ವಿಧವೆ ದೇಗುಲ ಪ್ರವೇಶಕ್ಕೆ ಮದ್ರಾಸ್ ಹೈಕೋರ್ಟ್ ಅಸ್ತು: ನಿರ್ಬಂಧ ಹೇರಿದ್ದ ದೇಗುಲ ಆಡಳಿತಕ್ಕೆ ಕ್ಲಾಸು
ವಿಧವೆ ಮಹಿಳೆಗೆ ದೇಗುಲಕ್ಕೆ ಪ್ರವೇಶ ನಿರ್ಬಂಧಿಸಿದಕ್ಕಾಗಿ ದೇವಾಲಯ ಆಡಳಿತ ಮಂಡಳಿಯೊಂದನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಮದ್ರಾಸ್ ಹೈಕೋರ್ಟ್, ಮಹಿಳೆಗೆ ದೇಗುಲಕ್ಕೆ ಪ್ರವೇಶ ಒದಗಿಸುವಂತೆ ಆದೇಶಿಸಿದೆ.
ಚೆನ್ನೈ: ನಾವಿಂದು ಚಂದ್ರಯಾನದ ಯಶಸ್ಸಿನ ಹೊಸ್ತಿಲಲ್ಲಿದ್ದೇವೆ. ಅಡುಗೆ ಮನೆಯಿಂದ ಅಂತರಿಕ್ಷದವರೆಗೂ ಸ್ತ್ರೀ ಎಲ್ಲಾ ಕ್ಷೇತ್ರಗಳಲ್ಲಿ ತನ್ನನ್ನು ತಾನು ಯಶಸ್ವಿಯಾಗಿ ತೊಡಗಿಸಿಕೊಂಡಿದ್ದಾಳೆ. ಆದರೂ ಸಂಪ್ರದಾಯದ ನೆಪವೊಡ್ಡಿ ಆಕೆಯನ್ನು ನಾಲ್ಕು ಗೋಡೆಗಳ ಮಧ್ಯೆ ಕಟ್ಟಿ ಹಾಕುವ ಪ್ರಯತ್ನ ಮತ್ತೆ ಮತ್ತೆ ನಡೆಯುತ್ತಲೇ ಇದೆ. ಅದೇ ರೀತಿ ಪತಿಯನ್ನು ಕಳೆದುಕೊಂಡು ಶೋಕದಲ್ಲಿದ್ದ ಸ್ತ್ರೀಗೆ ದೇಗುಲ ಪ್ರವೇಶಿಸಲು ನಿರಾಕರಿಸಿದ ನಾಚಿಕೆಗೇಡಿನ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಆದರೆ ದಿಟ್ಟ ಮಹಿಳೆ ಕೋರ್ಟ್ ಮೆಟ್ಟಲೇರಿದ್ದು, ನ್ಯಾಯಾಲಯ ದೇಗುಲ ಆಡಳಿತ ಮಂಡಳಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದೆ. ಅಂದಹಾಗೆ ತಮಿಳುನಾಡಿನ ಸೇಲಂ ಜಿಲ್ಲೆಯ ಪೆರಿಯ ಕರುಪಾರಾಯಣ ದೇಗುಲದಲ್ಲಿ ಈ ಅವಾಂತರ ನಡೆದಿದೆ.
ವಿಧವೆ ಮಹಿಳೆಗೆ ದೇಗುಲಕ್ಕೆ ಪ್ರವೇಶ ನಿರ್ಬಂಧಿಸಿದಕ್ಕಾಗಿ ದೇವಾಲಯ ಆಡಳಿತ ಮಂಡಳಿಯೊಂದನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಮದ್ರಾಸ್ ಹೈಕೋರ್ಟ್, ಮಹಿಳೆಗೆ ದೇಗುಲಕ್ಕೆ ಪ್ರವೇಶ ಒದಗಿಸುವಂತೆ ಆದೇಶಿಸಿದೆ. ಸೇಲಂ ಜಿಲ್ಲೆಯ ಪೆರಿಯ ಕರುಪಾರಾಯಣ ದೇಗುಲದಲ್ಲಿ ಮಹಿಳೆಯ ಪತಿ ಪುರೋಹಿತರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಅವರ ಮರಣಾನಂತರ ಮಹಿಳೆಯನ್ನು 'ಅಪವಿತ್ರ' ಎಂಬ ಕಾರಣವೊಡ್ಡಿ ದೇಗುಲ ಪ್ರವೇಶಿಸದಂತೆ ದೇಗುಲದ ಕೆಲವು ಪ್ರಮುಖರು ನಿರ್ಬಂಧ ಹೇರಿದ್ದರು. ಜೊತೆಗೆ ಆ.9ರಂದು ನಡೆಯುವ ಉತ್ಸವಕ್ಕೆ ಬರದಂತೆ ಕೂಡ ನಿರ್ಬಂಧ ಹೇರಿತ್ತು. ಇದನ್ನು ಪ್ರಶ್ನಿಸಿ ಆಕೆ ಆಡಳಿತ ಮಂಡಳಿಗೆ ದೂರು ನೀಡಿದ್ದರು. ಆದರೂ ಮಂಡಳಿ ಕ್ರಮ ತೆಗೆದುಕೊಳ್ಳದ ಕಾರಣ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಪೀಠ, ಈ ರೀತಿ ವಿಧವೆ ಪಟ್ಟನೀಡಿ ದೇಗುಲ ಪ್ರವೇಶ ನಿರ್ಬಂಧ ಅಕ್ಷಮ್ಯ. ಮಹಿಳೆಗೆ ದೇಗುಲಕ್ಕೆ ಪ್ರವೇಶಕ್ಕೆ ಅವಕಾಶ ನೀಡಬೇಕು. ಅಲ್ಲದೆ, ನಿರ್ಬಂಧ ಹೇರಿದ್ದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದೆ.
ಲೈಂಗಿಕ ದೌರ್ಜನ್ಯದ ಕಾನೂನುಗಳೇ ಪುರುಷ ವಿರೋಧಿ: ಅಲಹಾಬಾದ್ ಹೈಕೋರ್ಟ್
ಒಪ್ಪಿಗೆಯ ಸೆಕ್ಸ್ : 17ರ ಬಾಲೆ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿದ ಕೋರ್ಟ್