ತಮಿಳುನಾಡು ಸರ್ಕಾರದ ಎಲ್ಲಾ ಅನಾಹುತಗಳಿಗೂ ಸ್ಟಾಲಿನ್‌ರ ಪುತ್ರ ಮತ್ತು ಅಳಿಯನೇ ಕಾರಣ ಎಂದು ಟೀಕಿಸಿದ್ದಾರೆ ಎನ್ನಲಾದ ಸಚಿವ ಪಿ.ತ್ಯಾಗರಾಜನ್ ಅವರಿಂದ ಹಣಕಾಸು ಖಾತೆಯನ್ನು ಕಿತ್ತುಕೊಳ್ಳಲಾಗಿದೆ.
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಸಚಿವ ಸಂಪುಟದ ಹಲವರು ಭಾರೀ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಸ್ವತಃ ಸ್ಟಾಲಿನ್‌ರ ಪುತ್ರ ಉದಯನಿಧಿ ಮತ್ತು ಅಳಿಯ 30000 ಕೋಟಿ ರು.ನಷ್ಟುಅಕ್ರಮ ಆಸ್ತಿ ಸಂಪಾದಿಸಿದ್ದಾರೆ. ಸರ್ಕಾರದ ಎಲ್ಲಾ ಅನಾಹುತಗಳಿಗೂ ಸ್ಟಾಲಿನ್‌ರ ಪುತ್ರ ಮತ್ತು ಅಳಿಯನೇ ಕಾರಣ ಎಂದು ಟೀಕಿಸಿದ್ದಾರೆ ಎನ್ನಲಾದ ಸಚಿವ ಪಿ.ತ್ಯಾಗರಾಜನ್ ಅವರಿಂದ ಹಣಕಾಸು ಖಾತೆಯನ್ನು ಕಿತ್ತುಕೊಳ್ಳಲಾಗಿದೆ.
ಗುರುವಾರ ತಮ್ಮ ಸಂಪುಟದಲ್ಲಿ ಕೆಲ ಬದಲಾವಣೆ ಮಾಡಿರುವ ಸ್ಟಾಲಿನ್(Stalin), ತ್ಯಾಗರಾಜನ್ (ಅವರಿಂದ ಪ್ರಮುಖವಾದ ಹಣಕಾಸು ಖಾತೆ ಕಿತ್ತುಕೊಂಡು ಅದನ್ನು ಪಕ್ಷನಿಷ್ಟ ಥಂಗಮ್ ಥೆನ್ನರಸು (thangam Thennarasu) ಅವರಿಗೆ ನೀಡಿದ್ದಾರೆ. ಇನ್ನು ತ್ಯಾಗರಾಜನ್ ಅವರಿಗೆ ಮಾಹಿತಿ ತಂತ್ರಜ್ಞಾನ ಖಾತೆ ನೀಡಲಾಗಿದೆ. ಜೊತೆಗೆ ಕೇಂದ್ರದ ಮಾಜಿ ಸಚಿವ ಟಿ.ಆರ್.ಬಾಲು ಅವರ ಪುತ್ರ ಟಿಆರ್‌ಬಿ ರಾಜಾ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಕೈಗಾರಿಕಾ ಖಾತೆ ನೀಡಲಾಗಿದೆ.
ಸುಪ್ರೀಂ ಅನುಮತಿ ಬೆನ್ನಲ್ಲೇ ತಮಿಳುನಾಡಿನ 45 ಕಡೆ ಆರೆಸ್ಸೆಸ್ ಪಥಸಂಚಲನ
ಇತ್ತೀಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ (Annamalai) ಎರಡು ಆಡಿಯೋಗಳನ್ನು ಬಿಡುಗಡೆ ಮಾಡಿದ್ದರು. ಅದರಲ್ಲಿ ಸ್ಟಾಲಿನ್ ಕುಟುಂಬದ ಬಗ್ಗೆ ತ್ಯಾಗರಾಜನ್ ಭ್ರಷ್ಟಾಚಾರದ ಆರೋಪ ಮಾಡಿದ ಅಂಶಗಳಿದ್ದವು. ಆದರೆ ಈ ಆಡಿಯೋ ತಿರುಚಲಾಗಿದೆ ಎಂದು ತ್ಯಾಗರಾಜನ್ ಹೇಳಿಕೊಂಡಿದ್ದರೂ, ಪಕ್ಷಕ್ಕೆ ಭಾರೀ ಮುಜುಗರ ಉಂಟು ಮಾಡಿತ್ತು.
