ಚೆನ್ನೈ(ಏ.24): ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನಲೆಯಲ್ಲಿ ಆಯಾ ರಾಜ್ಯಗಳು ಕಟ್ಟು ನಿಟ್ಟಿನ ಆದೇಶ ಜಾರಿ ಮಾಡುತ್ತಿದೆ. ಇದೀಗ ತಮಿಳುನಾಡಿನಲ್ಲಿ ಕೊರೋನಾ ಹರಡುವಿಕೆ ತಡೆಯಲು ಪ್ರಮುಖ 5 ನಗರಗಳನ್ನು 4 ದಿನ ಸಂಪೂರ್ಣ ಲಾಕ್‌ಡೌನ್ ಮಾಡಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ. ಕುರಿತು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅಧೀಕೃತ ಪ್ರಕಟಣೆ ಹೊರಡಿಸಿದ್ದಾರೆ.

ಕೊರೋನಾ ‌ಎಫೆಕ್ಟ್: ಬೀದಿ‌ನಾಯಿಗೆ ಪಟ್ಟೆ ಹುಲಿ ಗೆಟಪ್..! ಇಲ್ನೋಡಿ ಫೋಟೋಸ್

ತಮಿಳುನಾಡಿನಲ್ಲಿ ಕೊರೋನಾ ಹಾಟ್‌ಸ್ಫಾಟ್‌ಗಳಾಗಿ ಗುರುತಿಸಿಕೊಂಡಿರುವ ಚೆನ್ನೈ, ಮಧುರೈ, ಕೊಯಂಬತ್ತೂರು, ಸೇಲಂ ಹಾಗೂ ತಿರುಪ್ಪುರ್ ನಗರಗಳನ್ನು 5 ದಿನ ಸಂಪೂರ್ಣ ಲಾಕ್‌ಡೌನ್ ಮಾಡಲುು ಆದೇಶ ನೀಡಿದ್ದಾರೆ. ಏಪ್ರಿಲ್ 26ರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯ ವರಗೆ ಈ 5 ನಗರಗಳು ಸಂಪೂರ್ಣ ಲಾಕ್‌ಡೌನ್ ಆಗಲಿದೆ. 9 ಗಂಟೆ ಬಳಿಕ  ಮನೆಯಿಂದ ಹೊರಬಂದರೆ ಜೋಕೆ ಕಾರಣ, ಮೇ.3ರ ವರೆಗೆ ಕೇಂದ್ರ ಸರ್ಕಾರದ ಲಾಕ್‌ಡೌನ್ ಮುಂದುವರಿಯಲಿದೆ.

ಸಂಪೂರ್ಣ‌ ಲಾಕ್‌ಡೌನ್ ವೇಳೆ ಯಾವ ಸೇವೆ ಲಭ್ಯವಿದೆ?
ಆಸ್ಪತ್ರೆ, ಮೆಡಿಕಲ್, ಸರ್ಕಾರದ ಅಧೀನದಲ್ಲಿರುವ ದಿನಸಿ ಹಾಗೂ ಅಗತ್ಯ ವಸ್ತುಗಳ ಅಂಗಡಿ, ಸರ್ಕಾರದ ಅಮ್ಮಾ ಕ್ಯಾಂಟೀನ್, ಎಟಿಂ, ಮೊಬೈಲ್ ವೆಜಿಟೇಬಲ್ ಹಾಗೂ ಹಣ್ಣುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ನಿರ್ಗತಿಕರಿಗೆ ಆಹಾರ, ವಿಶೇಷ ಚೇತನರಿಗೆ ಆಹಾರ ಒದಗಿಸುವ ಸಂಘ ಸಂಸ್ಥೆಗಳ ಕಾರ್ಯಕ್ಕೆ ಅಡ್ಡಿಯಾಗಲ್ಲ.

ತಮಿಳುನಾಡಿನಲ್ಲಿ ಏಪ್ರಿಲ್ 24ರ ಬೆಳಗ್ಗೆ 8 ಗಂಟೆ ಹೊತ್ತಿಗೆ 54 ಹೊಸ ಕೊರೋನ ವೈರಸ್ ಪ್ರಕರಣಗಳು ದಾಖಲಾಗಿದೆ. ಹೀಗಾಗಿ ತಮಿಳುನಾಡಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1,683ಕ್ಕೇರಿಕೆಯಾಗಿದೆ. ಇದರಲ್ಲಿ 752 ಮಂದಿ ಗುಣಮುಖರಾಗಿದ್ದರೆ 20 ಮಂದಿ ಸಾವನ್ನಪ್ಪಿದ್ದಾರೆ.