ಮಧುರೈ(ಎ.01): ಪಂಚ ರಾಜ್ಯ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇದೀಗ ಚುನಾವಣಾ ರ್ಯಾಲಿಗಾಗಿ ತಮಿಳುನಾಡಿಗೆ ತೆರಳಿರುವ ಪ್ರಧಾನಿ ನರೇಂದ್ರ ಮಧುರೈ ಮೀನಾಕ್ಷಿ ಸುಂದರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಸ್ವಾಮೀಜಿಗೆ ಶಿರಬಾಗಿ ನಮಿಸುವೆ ಸಿದ್ದಗಂಗಾ ಶ್ರೀಗಳ ಸ್ಮರಿಸಿದ ಪ್ರಧಾನಿ ಮೋದಿ!

ಶುಕ್ರವಾರ(ಎ.02) ನರೇಂದ್ರ ಮೋದಿ ತಮಿಳುನಾಡಿನಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ, ಉಪಮುಖ್ಯಮಂತ್ರಿ ಒ ಪನ್ನೀರಸೆಲ್ವಂ ಹಾಗೂ ಎನ್‌ಡಿಎ ಕೂಟದ ಮುಖಂಡರ ಜೊತೆ ಮೋದಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. 

 

ಚುನಾವಣಾ ರ್ಯಾಲಿಗಾಗಿ ಇಂದು(ಎ.01) ರಾತ್ರಿ 8.30ರ ಹೊತ್ತಿಗೆ ಮಧುರೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ, ಬಳಿಕ ಮಧುರೈ ಮೀನಾಕ್ಷಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಶುಕ್ರವಾರ ಬೆಳಗ್ಗೆ 11.30ರಿಂದ ಮೋದಿ ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. 

ಎಚ್. ಡಿ. ದೇವೇಗೌಡ ದಂಪತಿಗೆ ಕೊರೋನಾ: ಮಾಜಿ ಪಿಎಂಗೆ ಮೋದಿ ವಿಶೇಷ ಆಫರ್!

ತಮಿಳುನಾಡಿನ ಬಳಿಕ ಹೆಲಿಕಾಪ್ಟರ್ ಮೂಲಕ ಮಧ್ಯಾಹ್ನ 12.30ರ ಹೊತ್ತಿಗೆ ಕೇರಳಕ್ಕೆ ತೆರಳಲಿದ್ದಾರೆ. ಮಧುರೈ ಮೀನಾಕ್ಷಿ ದೇವಸ್ಥಾಕ್ಕೆ ಮೋದಿ ಆಗಮನದಿಂದ ಭಾರಿ ಭದ್ರತೆ ಕೈಗೊಳ್ಳಲಾಗಿತ್ತು.

ತಮಿಳುನಾಡು ವಿಧಾನಸಭಾ ಚುನಾವಣೆ ಎಪ್ರಿಲ್ 6 ರಂದು ನಡೆಯಲಿದೆ. 234 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮುಖ್ಯಮಂತ್ರಿ ಜಯಲಲಿತಾ(2018) ಹಾಗೂ ಎಂ ಕರುಣಾನಿಧಿ(2016) ನಿಧನದ ಬಳಿಕ ತಮಿಳುನಾಡು ಎದುರಿಸುತ್ತಿರುವ ಮೊದಲ ವಿಧಾನಸಭೆ ಚುನಾವಣೆ ಇದಾಗಿದೆ.