ಕೊರೋನಾದಿಂದ ಮುಕ್ತರಾದ ಬಿಗ್ ಬಿ/ ಅಮಿತಾಭ್ ಬಚ್ಚನ್ ವರದಿ ನಗೆಟಿವ್/ 20 ದಿನಗಳಿಂದ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ  ಬಚ್ಚನ್/ ವಿಷಯ ತಿಳಿಸಿದ ಅಭಿಷೇಕ್ ಬಚ್ಚನ್

ಮುಂಬೈ(ಆ. 02) ಕೊರೋನಾದಿಂದ ಬಿಗ್ ಬಿ ಅಮಿತಾಭ್ ಬಚ್ಚನ್ ಮುಕ್ತರಾಗಿದ್ದಾರೆ. ಕಳೆದ 20 ದಿನಗಳಿಂದ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಬಿಗ್ ಬಿ ಕೊರೋನಾ ನೆಗೆಟಿವ್ ಆಗಿದ್ದಾರೆ ಎಂದು ಪುತ್ರ ಅಭಿಷೇಕ್ ಬಚ್ಚನ್ ತಿಳಿಸಿದ್ದಾರೆ.

"

ಬಚ್ಚನ್ ಕೊರೊನಾದಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ವಿಚಾರವನ್ನು ಸ್ವತಃ ಅಮಿತಾಭ್ ಪುತ್ರ, ನಟ ಅಭಿಷೇಕ್‌ ಬಚ್ಚನ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಬಿಗ್ ಬಿ ದಿವಾಳಿಯಾಗುವುದನ್ನು ತಪ್ಪಿಸಿದ್ದು ಈ ರಾಜಕೀಯ ನಾಯಕ

ತಂದೆಯ ಪ್ರಸ್ತುತ ಕೊರೊನಾ ವರದಿ ನೆಗೆಟಿವ್ ಬಂದಿದೆ. ಅಲ್ಲದೆ, ಅವರೀಗ ಡಿಸ್ಚಾರ್ಜ್ ಆಗಿದ್ದಾರೆ. ಮನೆಯಲ್ಲಿ ಇನ್ನು ಮುಂದೆ ವಿಶ್ರಾಂತಿ ಪಡೆಯಲಿದ್ದಾರೆ. ನಿಮ್ಮೆಲ್ಲರ ಪ್ರಾರ್ಥನೆ ಮತ್ತು ಹಾರೈಕೆಗಳಿಗೆ ಧನ್ಯವಾದ ಎಂದು ಪುತ್ರ ಅಭಿಷೇಕ್ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ನನಗೆ ಇನ್ನು ಕೊರೋನಾ ಪಾಸಿಟಿವ್ ಆಗಿಯೇ ಇದೆ. ನಾನು ಈ ಯುದ್ಧ ಗೆದ್ದು ವಾಪಸ್ ಬರುತ್ತೇನೆ.. ಆಸ್ಪತ್ರೆಯಲ್ಲೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ ಎಂದು ಛೋಟಾ ಬಚ್ಚನ್ ತಿಳಿಸಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಭ್ ಕುಟುಂಬವನ್ನು ಕೊರೋನಾ ಕಾಡಿದೆ. ಜಯಾ ಬಚ್ಚನ್ ಹೊರತುಪಡಿಸಿ ಅಮಿತಾಬ್, ಅಭಿಷೇಕ್, ಐಶ್ವರ್ಯ ಪುತ್ರಿ ಆರಾಧ್ಯ ಸಹ ಕೊರೋನಾ ಸೋಂಕಿಗೆ ಗುರಿಯಾಗಿದ್ದರು.

"

Scroll to load tweet…