ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸ್ಟಾಲಿನ್‌ ಇಬ್ಬರೂ ಸಹ ಒಂದೇ ಮೈತ್ರಿಕೂಟದಲ್ಲಿದ್ದಾರೆ. ಅಲ್ಲದೇ ಕರ್ನಾಟಕದಲ್ಲಿ ಅಣೆಕಟ್ಟು ಶೇ.80ರಷ್ಟು ಭರ್ತಿಯಾಗಿವೆ. ಹಾಗಾಗಿ ತಮಿಳುನಾಡಿಗೆ ಬಾಕಿ ಇರುವ ನೀರು ಬಿಡುವಂತೆ ಆಗ್ರಹ ವ್ಯಕ್ತಪಡಿಸಬೇಕು. ಸ್ಟಾಲಿನ್‌ ಅವರು ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಜೊತೆ ಮಾತನಾಡಬೇಕು: ಅಣ್ಣಾಡಿಎಂಕೆಯ ಪ್ರಧಾನ ಕಾರ್ಯದರ್ಶಿ ಕೆ.ಪಳನಿಸ್ವಾಮಿ 

ಚೆನ್ನೈ(ಆ.06): ತಮಿಳುನಾಡಿಗೆ ಬಿಡುಗಡೆಯಾಗಬೇಕಿರುವ 86.38 ಟಿಎಂಸಿ ನೀರು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಆಗ್ರಹಿಸಬೇಕು ಎಂದು ವಿಪಕ್ಷ ಅಣ್ಣಾ ಡಿಎಂಕೆ ಶನಿವಾರ ಹೇಳಿದೆ.

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸ್ಟಾಲಿನ್‌ ಇಬ್ಬರೂ ಸಹ ಒಂದೇ ಮೈತ್ರಿಕೂಟದಲ್ಲಿದ್ದಾರೆ. ಅಲ್ಲದೇ ಕರ್ನಾಟಕದಲ್ಲಿ ಅಣೆಕಟ್ಟು ಶೇ.80ರಷ್ಟು ಭರ್ತಿಯಾಗಿವೆ. ಹಾಗಾಗಿ ತಮಿಳುನಾಡಿಗೆ ಬಾಕಿ ಇರುವ ನೀರು ಬಿಡುವಂತೆ ಆಗ್ರಹ ವ್ಯಕ್ತಪಡಿಸಬೇಕು. ಸ್ಟಾಲಿನ್‌ ಅವರು ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಜೊತೆ ಮಾತನಾಡಬೇಕು. ಜೂನ್‌, ಜುಲೈ, ಆಗಸ್ಟ್‌ ತಿಂಗಳಿನ ನೀರು ಬಿಡುಗಡೆ ಮಾಡಿಸುವ ಮೂಲಕ 3.5 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆದಿರುವ ಕುರುವೈ ಭತ್ತವನ್ನು ರಕ್ಷಿಸಬೇಕು ಎಂದು ಅಣ್ಣಾಡಿಎಂಕೆಯ ಪ್ರಧಾನ ಕಾರ್ಯದರ್ಶಿ ಕೆ.ಪಳನಿಸ್ವಾಮಿ ಅವರು ಹೇಳಿದ್ದಾರೆ.

ಕಾವೇರಿ ನೀರು ಬಿಡಿಸಿ: ಮೋದಿಗೆ ಸ್ಟಾಲಿನ್‌ ಮನವಿ

ಡಿಎಂಕೆಯ ಮೈತ್ರಿಪಕ್ಷವಾದ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಮತ್ತೆ ಕಾವೇರಿ ನೀರು ಸಮಸ್ಯೆ ಉದ್ಭವ ಆಗಿದೆ. ಈ ಮೊದಲು ಜಯಲಲಿತಾ ಹಾಗೂ ನಾನು ಮುಖ್ಯಮಂತ್ರಿಯಾಗಿದ್ದಾಗಲೂ ರಾಜ್ಯದ ಜನರ ಹಿತ ಕಾಪಾಡಿದ್ದೆವು ಎಂದು ಅವರು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.