ಚೆನ್ನೈ(ಆ.02) ತಮಿಳುನಾಡಿನ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್‌  ಅವರಿಗೂ ಕೊರೋನಾ ದೃಢವಾಗಿದೆ. ರಾಜ್ಯಪಾಲರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಹೋಮ್​​ ಕ್ವಾರಂಟೈನ್​​ನಲ್ಲಿದ್ದ ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್‌ ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ.  ವಾರದ ಹಿಂದೆಯಷ್ಟೇ ತಮಿಳುನಾಡು ರಾಜಭವನದ 84 ಸಿಬ್ಬಂದಿಗೆ ಕೊರೋನಾ ಪಾಸಿಟಿವ್​​ ಬಂದಿತ್ತು. ಹೀಗಾಗಿ ಜುಲೈ 29ರಿಂದ ರಾಜ್ಯಪಾಲರು ರಾಜಭವನದಲ್ಲೇ ಹೋಮ್​​ ಕ್ವಾರಂಟೈನ್​​​ಗೆ ಒಳಗಾಗಿದ್ದರು. 

ಬಿಗ್ ಬಿ ಅಮಿತಾಭ್ ಬಚ್ಚನ್ ಕೊರೋನಾದಿಂದ ಮುಕ್ತ

ಬನ್ವಾರಿಲಾಲ್ ಪುರೋಹಿತ್‌ ಅವರಿಗೆ 80 ವರ್ಷ ವಯಸ್ಸು. ವಯೋಸಹಜ ಕಾಯಿಲೆಗಳು ಅವರನ್ನು ಕಾಡುತ್ತಿದೆ. ರಾಜ್ಯಪಾಲರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಕೊರೋನಾ ಎಲ್ಲರನ್ನು ಕಾಡುತ್ತಿದೆ. ಸೋಂಕಿಗೆ ತುತ್ತಾಗಿದ್ದ ಅಮಿತಾಭ್ ಬಚ್ಚನ್ ನೆಗೆಟಿವ್ ವರದಿ ನಂತರ ಬಿಡುಗಡೆಯಾಗಿದ್ದಾರೆ. ಇನ್ನೊಂದು ಕಡೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಕೊರೋನಾ ವಕ್ಕರಿಸಿದೆ.