Tamil Language Compulsory: ತಮಿಳುನಾಡು ಸರ್ಕಾರಿ ನೌಕರಿಗೆ ತಮಿಳು ಕಡ್ಡಾಯ!
*ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತಮಿಳು ಭಾಷೆಯ ಪ್ರಶ್ನೆ ಪತ್ರಿಕೆ
*ಇದರಲ್ಲಿ ಪಾಸಾದರಷ್ಟೇ ಇತರ ವಿಷಯ ಮೌಲ್ಯಮಾಪನ
*ಕನಿಷ್ಠ 40 ಅಂಕ ಪಡೆದು ಉತ್ತೀರ್ಣರಾದರೆ ಮಾತ್ರ ನೇಮಕಾತಿ
ಚೆನ್ನೈ(ಡಿ. 05): ತಮಿಳುನಾಡಿನಲ್ಲಿ ಸರ್ಕಾರಿ ನೌಕರಿಗೆ (Tamil Nadu Government Employees) ಸೇರಬೇಕೆಂದರೆ ಇನ್ನುಮುಂದೆ ತಮಿಳು ಭಾಷಾ (Tamil Language) ವಿಷಯದ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ. ರಾಜ್ಯದ ಸರ್ಕಾರಿ ನೌಕರರಿಗೆ ತಮಿಳು ಜ್ಞಾನ ಇರಬೇಕು, ಜನರಿಗೆ ಮಾತೃಭಾಷೆಯಲ್ಲಿ (Mother Tongue) ಸರ್ಕಾರಿ ಸೇವೆಗಳು ದೊರಕಬೇಕು ಮತ್ತು ತಮಿಳು ಭಾಷಿಕರಿಗೇ ಸ್ಥಳೀಯ ಉದ್ಯೋಗಗಳು (local Jobs) ಸಿಗಬೇಕು ಎಂಬ ಉದ್ದೇಶದೊಂದಿಗೆ ತಮಿಳುನಾಡು ಸರ್ಕಾರ ಎಲ್ಲ ಸರ್ಕಾರಿ ನೌಕರಿಗೆ ತಮಿಳು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.
ಕನಿಷ್ಠ 40 ಅಂಕ ಪಡೆದು ಉತ್ತೀರ್ಣರಾದರೆ ಮಾತ್ರ ನೇಮಕಾತಿ
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು (State Government Departments) ಹಾಗೂ ರಾಜ್ಯ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಿಗೆ ನೇಮಕಾತಿ ಮಾಡಿಕೊಳ್ಳಲು ತಮಿಳುನಾಡು ಲೋಕಸೇವಾ ಆಯೋಗ (Tamil Nadu Public Service Commission) ನಡೆಸುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇನ್ನುಮುಂದೆ 10ನೇ ತರಗತಿಯ ತಮಿಳು ಪರೀಕ್ಷೆಗೆ ಸಮಾನವಾದ ಪ್ರಶ್ನೆಪತ್ರಿಕೆ ಇರುತ್ತದೆ.ಅದರಲ್ಲಿ ಕನಿಷ್ಠ 40 ಅಂಕಗಳನ್ನು ಪಡೆದು ಉತ್ತೀರ್ಣರಾದರೆ ಮಾತ್ರ ಅಭ್ಯರ್ಥಿಯು ಟಿಎನ್‌ಪಿಎಸ್‌ಸಿ (TNPSC) ಪರೀಕ್ಷೆಯಲ್ಲಿ ಬರೆದ ಇನ್ನಿತರ ವಿಷಯಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ (Valuation) ಮಾಡಲಾಗುತ್ತದೆ. ಈ ನಿಯಮ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಡಿ.1ರಂದು ಹೊರಡಿಸಿರುವ ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
Hindi Language: ದಕ್ಷಿಣ ಭಾರತದ ವಿರೋಧದ ನಡುವೆ ಹಿಂದಿ ರಾಷ್ಟ್ರ ಭಾಷೆ ಮಾಡಲು ಕೇಂದ್ರದ ಯತ್ನ!
