Asianet Suvarna News Asianet Suvarna News

ಮತ್ತೆ ಏರಿದ ಬಂಗಾರ: ಹಾಕೋರಿಲ್ವಾ ಯಾರೂ ಮೂಗುದಾರ?

ಅಚ್ಚರಿ ಎಂಬಂತೆ ಏರಿಕೆಯತ್ತ ಮುಖ ಮಾಡಿದ ಚಿನ್ನದ ದರ| ನವೆಂಬರ್ ಆರಂಭದಿಂದಲೇ ನಿರಂತರವಾಗಿ ಇಳಿಯುತ್ತಿದ್ದ ಚಿನ್ನದ ದರ| ದೇಶೀಯ ಮಾರುಕಟ್ಟೆಯಲ್ಲಿ10 ಗ್ರಾಂ ಚಿನ್ನದ ಬೆಲೆ ಇದೀಗ 38,040 ರೂ.| ಒಂದು ಕೆಜಿ ಬೆಳ್ಳಿ ಬೆಲೆ ಇದೀಗ ದೇಶೀಯ ಮಾರುಕಟ್ಟೆಯಲ್ಲಿ 44,771 ರೂ.| ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಂಡ ಚಿನ್ನದ ದರ| 

Gold and Silver Prices Rise After 3 Day Fall
Author
Bengaluru, First Published Nov 23, 2019, 3:39 PM IST

ನವದೆಹಲಿ(ನ.23): ನವೆಂಬರ್ ಆರಂಭದಿಂದಲೇ ನಿರಂತರವಾಗಿ ಇಳಿಯುತ್ತಿದ್ದ ಚಿನ್ನದ ದರ, ಏಕಾಏಕಿ ಏರಿಕೆ ಕಾಣುವ ಮೂಲಕ ಆಭರಣ ಪ್ರೀಯರಲ್ಲಿ ನಿರಾಸೆ ಮೂಡಿಸಿದೆ.

ದೇಶೀಯ ಮಾರುಕಟ್ಟೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಇಳಿಕೆ ಕಂಡಿದ್ದ ಚಿನ್ನದ ದರ, ಇಂದು ದಿಢೀರ್ ಏರಿಕೆ ಕಾಣುವ ಮೂಲಕ ಅಚ್ಚರಿ ಮೂಡಿಸಿದೆ.

ಫೆವರಿಟ್ ಬಂಗಾರ ಇಳಿದಿದೆ: ಖರೀದಿ ಭರದಿಂದ ಸಾಗಿದೆ!

ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ ಚಿನ್ನದ ಬೆಲೆಯಲ್ಲಿ ಶೇ.0.23ರಷ್ಟು ಏರಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ ಇದೀಗ 38,040 ರೂ. ಆಗಿದೆ.

ಅದರಂತೆ ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ ಬೆಳ್ಳಿ ಬೆಲೆಯಲ್ಲೂ ಏರಿಕೆ ಕಂಡು ಬಂದಿದ್ದು, ಒಟ್ಟು ಶೇ.0.07ರಷ್ಟು ಏರಿಕೆ ಕಂಡಿದೆ.

ಒಟ್ಟು 2,300 ರೂ. ಕುಸಿದ ಚಿನ್ನದ ದರ: ಚಿನ್ನದಷ್ಟೇ ಚೆಂದ ವಹಿವಾಟು!

ಒಂದು ಕೆಜಿ ಬೆಳ್ಳಿ ಬೆಲೆ ಇದೀಗ ದೇಶೀಯ ಮಾರುಕಟ್ಟೆಯಲ್ಲಿ ಬರೋಬ್ಬರಿ 44,771 ರೂ. ಆಗಿದೆ.

ಇದಕ್ಕೆ ತದ್ವಿರುದ್ಧವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸ್ಥಿರತೆ ಕಾಯ್ದುಕೊಂಡಿದ್ದು, ಒಂದು ಔನ್ಸ್ ಚಿನ್ನದ ಬೆಲೆಗೆ 1,464.36 ಡಾಲರ್ ಆಗಿದೆ.

ಕುಸಿದ ಚಿನ್ನದ ದರ: ನವೆಂಬರ್‌ ಆಗಲಿದೆಯೇ ಶುಭ ಸುದ್ದಿಗಳ ಆಗರ?

Follow Us:
Download App:
  • android
  • ios