ಹಿಂದೂ ಧರ್ಮವನ್ನು ಹೆಚ್‌ಐವಿ ಕುಷ್ಠರೋಗಕ್ಕೆ ಹೋಲಿಸಿ ವಿವಾದ ಸೃಷ್ಟಿಸಿದ ಡಿಎಂಕೆ ನಾಯಕ ಎ ರಾಜಾ ಇದೀಗ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಬಿಜೆಪಿಯ ಜೈಶ್ರೀರಾಮ್, ಭಾರತ್ ಮಾತಾವನ್ನು ತಮಿಳುನಾಡು ಒಪ್ಪುವುದಿಲ್ಲ, ಈ ರಾಮಾಯಾಣ, ರಾಮನ ಮೇಲೆ ನಂಬಿಕೆ ಇಲ್ಲ ಎಂದು ಛೀ ಥೂ ಎಂದು ಉಗಿದಿದ್ದಾರೆ.
ಮಧುರೈ(ಮಾ.05) ಡಿಎಂಕೆ ಸಂಸದ ಎ ರಾಜಾ ಮತ್ತೆ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪಕ್ಕೆ ಗುರಿಯಾಗಿದ್ದಾರೆ. ಈ ಬಾರಿ ಶ್ರೀರಾಮ, ರಾಮಾಯಣ, ಭಾರತ ಮಾತೆ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಹೊಸ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಬಿಜೆಪಿಯ ಜೈಶ್ರೀರಾಮ್, ಭಾರತ್ ಮಾತೆಯನ್ನು ತಮಿಳುನಾಡು ಯಾವತ್ತೂ ಒಪ್ಪುವುದಿಲ್ಲ ಎಂದು ಎ ರಾಜಾ ಹೇಳಿದ್ದಾರೆ. ಇಷ್ಟೇ ಅಲ್ಲ ರಾಮಾಯಾಣ, ಶ್ರೀರಾಮ ಮೇಲೆ ನನಗೆ ನಂಬಿಕೆ ಇಲ್ಲ ಎಂದು ಮತ್ತಷ್ಟು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಧುರೈನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎ ರಾಜಾ, ಸಭೆಯನ್ನುದ್ದೇಶಿ ಮಾತನಾಡಿದ್ದಾರೆ. ಈ ವೇಳೆ ಬಿಜೆಪಿಯನ್ನು ಹಿಗ್ಗಾಮುಗ್ಗಾ ಟೀಕಿಸಿದ್ದಾರೆ. ಇಷ್ಟೇ ಅಲ್ಲ ಬಿಜೆಪಿಯನ್ನು ಟೀಕಿಸಲು ಹಿಂಧೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ. ನೀವು(ಬಿಜೆಪಿ) ಹೇಳುವ ದೇವರು ಜೈ ಶ್ರೀರಾಮ್, ಭಾರತ್ ಮಾತೆಯನ್ನು ನಾವು ಎಂದಿಗೂ ಒಪ್ಪಿಕೊಳ್ಳವುದಿಲ್ಲ, ತಮಿಳುನಾಡು ಯಾವತ್ತೂ ಒಪ್ಪಿಕೊಳ್ಳುವುದಿಲ್ಲ ಎಂದು ಎ ರಾಜಾ ಹೇಳಿದ್ದಾರೆ.
