ ಗಂಭೀರ ಪ್ರಯತ್ನವೊಂದು ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿ ಅವರಿಂದ ಆರಂಭವಾಗಿದೆ. ಶನಿವಾರ ದೆಹಲಿಯಲ್ಲಿ ಹಿರಿಯ ನಾಯಕರ ಸಭೆಯನ್ನು ಸೋನಿಯಾ ನಡೆಸಿದ್ದು, ಈ ವೇಳೆ ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ ಅವರು ಚುನಾವಣೆ ಎದುರಿಸುವ ಕುರಿತು ಪ್ರಾತ್ಯಕ್ಷಿಕೆಯೊಂದನ್ನು ನೀಡಿದ್ದಾರೆ.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿ ಹೂಡುವ ಬದಲಿಗೆ 370ರಿಂದ 400 ಕ್ಷೇತ್ರಗಳಿಗಷ್ಟೇ ಗಮನಕೇಂದ್ರೀಕರಿಸಬೇಕು. ಪಕ್ಷ ದುರ್ಬಲವಾಗಿರುವೆಡೆ ಮೈತ್ರಿ ಮಾಡಿಕೊಳ್ಳಬೇಕು ಎಂದು ಪ್ರಶಾಂತ್‌ ಕಿಶೋರ್‌ ಹೇಳಿದ್ದಾರೆ. ಅವರ ಈ ಶಿಫಾರಸುಗಳನ್ನು ಪರಿಶೀಲಿಸಿ, ಆ ವಿಚಾರವಾಗಿ ಮುಂದಡಿ ಇಡಲು ಸಣ್ಣ ಸಮಿತಿಯೊಂದನ್ನು ರಚನೆ ಮಾಡಲಾಗುತ್ತದೆ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಕೆ.ಸಿ. ವೇಣುಗೋಪಾಲ್‌ ತಿಳಿಸಿದ್ದಾರೆ.

ಇದನ್ನೂ ಓದಿ:'ಬಿಜೆಪಿಗೆ ನಷ್ಟ ಮಾಡಲು ರಾಹುಲ್ ಗಾಂಧಿ ಅಜ್ಜಿಯಿಂದಲೇ ಆಗಿಲ್ಲ, ಇನ್ನು ಮೊಮ್ಮಗನಿಂದ ಏನಾಗುತ್ತೆ'

ಇದೇ ವೇಳೆ, ಪಕ್ಷದ ಪರ ಚುನಾವಣಾ ತಂತ್ರಗಾರರಾಗಿ ಕೆಲಸ ಮಾಡುವ ಬದಲಿಗೆ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಪ್ರಶಾಂತ್‌ ಕಿಶೋರ್‌ ಅವರಿಗೆ ನಾಯಕರು ಆಹ್ವಾನ ನೀಡಿದ್ದಾರೆ. ಹೀಗಾಗಿ ಅವರು ಮುಂದೇನು ಮಾಡುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಆದರೆ ಪ್ರಶಾಂತ್‌ ಕಿಶೋರ್‌ ಕಾಂಗ್ರೆಸ್‌ ಸೇರುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇಲ್ಲ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಇದೇ ವೇಳೆ, ಮಾಸಾಂತ್ಯಕ್ಕೆ ರಾಜಸ್ಥಾನದಲ್ಲಿ ಚಿಂತನ ಶಿಬಿರ ನಡೆಸಿ ಮುಂಬರುವ ಗುಜರಾತ್‌ ಹಾಗೂ ಹಿಮಾಚಲಪ್ರದೇಶ ವಿಧಾನಸಭೆ ಚುನಾವಣೆಯ ತಂತ್ರಗಾರಿಕೆ ಕುರಿತು ಚರ್ಚೆ ನಡೆಸಲು ಕಾಂಗ್ರೆಸ್‌ ಉದ್ದೇಶಿಸಿದೆ. ಶನಿವಾರದ ಸಭೆಯಲ್ಲೂ ಆ ಎರಡೂ ರಾಜ್ಯಗಳ ಚುನಾವಣೆ ಕುರಿತು ಚರ್ಚೆ ನಡೆದಿದೆ.

