Asianet Suvarna News Asianet Suvarna News

ನಿಧನರಾದ ಕಾಂಗ್ರೆಸ್ ಅಭ್ಯರ್ಥಿ PSW ಮಾಧವ್ ರಾವ್ ಗೆದ್ದರೆ ಉಪಚುನಾವಣೆ!

ಕೊರೋನಾ ವೈರಸ್ ಭಾರತದಲ್ಲಿ ಮತ್ತೆ ಆರ್ಭಟ ಆರಂಭಿಸಿದೆ. ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೊರೋನಾ ನಿಯಂತ್ರಣಕ್ಕೂ ಮೀರಿ ಹರಡುತ್ತಿದೆ. ಚುನಾವಣಾ ಅಖಾಡದಲ್ಲಿ ಧುಮುಕಿ ಭರ್ಜರಿ ಪ್ರಚಾರ, ಸಾರ್ವಜನಿಕರ ಜೊತೆ ಸಂವಾದ, ಮನೆ ಮನೆ ತೆರಳಿದ ಕಾಂಗ್ರೆಸ್ ಅಭ್ಯರ್ಥಿ ಕೊರೋನಾದಿಂದ ನಿಧನರಾಗಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Tamil Nadu Election 2021 congress candidate died of COVID 19 days after he contested ckm
Author
Bengaluru, First Published Apr 11, 2021, 3:41 PM IST

ಚೆನ್ನೈ(ಏ.11): ಕೊರೋನಾ ದೇಶದಲ್ಲಿ ಅಪಾಯದ ಬಿರುಗಾಳಿ ಎಬ್ಬಿಸಿದೆ. ಪಂಚ ರಾಜ್ಯಗಳ ಚುನಾವಣೆ, ಪ್ರಚಾರ, ಸಂವಾದಗಳಿಂದಲೂ ಕೊರೋನಾ ಏರಿಕೆಯಾಗಿದೆ ಅನ್ನೋ ವಾದವನ್ನು ತಳ್ಳಿಹಾಕುವಂತಿಲ್ಲ. ಇದೀಗ ತಮಿಳುನಾಡಿನ ಶ್ರಿವಿಲ್ಲಿಪುತ್ಥೂರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಪಿಎಸ್‌ಡಬ್ಲೂ ಮಾಧವರ್ ರಾವ್ ಕೊರೋನಾ ಸೋಂಕು ತಗುಲಿ ನಿಧನರಾಗಿದ್ದಾರೆ.

ಮಾಜಿ IPS ಅಧಿಕಾರಿ, ಬಿಜೆಪಿ ನಾಯಕ ಅಣ್ಣಾಮಲೈಗೆ ಕೊರೋನಾ!.

ಕಳೆದ ತಿಂಗಳು ಕೊರೋನಾ ಸೋಂಕಿಗೆ ತುತ್ತಾದ ಮಾದವ್ ರಾವ್ ಆಸ್ಪತ್ರೆ ದಾಖಲಾಗಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ಮಾಧವ್ ರಾವ್ ಇಂದು(ಏ.11) ಅಸುನೀಗಿದ್ದಾರೆ.  ನಿಧನರಾಗಿರುವ ಮಾಧವ್ ರಾವ್ ಗೆಲುವು ಸಾಧಿಸಿದರೆ, ಉಪ-ಚುನಾವಣೆ ನಡೆಯಲಿದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ತಮಿಳುನಾಡು ಮತ್ತು ಪುದುಚೇರಿಯ ಉಸ್ತುವಾರಿ ಕಾರ್ಯದರ್ಶಿ ಸಂಜಯ್ ದತ್ ಟ್ವಿಟರ್ ಮೂಲಕ ಈ ಮಾಹಿತಿ ಖಚಿತಪಡಿಸಿದ್ದಾರೆ. 

ಮಾಧವ್ ರಾವ್ ಅವರ ಕುಟಂಬಕ್ಕೆ ಕಾಂಗ್ರೆಸ್ ಸಂತಾಪ ಸೂಚಿಸಿದೆ. ಕುಟುಂಬಕ್ಕೆ ಎಲ್ಲಾ ನೆರವನ್ನು ಕಾಂಗ್ರೆಸ್ ನೀಡಲಿದೆ ಎಂದು ಸಂಜಯ್ ದತ್ ಹೇಳಿದ್ದಾರೆ.  ತಮಿಳುನಾಡಿನ 38 ಜಿಲ್ಲೆಗಳ 234 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 6 ರಂದು ಮತದಾನ ನಡೆದಿದೆ.   ಮೇ 2 ರಂದು ಮತ ಎಣಿಕೆ ನಡೆಯಲಿದೆ.

Follow Us:
Download App:
  • android
  • ios