ಉಗ್ರರ ಬೆಂಬಲಿಗ ಸಂಸ್ಥೆಗಳ ಆಸ್ತಿ 24 ಗಂಟೆಯಲ್ಲಿ ಜಪ್ತಿ : ಕೇಂದ್ರ ಸರ್ಕಾರ
ಭಯೋತ್ಪಾದನೆಗೆ ದೊರೆಯುತ್ತಿರುವ ಬೆಂಬಲವನ್ನು ಮಟ್ಟಹಾಕಲು ಮತ್ತೊಂದು ಪ್ರಮುಖ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರ, ಉಗ್ರ ಸಂಘಟನೆಗಳಿಗೆ ಬೆಂಬಲ ನೀಡುತ್ತಿರುವವರ ಆಸ್ತಿಗಳನ್ನು 24 ಗಂಟೆಯೊಳಗೆ ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿದೆ.
ನವದೆಹಲಿ: ಭಯೋತ್ಪಾದನೆಗೆ ದೊರೆಯುತ್ತಿರುವ ಬೆಂಬಲವನ್ನು ಮಟ್ಟಹಾಕಲು ಮತ್ತೊಂದು ಪ್ರಮುಖ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರ, ಉಗ್ರ ಸಂಘಟನೆಗಳಿಗೆ ಬೆಂಬಲ ನೀಡುತ್ತಿರುವವರ ಆಸ್ತಿಗಳನ್ನು 24 ಗಂಟೆಯೊಳಗೆ ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿದೆ. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಹಲವು ಸಂಘಟನೆಗಳ ಹೆಸರು ಗುರುತಿಸಿದ್ದು, ಅದರ ಅನ್ವಯ ಕೇಂದ್ರ ಸರ್ಕಾರ ಈ ಕ್ರಮ ಜರುಗಿಸಿದೆ.
ಯುಎನ್‌ಎಸ್‌ಸಿ ಗುರುತಿಸಿರುವ ಎಲ್ಲಾ ಬೆಂಬಲಿಗರ ಆಸ್ತಿಯನ್ನು ಯುಎಪಿಎ (UAPA) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಅನ್ವಯ ಮುಂದಿನ 24 ಗಂಟೆಯೊಳಗೆ ಮುಟ್ಟುಗೋಲು ಹಾಕಿಕೊಳ್ಳುವಂತೆ ತನಿಖಾ ಸಂಸ್ಥೆಗಳು ಮತ್ತು ನಿಯಂತ್ರಣಾ ಸಂಸ್ಥೆಗಳಿಗೆ ಸರ್ಕಾರ ಸೂಚನೆ ನೀಡಿದೆ. ದೇಶದಲ್ಲಿ ಅಕ್ರಮ ಹಣ ವರ್ಗಾವಣೆ ಮತ್ತು ಕಪ್ಪುಹಣದ ಮೇಲೆ ಕಣ್ಣಿಟ್ಟಿರುವ ಹಣಕಾಸು ಗುಪ್ತಚರ ಇಲಾಖೆಯನ್ನು ಇದಕ್ಕೆ ನೋಡಲ್ ಏಜೆನ್ಸಿಯನ್ನಾಗಿ ನೇಮಕ ಮಾಡಲಾಗಿದ್ದು, ಅಕ್ರಮವನ್ನುಗುರುತಿಸುವ ಮತ್ತು ಕಾನೂನು ಕ್ರಮ ಜರುಗಿಸುವ ಅಧಿಕಾರ ನೀಡಲಾಗಿದೆ.
ಉಗ್ರರಲ್ಲಿ ಹೆಚ್ಚಿದ ಆತಂಕ, ಪಾಕಿಸ್ತಾನದಲ್ಲಿ ಕಿಡ್ನಾಪ್ ಆಗಿದ್ದ ಸುಂಜುವಾನ್ ದಾಳಿಕೋರ ಉಗ್ರನ ಶವ ಪತ್ತೆ!
ಪಾಕ್ ಕಲಾವಿದರಿಗೆ ನಿಷೇಧ ಕೋರಿದ್ದ ಅರ್ಜಿ ವಜಾ
ನವದೆಹಲಿ: ಪಾಕಿಸ್ತಾನದ ಕಲಾವಿದರು ಭಾರತದಲ್ಲಿ ಕೆಲಸ ಮಾಡುವುದನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್, ಇಷ್ಟು ಸಂಕುಚಿತ ಮನೋಭಾವ ಬೇಡ ಎಂದು ಅರ್ಜಿದಾರರಿಗೆ ಚಾಟಿ ಬೀಸಿದೆ. ಅರ್ಜಿ ಕುರಿತು ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಎತ್ತಿ ಹಿಡಿದ ನ್ಯಾ. ಸಂಜೀವ್ ಖನ್ನಾ ಮತ್ತು ನ್ಯಾ. ಎಸ್‌ವಿಎನ್ ಭಟ್ಟಿ ಅವರ ಪೀಠವು ‘ನಿಮ್ಮ ಈ ಮನವಿಯನ್ನು ನೀವು ಒತ್ತಾಯಿಸಲು ಸಾಧ್ಯವಿಲ್ಲ. ಇಷ್ಟೊಂದು ಸಂಕುಚಿತವಾದ ಅಸಹಿಷ್ಣುತಾ ಮನೋಭಾವ ಬೇಡ ಎಂದು ಸೂಚಿಸಿದೆ.
Video viral: ಹಮಾಸ್ ಉಗ್ರರನ್ನು 'ದೇಶಪ್ರೇಮಿಗಳು' ಎಂದು ಕರೆದ ಮಂಗಳೂರು ವ್ಯಕ್ತಿ!
ಕಲಾವಿದರು, ಸಿನಿಮಾ ಕ್ಷೇತ್ರದ ಕೆಲಸಗಾರರು, ಗಾಯಕರು, ಸಂಗೀತಗಾರರು, ಸಾಹಿತಿಗಳು ಮತ್ತು ತಂತ್ರಜ್ಞರು ಸೇರಿದಂತೆ ಇತರ ಯಾವುದೇ ಪಾಕಿಸ್ತಾನಿ ಕಲಾವಿದರು ಭಾರತದಲ್ಲಿ ಕೆಲಸ ಮಾಡಬಾರದು ಮತ್ತು ಯಾವುದೇ ಪ್ರದರ್ಶನಗಳನ್ನು ನೀಡಬಾರದು ಎಂದು ಫೈಜ್ ಅನ್ವರ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿತ್ತು. ಬಳಿಕ ಅವರು ಸುಪ್ರೀಂ ಮೆಟ್ಟಿಲೇರಿದ್ದರು.