ಸನಾತನ ಧರ್ಮ ವಿರುದ್ಧ ಹೇಳಿಕೆ: ಉದಯನಿಧಿ, ರಾಜಾಗೆ ಸುಪ್ರೀಂಕೋರ್ಟ್ ನೋಟಿಸ್
ನೀವು(ಬಿಜೆಪಿ) ಹೋಗಿ ಹೇಳಿ ನಾವು ರಾಮನ ಶತ್ರಗಳು. ನನಗೆ ರಾಮಾಯಾಣ, ರಾಮನ ಮೇಲೆ ಯಾವುದೇ ನಂಬಿಕೆ ಇಲ್ಲ. ರಾಮಾಯಣದಲ್ಲಿ ರಾಮನಿಗೆ ನಾಲ್ವರು ಸಹೋದರರು ಎಂದು ಹೇಳಿದ್ದಾರೆ. ಒಬ್ಬ ಕೌರವ ಸಹೋದರ, ಒಬ್ಬ ಬೇಟೆಗಾರ ಸಹೋದರ, ಮತ್ತೊಬ್ಬ ಕೋತಿ ಸಹೋದರ,ಇನ್ನೊಬ್ಬನ 6ನೇ ಸಹೋದರ ಕೋತಿ ಎಂದು ಹೇಳುತ್ತದೆ. ಇದನ್ನು ಮಾನವ ಸಾಮರಸ್ಯ ಎಂದು ನೀವು ಕರೆದರೆ, ಈ ಜೈ ಶ್ರೀರಾಮ್ ಛೀ, ಥೂ ಈಡಿಯೆಟ್ಸ್ ಎಂದು ಎ ರಾಜಾ ಹೇಳಿದ್ದಾರೆ.
ಇದೇ ವೇದಿಕೆಯಲ್ಲಿ ಭಾರತ ಒಂದು ದೇಶವಲ್ಲ ಎಂದಿದ್ದಾರೆ. ಇದಕ್ಕೆ ತಮ್ಮದೇ ಆದ ವಾದ ಮಂಡಿಸಿ ಪೇಚಿಗೆ ಸಿಲುಕಿದ್ದಾರೆ. ಭಾರತ ಯಾವತ್ತೂ ಒಂದು ದೇಶವಾಗಲು ಸಾಧ್ಯವಿಲ್ಲ. ಕಾರಣ ಒಂದು ದೇಶ ಎಂದರೆ ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ಸಂಪ್ರದಾಯ, ಒಂದು ಪದ್ದತಿ ಇರಬೇಕು. ಆದರೆ ಭಾರತ ಹಾಗಲ್ಲ. ತಮಿಳುನಾಡಿನಲ್ಲಿ ಒಂದು ಭಾಷೆ ಇದೆ, ಒಂದು ಸಂಸ್ಕೃತಿ ಇದೆ, ತಮಿಳುನಾಡು ಒಂದು ದೇಶ, ಕೇರಳ ಒಂದು ದೇಶ. ಭಾರತ ಹೇಗೆ ಒಂದು ದೇಶ ಎಂದು ಎ ರಾಜಾ ಹೇಳಿದ್ದಾರೆ. ಈ ಮೂಲಕ ತಮಿಳುನಾಡು ಪ್ರತ್ಯೇಕ ರಾಷ್ಟ್ರ ಅನ್ನೋದನ್ನು ಸೂಚ್ಯವಾಗಿ ಹೇಳಿದ್ದಾರೆ.
ಹಿಂದೂ ಧರ್ಮ ಟೀಕೆಯ ಅಸ್ತ್ರವಾಗ್ತಿದೆಯಾ? ಲೋಕಸಭೆ ಕುರುಕ್ಷೇತ್ರದಲ್ಲಿ ಬಿಜೆಪಿಗೆ ಚುನಾವಣಾ ಅಸ್ತ್ರನಾ ?
ಈ ಕುರಿತು ಎ ರಾಜಾ ಆಡಿರುವ ಮಾತುಗಳನ್ನು ಬಿಜೆಪಿ ಐಟಿ ಮುಖ್ಯಸ್ಥ ಅಮಿತ್ ಮಾಳವಿಯಾ ಎಕ್ಸ್(ಟ್ವಿಟರ್) ಮೂಲಕ ಹಂಚಿಕೊಂಡಿದ್ದಾರೆ. ಇದೀಗ ಎ ರಾಜಾ ಮಾತುಗಳಿಗೆ ಬಿಜೆಪಿ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