ರಸ್ತೆ ಎಷ್ಟು ಕೆಟ್ಟದಾಗಿದೆ ಅಂದ್ರೆ ನಾನು ರೈಲಿನಲ್ಲಿ ಪ್ರಯಾಣಿಸ್ತಿದ್ದೇನೆ: ಗಡ್ಕರಿಗೆ ತಮಿಳುನಾಡು ಸಿಎಂ ಪತ್ರ
ಮೋದಿ ಸರ್ಕಾರ ಅನೇಕ ಹೊಸ ರಸ್ತೆಗಳನ್ನು ಉದ್ಘಾಟಿಸುತ್ತಲೇ ಇದ್ದು, ಅನೇಕ ಹೊಸ ಯೋಜನೆಗಳನ್ನು ಸಹ ಕೈಗೆತ್ತಿಕೊಳ್ಳುತ್ತಿದೆ. ರಾಷ್ಟ್ರೀಯ ಹೆದ್ದಾರಿ, ಎಕ್ಸ್‌ಪ್ರೆಸ್‌ವೇ ಮುಂತಾದ ರಸ್ತೆಗಳು ಉದ್ಘಾಟನೆಯಾಗುತ್ತಿವೆ. ಈ ಕಾರಣಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆದರೆ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ರಸ್ತೆ ಸಂಪರ್ಕದ ದುಸ್ಥಿತಿ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಇತ್ತೀಚೆಗೆ ಪತ್ರ ಬರೆದಿದ್ದರು.
ಚೆನ್ನೈನಿಂದ ರಾಣಿಪೇಟ್ ರಾಷ್ಟ್ರೀಯ ಹೆದ್ದಾರಿ ನಡುವಿನ ರಸ್ತೆ ಸಂಪರ್ಕದ ದುಃಸ್ಥಿತಿ ಕುರಿತು ಪತ್ರ ಬರೆದಿದ್ದು, ರಸ್ತೆಯ ಸ್ಥಿತಿ ತುಂಬಾ ಹದಗೆಟ್ಟಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಹೇಳಿಕೊಂಡಿದ್ದಾರೆ. ಅಲ್ಲದೆ, ಈ ಕಾರಣದಿಂದ ಇತ್ತೀಚೆಗೆ ಕೆಲವು ಜಿಲ್ಲೆಗಳಿಗೆ ರೈಲಿನಲ್ಲಿ ಭೇಟಿ ನೀಡಬೇಕಾಯ್ತು ಎಂದೂ ಪತ್ರದಲ್ಲಿ ತಿಳಿಸಿದ್ದಾರೆ.
ತಮಿಳ್ನಾಡಲ್ಲಿ ಸರ್ಕಾರ vs ಗೌರ್ನರ್: ಸರ್ಕಾರ ಬರೆದುಕೊಟ್ಟ ಭಾಷಣ ಓದದ ರಾಜ್ಯಪಾಲರ ವಿರುದ್ಧ ನಿರ್ಣಯ..!
