ನಮಕ್ಕಲ್‌[ನ.25]: ಹಳೆಯ ಪತ್ರಿಕೆ, ಸಾಮಾನುಗಳನ್ನು ವ್ಯಾಪಾರಿಗೆ ನೀಡುವ ವೇಳೆ ಮಹಿಳೆಯೋರ್ವಳು 5 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಆಕಸ್ಮಿಕವಾಗಿ ಕೊಟ್ಟಘಟನೆ ತಮಿಳುನಾಡಿನಲ್ಲಿ ನಡೆದಿದೆ.

ರಾಸಿಪುರಂನ ವಿಘ್ನೇಶ್‌ ನಗರದ ಕಲಾದೇವಿ ಎಂಬುವವರು ತಮ್ಮಲ್ಲಿನ ಹಳೆಯ ಪತ್ರಿಕೆ, ನೋಟ್‌ಬುಕ್‌ಗಳು, ಪ್ಲಾಸ್ಟಿಕ್‌ ವಸ್ತುಗಳನ್ನು ವ್ಯಾಪಾರಿಗೆ ನೀಡಿದ್ದಾಳೆ. ಕೆಲ ಸಮಯದ ಬಳಿಕ ಹಳೆಯ ಪತ್ರಿಕೆಯಲ್ಲಿ ಚಿನ್ನಾಭರಣ ಇದ್ದ ಸಂಗತಿ ನೆನಪಿಗೆ ಬಂದಿದೆ. ಆ ವ್ಯಾಪಾರಿಯನ್ನು ಹುಡುಕಿದರೂ ಸಿಗದ ಕಾರಣ ಪೊಲೀಸ್‌ ಠಾಣೆಯಲ್ಲಿ ಆಕೆ ದೂರು ನೀಡಿದ್ದಾಳೆ.

ಚಿನ್ನದ ಬೆಲೆ ಲೆಕ್ಕ ಹಾಕೋದ್ಹೇಗೆ?

ಸಿಸಿಟಿವಿ ಪರಿಶೀಲನೆ ನಡೆಸಿದ ಪೊಲೀಸರು ಆ ವ್ಯಾಪಾರಿಯನ್ನು ಪತ್ತೆ ಹಚ್ಚಿದ್ದಾರೆ. ಈ ವೇಳೆ ಬೆಲೆಬಾಳುವ ಚಿನ್ನಾಭರಣವನ್ನು ವ್ಯಾಪಾರಿ ಹಿಂದಿರುಗಿಸಿದ್ದಾನೆ. ಇದರಿಂದ ಸಂತುಷ್ಟಗೊಂಡ ಕಲಾದೇವಿ ವ್ಯಾಪಾರಿಗೆ 10 ಸಾವಿರ ರು. ನೀಡಿದ್ದಾಳೆ.

ಮತ್ತೆ ಏರಿದ ಬಂಗಾರ: ಹಾಕೋರಿಲ್ವಾ ಯಾರೂ ಮೂಗುದಾರ?

ಪೇಪರ್‌ಗಳ ನಡುವೆ ಚಿನ್ನದ ಆಭರಣಗಳನ್ನಿರಿಸಿದ ಕುರಿತಾಗಿ ಪ್ರತಿಕ್ರಿಯಿಸಿರುವ ಕಲಾದೇವಿ 'ನಾವಿದ್ದ ಪ್ರದೇಶದಲ್ಲಿ ಹಲವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಹೀಗಿರುವಾಗ ನಮ್ಮ ಮನೆಯಲ್ಲೂ ಕಳ್ಳತನ ನಡೆಯುತ್ತದೆ ಎಂಬ ಭಯದಲ್ಲಿ ಪೇಪರ್‌ಗಳ ನಡುವೆ ಚಿನ್ನದ ಆಭರಣಗಳನ್ನು ಬಚ್ಚಿಟ್ಟಿದ್ದೆ. ಆದರೆ ವ್ಯಾಪಾರಿಗೆ ಪೇಪರ್ ಕೊಂಡೊಯ್ಯಲು ತಿಳಿಸಿದಾಗ ಮರೆತಿದ್ದೆ. ಹೀಗಾಗಿ ಈ ಪರಿಸ್ಥಿತಿ ನಿರ್ಮಾಣವಾಯ್ತು' ಎಂದಿದ್ದಾರೆ.