*  ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ತಮಿಳುನಾಡು ಸ್ಟಾಲಿನ್‌*  ಮೇಕೆದಾಟು ಯೋಜನೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಅಸಮ್ಮತಿ ಸೂಚಿಸಬೇಕು*  ಹೊಸ ಯೋಜನೆಗಳಿಗೆ ಅನುಮೋದನೆ ನೀಡದಂತೆ ಮನವಿ 

ನವದೆಹಲಿ/ಚೆನ್ನೈ(ಏ.01):  ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್‌(MK Stalin) ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ, ಕರ್ನಾಟಕ ಸರ್ಕಾರ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು ಅಣೆಕಟ್ಟೆ ಯೋಜನೆ ವಿರುದ್ಧ ದೂರು ನೀಡಿದರು. 

ಇದೇ ವೇಳೆ ಜಲಶಕ್ತಿ ಸಚಿವಾಲಯವು ಮೇಕೆದಾಟು ಯೋಜನೆಗೆ(Mekedatu Project) ಅಥವಾ ಕಾವೇರಿ ಜಲಾನಯನ ಪ್ರದೇಶದಲ್ಲಿ ಯಾವುದೇ ಹೊಸ ಯೋಜನೆಗಳಿಗೆ ಅನುಮೋದನೆ ನೀಡದಂತೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು. ಅಲ್ಲದೆ ಮೇಕೆದಾಟು ಯೋಜನೆಗೆ ಕಾವೇರಿ ನೀರು(Kaveri Water) ನಿರ್ವಹಣಾ ಪ್ರಾಧಿಕಾರ ಅಸಮ್ಮತಿ ಸೂಚಿಸಬೇಕು. ಹಾಗೆಯೇ ತಮಿಳುನಾಡಿನ(Tamil Nadu) ಪೂರ್ವಾನುಮತಿ ಇಲ್ಲದೆ ಯಾವುದೇ ಹೊಸ ಯೋಜನೆ ಕೈಗೆತ್ತಿಕೊಳ್ಳದಂತೆ ಕರ್ನಾಟಕಕ್ಕೆ(Karnataka) ಸೂಚಿಸಬೇಕು ಎಂದು ಹೇಳಿದರು.

Mekedatu Project ತಮಿಳುನಾಡು ವಿರುದ್ಧ ಆಕ್ರೋಶ, ಇಂದು ವಿಧಾನಸಭೆಯಲ್ಲಿ ಖಂಡನಾ ನಿರ್ಣಯ!

ಪ್ರಧಾನಿ ಬಳಿ ಮಾತನಾಡುವ ಧಮ್‌, ಸಿಎಂ ಬೊಮ್ಮಾಯಿಗೆ ಎಲ್ಲಿದೆ?

ಹಿರಿಯೂರು: ಮೇಕೆದಾಟು (Mekedatu Padayatre) ಸೇರಿದಂತೆ ರಾಜ್ಯದ ಸಮಸ್ಯೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಬಳಿ ಹೋಗಿ ಮಾತನಾಡುವ ಧಮ್‌ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗಿದೆಯಾ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ (Kodihalli Chandrashekar) ಪ್ರಶ್ನಿಸಿದ್ದರು. 

ವಿವಿ ಸಾಗರ ಜಲಾಶಯಕ್ಕೆ 10 ಟಿಎಂಸಿ ನೀರು ಪೂರೈಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇಲ್ಲಿನ ತಾಲೂಕು ಕಚೇರಿ ಮುಂಭಾಗ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸ್ಥಳಕ್ಕೆ ಮಾ.30 ರಂದು ಭೇಟಿ ನೀಡಿ ಮಾತನಾಡಿದರು.

ಮೇಕೆದಾಟು ಯೋಜನೆ ಜಾರಿಗೆ ತರಲು ಮೋದಿ ಬಳಿ ಮಾತನಾಡಲು ಕರ್ನಾಟಕಕ್ಕೆ ಆಗುತ್ತಿಲ್ಲ. ಮೇಕೆದಾಟು ವಿಚಾರದಲ್ಲಿ ತಮಿಳುನಾಡಿಗೆ ನ್ಯಾಯಬದ್ಧವಾದ ಹಕ್ಕು ಇಲ್ಲವೆಂದರು. ವಿವಿ ಸಾಗರಕ್ಕೆ ಹತ್ತು ಟಿಎಂಸಿ ನೀರು ತರಬೇಕು ಮತ್ತು ಸಕ್ಕರೆ ಕಾರ್ಖಾನೆ ಪುನಾರಂಭದ ಹೋರಾಟಕ್ಕೆ ಪೂರ್ಣ ಪ್ರಮಾಣದ ಬೆಂಬಲ ಇದೆ ಎಂದರು. ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಟಿ ತಿಪ್ಪೇಸ್ವಾಮಿ, ಆಲೂರು ಸಿದ್ದರಾಮಣ್ಣ, ರೆಡ್ಡಿಹಳ್ಳಿ ವೀರಣ್ಣ, ಚಿಕ್ಕ ಕಬ್ಬಿಗೆರೆ ನಾಗರಾಜ್‌, ತಿಮ್ಮಾರೆಡ್ಡಿ, ಗಣೇಶ್‌, ಶಿವಣ್ಣ, ಮೈಲಾರಪ್ಪ, ರಾಜಪ್ಪ, ಭೂತೇಶ್‌ ಮುಂತಾದವರು ಹಾಜರಿದ್ದರು.

