Asianet Suvarna News Asianet Suvarna News

ಮುದುಕ ಸಾಯಲಿ ಎಂದು ಫ್ರೀಜರ್‌ನಲ್ಲಿ ತುಂಬಿಟ್ಟ ತಮ್ಮ!

ಮುದುಕ ಸಾಯಲಿ ಎಂದು ಫ್ರೀಜರ್‌ನಲ್ಲಿ ತುಂಬಿಟ್ಟ ತಮ್ಮ!| ಶವ ಪೆಟ್ಟಿಗೆಯಲ್ಲಿ ರಾತ್ರಿಯಿಡೀ ಕಳೆದು ಬದುಕುಳಿದ 74ರ ವೃದ್ಧ

Tamil Nadu man kept his old age elder brother in refrigerator pod
Author
Bangalore, First Published Oct 15, 2020, 12:26 PM IST
  • Facebook
  • Twitter
  • Whatsapp

ಸೇಲಂ(ಅ.15): 74 ವರ್ಷದ ತೀವ್ರ ಅನಾರೋಗ್ಯಪೀಡಿತ ವೃದ್ಧನೊಬ್ಬನನ್ನು ಆತನ ತಮ್ಮನೇ ರಾತ್ರಿಯಿಡೀ ಫ್ರೀಜರ್‌ ಶವಪೆಟ್ಟಿಗೆಯಲ್ಲಿ ತುಂಬಿರಿಸಿದ್ದ ಭಯಾನಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಇತ್ತೀಚೆಗಷ್ಟೆಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ಈ ವೃದ್ಧ ಬೇಗ ಸಾಯಲಿ ಎಂದು ಸೋದರ ಶವಪೆಟ್ಟಿಗೆಯಲ್ಲಿ ತುಂಬಿದ್ದ ಎಂದು ತಿಳಿದುಬಂದಿದೆ.

ಫ್ರೀಜರ್‌ ಶವಪೆಟ್ಟಿಗೆಯನ್ನು ಬಾಡಿಗೆಗೆ ಕೊಡುವ ಕಂಪನಿಯ ಏಜೆಂಟ್‌ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಉಸಿರಾಡಲು ಕಷ್ಟಪಡುತ್ತಿದ್ದ ವೃದ್ಧನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೇಲಂ ಜಿಲ್ಲೆಯ ಬಾಲಸುಬ್ರಮಣಿ ಕುಮಾರ್‌ ಎಂಬಾತನೇ ರಾತ್ರಿಯಿಡೀ ತಣ್ಣನೆಯ ಶವಪೆಟ್ಟಿಗೆಯಲ್ಲಿದ್ದರೂ ಬದುಕುಳಿದ ವೃದ್ಧ. ಈತ ತನ್ನ ತಮ್ಮ ಹಾಗೂ ಅಂಗವಿಕಲ ಸಂಬಂಧಿಯೊಬ್ಬರ ಜೊತೆ ವಾಸಿಸುತ್ತಿದ್ದಾನೆ. ಇತ್ತೀಚೆಗೆ ತೀವ್ರ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ. ಆದರೆ, ಸಾಯುತ್ತಾನೆಂದು ಶವಪೆಟ್ಟಿಗೆ ತರಿಸಿದ್ದ ಸೋದರ, ಕೊನೆಗೆ ಬೇಗ ಸಾಯಲಿ ಎಂದು ಸೋಮವಾರ ರಾತ್ರಿ ಅದರೊಳಗೇ ಅಣ್ಣನನ್ನು ಮಲಗಿಸಿ ಬಾಗಿಲು ಮುಚ್ಚಿದ್ದಾನೆ. ಬೆಳಗಿನವರೆಗೂ ವೃದ್ಧ ಒದ್ದಾಡಿ ಜೀವ ಉಳಿಸಿಕೊಂಡಿದ್ದಾನೆ.

#எங்கே_செல்கிறது_இந்த_சமூகம்.. #மனிதனின்_மன_அழுத்தமும்.. #கொரோனா_காலமும் இன்று ஓர் அதிர்ச்சி சம்பவம்.. வயதான நபரை...

Posted by Deivalingam MC on Tuesday, 13 October 2020

ಮಂಗಳವಾರ ಬೆಳಿಗ್ಗೆ ಶವಪೆಟ್ಟಿಗೆಯ ಏಜೆಂಟ್‌ ಬಂದಾಗ ವೃದ್ಧ ಒದ್ದಾಡುತ್ತಿರುವುದನ್ನು ನೋಡಿ ಬಾಗಿಲು ತೆರೆದು ಪೊಲೀಸರಿಗೆ ತಿಳಿಸಿದ್ದಾನೆ. ಪೊಲೀಸರು ಪ್ರಶ್ನಿಸಿದಾಗ ‘ಅಣ್ಣನ ಮೈಯಿಂದ ಭೂತ ಇನ್ನೂ ಹೋಗಿರಲಿಲ್ಲ, ಅದಕ್ಕಾಗಿ ಕಾಯುತ್ತಿದ್ದೆವು’ ಎಂದು ಸೋದರ ಹೇಳಿದ್ದಾನೆ. ಈತನ ವಿರುದ್ಧ ನಿರ್ಲಕ್ಷ್ಯ ಹಾಗೂ ಬೇರೆಯವರ ಜೀವವನ್ನು ಅಪಾಯಕ್ಕೆ ಸಿಲುಕಿಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

Follow Us:
Download App:
  • android
  • ios