ಸೋನಿಯಾ ನಿವಾಸದಲ್ಲಿ ನಡೆದ ಪ್ರಶಾಂತ್‌ ಕಿಶೋರ್‌ ಜತೆಗಿನ ಸಭೆಯಲ್ಲಿ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್‌, ಅಂಬಿಕಾ ಸೋನಿ, ಅಜಯ್‌ ಮಾಕನ್‌ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಇದ್ದರು.

ಇದನ್ನೂ ಓದಿ:ಸಂತೋಷ್‌ ಆತ್ಮಹತ್ಯೆ ಕೇಸ್‌: ಎರಡೂ ಪಕ್ಷಗಳಿಗೆ ಮಾತನಾಡುವ ನೈತಿಕತೆ ಇಲ್ಲ: ಭಾಸ್ಕರ್ ರಾವ್

2ನೇ ಸುತ್ತಿನ ಸಂಧಾನ: ಈ ಮೊದಲು ಕಾಂಗ್ರೆಸ್‌ ಪರ ಪ್ರಶಾಂತ್‌ ಕಿಶೋರ್‌ ಅವರು ಚುನಾವಣಾ ತಂತ್ರಗಾರಿಕೆ ಮಾಡಿಕೊಟ್ಟಿದ್ದರಾದರೂ, ಆನಂತರ ಕಾಂಗ್ರೆಸ್‌ ಜತೆಗಿನ ಅವರ ಸಂಬಂಧ ಹಳಸಿತ್ತು. ಹಲವು ಸಂದರ್ಭದಲ್ಲಿ ಅವರು ರಾಹುಲ್‌ ಗಾಂಧಿ ವಿರುದ್ಧವೇ ಟೀಕೆ ಮಾಡಿದ್ದರು. ಪ್ರಶಾಂತ್‌ ಅವರ ಮಾಜಿ ಆಪ್ತನನ್ನು ಚುನಾವಣಾ ತಂತ್ರಗಾರಿಕೆಗೆ ಕಾಂಗ್ರೆಸ್‌ ಬಳಸಿಕೊಂಡಿತ್ತು. ಇದೀಗ ಕಾಂಗ್ರೆಸ್‌ ಹಾಗೂ ಪ್ರಶಾಂತ್‌ ಮತ್ತೆ ಒಂದಾಗಿದ್ದಾರೆ.

ಪ್ರಶಾಂತ್‌ ಕಾಂಗ್ರೆಸ್‌ಗೆ?: ಈ ಮೊದಲು ಕಾಂಗ್ರೆಸ್‌ ಪರ ಪ್ರಶಾಂತ್‌ ಕಿಶೋರ್‌ ಚುನಾವಣಾ ತಂತ್ರಹಗಾರಿಕೆ ಮಾಡಿಕೊಟ್ಟಿದ್ದರಾದರೂ, ಅನಂತರ ಕಾಂಗ್ರೆಸ್‌ ಜತೆಗಇನ ಅವರ ಸಂಬಂಧ ಹಳಸಿತ್ತು. ಹಲವು ಸಂದರ್ಭಗಳಲ್ಲಿ ಅವರು ರಾಹುಲ್‌ ಗಾಂಧಿ ವಿರುದ್ಧವೇ ಟಿಕೇ ಮಾಡಿದ್ದರು. ಪ್ರಶಾಂತ್‌ ಅವರ ಮಾಹಿ ಆಪ್ತನ್ನು ಚುನಾವಣಾ ತಂತ್ರಗಾರಿಕೆಗೆ ಕಾಂಗ್ರೆಸ್‌ ಬಳಸಿಕೊಂಡಿತ್ತು. ಇದೀಗ ಕಾಂಗ್ರೆಸ್‌ ಹಾಗೂ ಪ್ರಶಾಂತ್‌ ಮತ್ತೆ ಒಂದಾಗಿದ್ದಾರೆ