ಕಮಲ ಹಾಸನ್ ಪಕ್ಷದ ವಿರುದ್ಧ ಮಾಜಿ ಸಂಗಾತಿ ಗೌತಮಿ ಪ್ರಚಾರ!
ಕಮಲಹಾಸನ್ ಪಕ್ಷದ ವಿರುದ್ಧ ಮಾಜಿ ಸಂಗಾತಿ ಗೌತಮಿ ಪ್ರಚಾರ| ತಮಿಳುನಾಡಿನ ಬಿಜೆಪಿ ಸ್ಟಾರ್ ಪ್ರಚಾರಕಿ ಚಿತ್ರನಟಿ
ಚೆನ್ನೈ(ಮಾ.31): ರಾಜಕೀಯ ಪಕ್ಷ ಸ್ಥಾಪಿಸಿ ತಮಿಳುನಾಡು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವ ಬಹುಭಾಷಾ ನಟ ಕಮಲಹಾಸನ್ ವಿರುದ್ಧ ಅವರ ಮಾಜಿ ಸಂಗಾತಿಯೂ ಆಗಿರುವ ಚಿತ್ರನಟಿ ಗೌತಮಿ ಅವರನ್ನು ಪ್ರಚಾರಕ್ಕೆ ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಸ್ಟಾರ್ ಪ್ರಚಾರಕರ ಪಟ್ಟಿಗೆ ಗೌತಮಿ ಅವರನ್ನು ಸೇರ್ಪಡೆಗೊಳಿಸಿದೆ.
ಮಕ್ಕಳ್ ನೀಧಿ ಮಯ್ಯಂ ಪಕ್ಷ ಎಲ್ಲೆಲ್ಲಿ ಹೆಚ್ಚು ಮತಗಳನ್ನು ಸಾಧ್ಯವಿದೆಯೋ ಅಲ್ಲಿ ಗೌತಮಿ ಪ್ರಚಾರ ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಕಮಲ್ ಹಾಸನ್ ಪಕ್ಷ ಬದಲಾವಣೆ ತರುವುದಾಗಿ ಹೇಳುತ್ತಿದೆಯಲ್ಲ ಎಂಬ ಪ್ರಶ್ನೆಗೆ, ಹಾಗಂತ ಅವರು ಹೇಳಿಕೊಳ್ಳುತ್ತಾರೆ. ಜನರೆಲ್ಲಿ ಹೇಳುತ್ತಿದ್ದಾರೆ ಎಂದು ಗೌತಮಿ ತಿಳಿಸಿದ್ದಾರೆ.
ಕಮಲಹಾಸನ್ ಜತೆಗೆ ರಾಜಕೀಯ ಭಿನ್ನಾಭಿಪ್ರಾಯಗಳಿವೆಯೇ ಎಂಬ ಪ್ರಶ್ನೆಗೆ ಆ ಬಗ್ಗೆ ಮಾತನಾಡುವುದಿಲ್ಲ ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. 1998ರಲ್ಲಿ ಸಂದೀಪ್ ಭಾಟಿಯಾ ಎಂಬುವರನ್ನು ವಿವಾಹವಾಗಿದ್ದ ಗೌತಮಿ, ಅವರಿಂದ ವಿಚ್ಛೇದನ ಪಡೆದಿದ್ದರು. 2005ರಿಂದ 2016ರವರೆಗೆ ಕಮಲಹಾಸನ್ ಅವರಿಗೆ ಸಂಗಾತಿಯಾಗಿದ್ದರು. ಬಳಿಕ ಇಬ್ಬರೂ ದೂರವಾಗಿದ್ದರು.