ಚೆನ್ನೈ(ಮೇ.15): ಕೋವಿಡ್ -19 ಎದುರಿಸಲು ರಾಜ್ಯ ಸರ್ಕಾರಕ್ಕೆ ಸಹಾಯ ಮಾಡಲು ಮುಖ್ಯಮಂತ್ರಿ ಪರಿಹಾರ ನಿಧಿಗೆ (ಸಿಎಂಪಿಆರ್ಎಫ್) ಕೊಡುಗೆ ನೀಡುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಮನವಿಯನ್ನು ಅನುಸರಿಸಿ 59 ವರ್ಷದ ವ್ಯಾಚ್‌ಮ್ಯಾನ್ ತನ್ನ ಒಂದು ತಿಂಗಳ ಸಂಬಳವನ್ನು ದೇಣಿಗೆ ನೀಡಿದ್ದಾರೆ.

ಚೆನ್ನೈನ ರಾತ್ರಿ ಕಾವಲುಗಾರ ತಂಗದುರೈ ಮುಖ್ಯಮಂತ್ರಿಯ ಪರಿಹಾರ ನಿಧಿಗೆ 10,101 ರೂ. ನೀಡಿದ್ದಾರೆ. ಆ ವ್ಯಕ್ತಿಯ ಕೊಡುಗೆಯನ್ನು ಕೇಳಿದ ಮುಖ್ಯಮಂತ್ರಿ ತಂಗದುರೈ ಅವರನ್ನು ಸಿಎಂ ಕಚೇರಿಯಲ್ಲಿ ಭೇಟಿಯಾಗಿ ಎಂ ಕರುಣಾನಿಧಿ ಅವರ ತಿರುಕುರಲ್ ಪುಸ್ತಕದ ಪ್ರತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ರಜನಿ ಪುತ್ರಿಯಿಂದ ಸಿಎಂ ಪರಿಹಾರ ನಿಧಿಗೆ 1 ಕೋಟಿ ನೆರವು, ನಟ ಅಜಿತ್‌ನಿಂದ 25 ಲಕ್ಷ

ಟ್ವಿಟ್ಟರ್‌ನಲ್ಲಿ ಇದನ್ನು ಶೇರ್ ಮಾಡಿ, ಮೊದಲಿಗೆ ನನ್ನನ್ನು ಭೇಟಿಯಾಗಲು ಸಾಧ್ಯವಾಗದ ರಾತ್ರಿ ಕಾವಲುಗಾರ ತಂಗದುರೈ ಅವರು ಸಿಎಂ ಪರಿಹಾರ ನಿಧಿಗೆ ಒಂದು ತಿಂಗಳ ಸಂಬಳವನ್ನು ದೇಣಿಗೆ ನೀಡಿದ್ದರು. ಈ ಬಗ್ಗೆ ತಿಳಿದುಕೊಂಡ ನಂತರ, ನಾನು ಅವರನ್ನು ಭೇಟಿಯಾಗಲು ವಿನಂತಿಸಿದೆ. ಮತ್ತು ನಾನು ಅವರಿಗೆ ಕಲೈನಾರ್ ಬರೆದ ತಿರುಕುರಲ್ ಎಂಬ ಪುಸ್ತಕವನ್ನು ಕೊಟ್ಟಿದ್ದೇನೆ ಎಂದಿದ್ದಾರೆ.

ನಾನು ಸಿಎಂ ಅವರನ್ನು ಭೇಟಿಯಾದಾಗ, ನಾನು ಎಲ್ಲಿಂದ ಬಂದಿದ್ದೇನೆ ಎಂದು ಕೇಳಿದರು. ನನ್ನ ಒಂದು ತಿಂಗಳ ಸಂಬಳವನ್ನು ನಾನು ದಾನ ಮಾಡುತ್ತಿದ್ದೇನೆ ಎಂದು ತಿಳಿದ ನಂತರ ಪುಸ್ತಕವನ್ನು ನೀಡಿದ್ದಾರೆ ಎಂದು ತಂಗದುರೈ ಹೇಳಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona