ಚೆನ್ನೈ[ಜ.02]: ‘ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಮುಸ್ಲಿಮರು ಇನ್ನೂ ಏಕೆ ಮುಗಿಸಿಲ್ಲವೋ ಗೊತ್ತಿಲ್ಲ. ಮೋದಿ ಅವರ ಮಿದುಳು ಶಾ. ಇಬ್ಬರನ್ನೂ ಇಷ್ಟೊತ್ತಿಗೇ ಮುಗಿಸಿಬಿಡಬೇಕಿತ್ತು. ಅದು ಯಾಕೆ ಸಾಧ್ಯವಾಗಿಲ್ಲವೋ ಗೊತ್ತಿಲ್ಲ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳು ವಿಚಾರವಾದಿ ನೆಲ್ಲೈಕಣ್ಣನ್‌ ಅವರನ್ನು ಪೆರಂಬಲೂರಿನಲ್ಲಿ ಭಾನುವಾರ ಬಂಧಿಸಲಾಗಿದೆ.

ಏನಿದು ವಿವಾದ?

ಪೌರತ್ವ ಕಾಯ್ದೆ ವಿರೋಧಿಸಿ ಎಸ್‌ಡಿಪಿಐ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮಾತನಾಡಿದ ತಮಿಳು ವಿಚಾರವಾದಿ ನೆಲ್ಲೈ ಕಣ್ಣನ್‌ ‘ಅಮಿತ್‌ ಶಾ ಪ್ರಧಾನಿ ಮೋದಿ ಅವರ ಮೆದುಳಿನಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಅವರನ್ನು ಮುಗಿಸಿದರೆ, ಮೋದಿ ಕಥೆಯೂ ಮುಗಿದಂತೆ. ಹೀಗಾಗಿಯೇ ಮೊದಲು ಅವರನ್ನು ಮುಗಿಸಬೇಕು. ಪೌರತ್ವ ವಿರೋಧಿ ಹೋರಾಟದ ವೇಳೆಯೇ ಇಂಥದ್ದೊಂದು ಆಗಲಿ ಎಂದು ನಾನು ಕಾಯುತ್ತಿದ್ದೇನೆ. ಆದರೆ ಮುಸ್ಲಿಮರು ಏನೂ ಮಾಡುತ್ತಿಲ್ಲ’ ಎಂದು ಹೇಳಿದ್ದಾರೆ.