ಇನ್ನು, ಇದೇ ನಿಯಮವು ರಾಜ್ಯದ ಶಿಕ್ಷಕರ ನೇಮಕಾತಿ ಪರೀಕ್ಷೆ (Teachers Recruitment) , ವೈದ್ಯಕೀಯ ನೇಮಕಾತಿ ಪರೀಕ್ಷೆ (Medical Exam) , ಯೂನಿಫಾರ್ಮ್ಡ್ ರಿಕ್ರೂಟ್‌ಮೆಂಟ್ ಬೋರ್ಡ್, ತಮಿಳುನಾಡು ಅರಣ್ಯ ಸೇವೆ ಮುಂತಾದ ಎಲ್ಲಾ ರಾಜ್ಯ ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅನ್ವಯಿಸಲಿದ್ದು, ಶೀಘ್ರದಲ್ಲೇ ಆಯಾ ಮಂಡಳಿಗಳು ಆದೇಶ ಹೊರಡಿಸಲಿವೆ ಎಂದು ಸರ್ಕಾರ ಹೇಳಿದೆ.
ಡಿಗ್ರಿಯಲ್ಲಿ ಕನ್ನಡ ಕಡ್ಡಾಯ : ಮತ್ತೆ ಹೈಕೋರ್ಟ್ ಆಕ್ಷೇಪ
ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ರಾಜ್ಯದ ಪದವಿ ಕಾಲೇಜುಗಳಲ್ಲಿ (College) ಕನ್ನಡ (kannada) ಕಲಿಕೆ ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ನಿಲುವಿಗೆ ಮತ್ತೊಮ್ಮೆ ಆಕ್ಷೇಪಿಸಿರುವ ಹೈಕೋರ್ಟ್, ಶಿಕ್ಷಣದಲ್ಲಿ (Education) ರಾಜಕೀಯವನ್ನು (Politics) ಏಕೆ ಬೆರೆಸುತ್ತೀರಿ ಎಂದು ಕಟುವಾಗಿ ಪ್ರಶ್ನಿಸಿದೆ. ಜತೆಗೆ, ರಾಷ್ಟ್ರೀಯ ಶಿಕ್ಷಣ ನೀತಿಯಡಿ ಕನ್ನಡ (Kannada) ಕಲಿಸಬಹುದು ಎಂದಿದ್ದರೆ ಅದಕ್ಕೆ ದಾಖಲೆ ತೋರಿಸಿ ಎಂದೂ ನಿರ್ದೇಶಿಸಿದೆ. ಪದವಿ ಕಾಲೇಜುಗಳಲ್ಲಿ(Degree College) ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವುದನ್ನು ಕಡ್ಡಾಯಗೊಳಿಸಿದ ಸರ್ಕಾರದ ಆದೇಶ ಪ್ರಶ್ನಿಸಿ ಬೆಂಗಳೂರಿನ ಸಂಸ್ಕೃತ ಭಾರತಿ ಕರ್ನಾಟಕ ಟ್ರಸ್ಟ್ (Sanskrith Bharthi Karnataka trust) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
Kannada Book: ಎಂಜಿನಿಯರಿಂಗ್, ವೈದ್ಯಕೀಯ ಪಠ್ಯ ಕನ್ನಡದಲ್ಲೇ ಸಿದ್ಧಪಡಿಸಿ: ಜ್ಞಾನೇಂದ್ರ
ರಾಜ್ಯ ಸರ್ಕಾರಿ ವಕೀಲರು ಹಾಜರಾಗಿ, ಉನ್ನತ ಶಿಕ್ಷಣದಲ್ಲಿ (Higher education) ಕೇವಲ ಆರು ತಿಂಗಳ ಕಾಲ ಬೇಸಿಕ್ ಕನ್ನಡ ಕಲಿಸಲಾಗುವುದು. ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ (national education Policy) ಕನ್ನಡ ಕಲಿಕೆಯನ್ನು ಪ್ರೋತ್ಸಾಹಿಸಬಹುದು ಎಂದು ನ್ಯಾಯಾಲಯಕ್ಕೆ ವಿವರಿಸಿದರು. ಜತೆಗೆ, ಸರ್ಕಾರದ ನೀತಿಯನ್ನು ಸಮರ್ಥಿಸಿಕೊಂಡು ಸರ್ಕಾರದ ಪರ ಅಡ್ವೋಕೇಟ್ ಜನರಲ್ ವಾದ ಮಂಡಿಸಲಿದ್ದಾರೆ. ಅದಕ್ಕಾಗಿ ಸೋಮವಾರಕ್ಕೆ ಅರ್ಜಿ ವಿಚಾರಣೆ ಮುಂದೂಡುವಂತೆ ನ್ಯಾಯಪೀಠವನ್ನು ಕೋರಿದರು.