ಚೆನ್ನೈ(ಜು.26)  ಇದೊಂದು ಪ್ರಾಣಿ ಪ್ರೀತಿಯ ಕತೆ, ಪಕ್ಷಿ ಪ್ರೀತಿಯ ಕತೆ. ತಮಿಳುನಾಡಿನ ಈ ಗ್ರಾಮ ಕಳೆದ 35  ದಿನಗಳಿಂದ ಕತ್ತಲೆಯಲ್ಲಿದೆ. ಅದಕ್ಕೆ ಕಾರಣ ಒಂದು ಗುಬ್ಬಚ್ಚಿ!

ತಮಿಳುನಾಡಿನ ಶಿವಗಂಗೈ ಜಿಲ್ಲೆಯ ಪೋಥಕುಡಿಯ ಹಳ್ಳಿಯೊಂದರ ಕತೆ ಹೇಳುತ್ತೇವೆ ಕೇಳಿ. ಗುಬ್ಬಚ್ಚಿಯೊಂದರ ಕುಟುಂಬ ಕಾಪಾಡಲು ಇವರು ಮಾಡುತ್ತಿರುವ ಮಾದರಿ ಕೆಲಸ

ಹಳ್ಳಿಗೆ ವಿದ್ಯುತ್ ಸರಬರಾಜು ಮಾಡುವ ಮುಖ್ಯ ಸ್ಚಿಚ್ ಬೋರ್ಡ್ ಮೇಲೆ ಗುಬ್ಬಚ್ಚಿ ತನ್ನ ಮೊಟ್ಟೆ ಇಟ್ಟಿದೆ. ಗುಬ್ಬಚ್ಚಿಯ ದಿನಚರಿಗೆ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಹಳ್ಳಿಗರು ಸೇರಿ ಒಂದು ನಿರ್ಧಾರ ಮಾಡಿದ್ದಾರೆ.  ಅಳಿವಿನ ಅಂಚಿನಲ್ಲಿರುವ ಗುಬ್ಬಷ್ಷಿ ರಕ್ಷಣೆಗೆ ಗ್ರಾಮಸ್ಥರು ತಮ್ಮ ಮನೆ ಬೆಳಕು ತ್ಯಾಗ ಮಾಡಿದ್ದಾರೆ.

ಮನೆಯೊಳಗೆ ಬಂಧಿಯಾದ ಮನುಜ, ಪ್ರಾಣಿ-ಪಕ್ಷಿಗಳ ಸ್ವಚ್ಛಂದ ವಿಹಾರ

ಬೀದಿ ದೀಪಗಳನ್ನು ಆರಿಸಲಾಗಿದೆ.  20  ವರ್ಷದ ವಿದ್ಯಾರ್ಥಿ ಕರ್ಪೂರಾಜಾ ನೀಡಿದ ಐಡಿಯಾವನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ.   ಸುಮಾರು ನೂರಕ್ಕೂ ಅಧಿಕ ಕುಟುಂಬಗಳು ಗ್ರಾಮದಲ್ಲಿ ವಾಸಮಾಡುತ್ತವೆ.  35  ಬೀದಿದೀಪಗಳಿವೆ.  ಸ್ವಿಚ್ ಬೋರ್ಡ್ ಸಮೀಪ ಹಾದು ಹೋಗುವಾಗ ಗುಬ್ಬಚ್ಚಿ ಮೊಟ್ಟೆ ಇಟ್ಟಿದ್ದು ನನ್ನ ಗಮನಕ್ಕೆ ಬಂತು.  ತಕ್ಷಣವೇ ಪೋಟೋ ತೆಗೆದು ನಮ್ಮ ಹಳ್ಳಿಯ ವಾಟ್ಸಪ್ ಗ್ರೂಪ್ ನಲ್ಲಿ ಶೇರ್ ಮಾಡಿ ಎಲ್ಲರ ಸಹಕಾರ ಕೋರಿದೆ.  ಗುಬ್ಬಚ್ಚಿ ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡುವವರೆಗೂ  ಬೀದಿದೀಪ ಹಾಕುವುದು ಬೇಡ ಎಂದು ಕೋರಿದೆ ಎಂದು  ಕರ್ಪೂರಾಜಾ ಹೇಳುತ್ತಾರೆ.

ಬೀದಿದೀಪಗಳು ಇದೇ ಸ್ವಿಚ್ ಬೋರ್ಡ್ ನಿಂದ ಕಾರ್ಯನಿರ್ವಹಿಸುತ್ತಿದ್ದವು. ಎಲ್ಲರೂ ಒಪ್ಪಿಕೊಂಡ ಕಾರಣ ಬೀದಿ ದೀಪ ಹಾಕದೆ  35  ದಿನಗಳು ಕಳೆದಿವೆ. ಕತ್ತೆಯಲ್ಲಿ ಹೇಗೆ ಸಂಚಾರ ಮಾಡುವುದು ಎಂಬ ಭಯವನ್ನು ಇಲ್ಲಿನ ಮಹಿಳೆಯರು ದೂರ ಮಾಡಿಕೊಂಡಿದ್ದಾರೆ.

ಗುಬ್ಬಚ್ಚಿ ಮೊಟ್ಟೆಯನ್ನು ಮರಿ ಮಾಡಲು ಸುಮಾರು 11-14  ದಿನ ತೆಗೆದುಕೊಳ್ಳುತ್ತದೆ. ಆದರೆ ಮರಿಗಳು ಬಲಿಷ್ಠವಾಗಿ ಹಾರಾಟ ಮಾಡಲು ಮತ್ತೆ 15 ದಿನಗಳು ಬೇಕು. ಇದೆಲ್ಲವನ್ನು ಲೆಕ್ಕ ಹಾಕಿಯೇ ಗ್ರಾಮಸ್ಥರು ತೀರ್ಮಾನ ತೆಗೆದುಕೊಂಡಿದ್ದಾರೆ.