'ಮೇಕೆದಾಟು: ಡಿಎಂಕೆ ಮನವೊಲಿಕೆಗೆ ಕಾಂಗ್ರೆಸ್‌ನವರು ಸ್ಪೆಷಲ್ ಫ್ಲೈಟ್‌ನಲ್ಲಿ ಹೋಗಲಿ'

ವಿವಿ ಸಾಗರ ತುಂಬಿಸುವ ಹೊಣೆಗಾರಿಕೆ ರೈತರದ್ದು: ಜಿಲ್ಲೆಯ ಏಕೈಕ ಜೀವನಾಡಿ ಹಿರಿಯೂರಿನ ವಾಣಿ ವಿಲಾಸ ಜಲಾಶಯವನ್ನು ತುಂಬಿಸುವ ಎಲ್ಲ ಹೊಣೆಗಾರಿಕೆ ರೈತರ ಮೇಲಿದೆ ಎಂದು ರೈತ ಮುಖಂಡ ಈಚಘಟ್ಟದ ಸಿದ್ದವೀರಪ್ಪ ಹೇಳಿದರು. ಧರಣಿ ಸತ್ಯಾಗ್ರಹ 16ನೇ ದಿನಕ್ಕೆ ಕಾಲಿಟ್ಟಹಿನ್ನೆಲೆಯಲ್ಲಿ ಹೊಸದುರ್ಗ ತಾಲೂಕಿನ ರೈತ ಸಂಘದ ಕಾರ್ಯಕರ್ತರು ಆಗಮಿಸಿ ಬೆಂಬಲ ಸೂಚಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು. ಭದ್ರಾ ಮೇಲ್ದಂಡೆ ಯೋಜನೆಯಿಂದ ಹಿರಿಯೂರಿನ ವಿವಿ ಸಾಗರಕ್ಕೆ 10 ಟಿಎಂಸಿ ನೀರನ್ನು ಕೇಳುತ್ತಿರುವುದು ತಪ್ಪಲ್ಲ. ವಿವಿ ಸಾಗರ ಡ್ಯಾಂ 30 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿದೆ. ವೇದಾವತಿ ನದಿಯನ್ನು ಪುನಶ್ಚೇತನ ಮಾಡುವುದಕ್ಕೆ ಸರ್ಕಾರ ಜಾಗೃತಿ ವಹಿಸಬೇಕು ಅಂತ ಆಗ್ರಹಿಸಿದ್ದರು. 

ಆ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡದೇ ಹೋದರೆ ವೇದಾವತಿ ನದಿ ನಶಿಸಿ ಹೋಗುತ್ತದೆ. ನಮ್ಮ ತೆರಿಗೆ ಹಣದಲ್ಲಿ ಬೇರೆ ಬೇರೆ ಕಡೆ ಡ್ಯಾಂ ನಿರ್ಮಾಣ ಮಾಡಿ ನೀರು ಹರಿಸಲಾಗಿದೆ. ಆದರೆ ನಮ್ಮ ಜಿಲ್ಲೆಗೆ ಯಾಕೆ ನಿಮ್ಮ ಈ ತಾರತಮ್ಯ ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದ್ದರು. ನಗರದ ರಂಜಿತಾ ಹೋಟೆಲ್‌ನಿಂದ ತಾಲೂಕು ಕಚೇರಿ ಮುಂಭಾಗದ ಧರಣಿ ಸತ್ಯಾಗ್ರಹ ಸ್ಥಳದವರೆಗೂ ಬೈಕ್‌ ರಾರ‍ಯಲಿ ನಡೆಸಲಾಯಿತು. ಹೊಸದುರ್ಗ ತಾಲೂಕು ಅಧ್ಯಕ್ಷ ಮಹೇಶ್ವರಪ್ಪ, ಬೋರೇಶ್‌, ರಮೇಶ್‌, ಚಿತ್ತಪ್ಪ, ರಘು, ನಿಂಗಪ್ಪ, ವೇದಮೂರ್ತಿ, ಸಂತೋಷ್‌, ಹರೀಶ್‌, ಶಿವಪ್ಪ, ಕುಮಾರ್‌, ಉಮೇಶ್‌, ಮಹಾಂತೇಶ್‌, ಕುಮಾರಸ್ವಾಮಿ, ಹಳ್ಳಿಕೆರೆ ತಿಪ್ಪೇಸ್ವಾಮಿ, ಗುಂಡಪ್ಪ , ತಿಮ್ಮಾರೆಡ್ಡಿ ಉಪಸ್ಥಿತರಿದ್ದರು.