ರಸ್ತೆ ವಿಭಾಗವು ಚೆನ್ನೈ ಮತ್ತು ಅದರ ಬಂದರುಗಳಿಂದ ಕಾಂಚೀಪುರಂ, ವೆಲ್ಲೂರು, ರಾಣಿಪೇಟ್, ಹೊಸೂರು ಮತ್ತು ಕೃಷ್ಣಗಿರಿಯ ಕೈಗಾರಿಕಾ ಕ್ಲಸ್ಟರ್‌ಗಳಿಗೆ ಪ್ರಮುಖ ಸಂಪರ್ಕ ಒದಗಿಸುತ್ತದೆ ಎಂದು ತಮಿಳುನಾಡು ಸಿಎಂ ಸ್ಟಾಲಿನ್ ಹೇಳಿದ್ದಾರೆ. ಅಲ್ಲದೆ, ಡಿಎಂಕೆ ಸಂಸದ ದಯಾನಿಧಿ ಮಾರನ್ ಅವರು ಸಂಸತ್‌ನಲ್ಲಿ ಈ ಬಗ್ಗೆ ಈಗಾಗಲೇನಿರ್ದಿಷ್ಟ ಮನವಿ ಮಾಡಿದ್ರೂ ಕೇಂದ್ರ ಸಚಿವರು ಸಾಮಾನ್ಯ ಉತ್ತರ ನೀಡಿದ್ದು, ಬದ್ಧತೆ ತೋರಲಿಲ್ಲ ಎಂದೂ ಪತ್ರದಲ್ಲಿ ಆರೋಪಿಸಲಾಗಿದೆ.
"ಚೆನ್ನೈನಿಂದ ರಾಣಿಪೇಟೆಗೆ (NH-4) ಅಸ್ತಿತ್ವದಲ್ಲಿರುವ ರಸ್ತೆಯ ಸ್ಥಿತಿಯನ್ನು ಸುಧಾರಿಸಲು ಸಂಸತ್ತಿನಲ್ಲಿ ಸಂಸದರಾದ ತಿರು. ದಯಾನಿಧಿ ಮಾರನ್ ಅವರು ಮಾಡಿದ ಮನವಿಯನ್ನು ನಿಮ್ಮ ಗಮನಕ್ಕೆ ತರಲು ನಾನು ಬಯಸುತ್ತೇನೆ. ಈ ವಿಭಾಗವು ಚೆನ್ನೈ ನಗರ ಮತ್ತು ಅದರ ಬಂದರುಗಳಿಂದ ಕಾಂಚೀಪುರಂ, ವೆಲ್ಲೂರು, ರಾಣಿಪೇಟ್, ಹೊಸೂರು ಮತ್ತು ಕೃಷ್ಣಗಿರಿಯ ಕೈಗಾರಿಕಾ ಕ್ಲಸ್ಟರ್‌ಗಳಿಗೆ ಪ್ರಮುಖ ಸಂಪರ್ಕ ಒದಗಿಸುತ್ತದೆ. ಆದರೆ, ರಸ್ತೆಯ ಸ್ಥಿತಿ ತುಂಬಾ ಕೆಟ್ಟದಾಗಿದೆ, ಈ ಹಿನ್ನೆಲೆ ನಾನು ಇತ್ತೀಚಿನ ಕೆಲವು ಜಿಲ್ಲೆಗಳಿಗೆ ರೈಲಿನಲ್ಲಿ ನನ್ನ ಭೇಟಿಯನ್ನು ಯೋಜಿಸಬೇಕಾಗಿತ್ತು. ನಮ್ಮ ಸಂಸದರು ಈ ಪ್ರಮುಖ ರಸ್ತೆಯ ಬಗ್ಗೆ ಬಹಳ ನಿರ್ದಿಷ್ಟವಾಗಿದ್ದರು. ಆದರೆ, ನಿಮ್ಮ ಉತ್ತರದಿಂದ ನಾವು ನಿರಾಶೆಗೊಂಡಿದ್ದೇವೆ, ಅದು ತುಂಬಾ ಸಾಮಾನ್ಯ ಮತ್ತು ಬದ್ಧವಾಗಿಲ್ಲ ಎಂದು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಪತ್ರದಲ್ಲಿ ತಿಳಿಸಿದ್ದಾರೆ.