Asianet Suvarna News Asianet Suvarna News

ತಾಜ್‌ಮಹಲ್‌ ನಾನು ನೋಡಿದ ಅತ್ಯಂತ ರೋಮ್ಯಾಂಟಿಕ್‌ ಸ್ಥಳ: ಮ್ಯಾಕ್ರನ್‌!

ಐಫೆಲ್‌ ಟವರ್‌ ಹಾಗೂ ತಾಜ್‌ ಮಹಲ್‌ ನಡುವೆ ಯಾವುದು ರೋಮ್ಯಾಂಟಿಕ್‌ ಸ್ಥಳ ಎನ್ನುವ ಪ್ರಶ್ನೆಗೆ ಫ್ರಾನ್ಸ್‌ ಅಧ್ಯಕ್ಷ ಇಮಾನ್ಯುಯೆಲ್‌ ಮ್ಯಾಕ್ರನ್‌, ತಾಜ್‌ಮಹಲ್‌ ನಾನು ನೋಡಿದ ಅತ್ಯಂತ ರೋಮ್ಯಾಂಟಿಕ್‌ ಸ್ಥಳ ಎಂದಿದ್ದಾರೆ.

Taj Mahal vs Eiffel Tower French President Emmanuel Macron picked a favourite san
Author
First Published Jan 29, 2024, 6:26 PM IST

ನವದೆಹಲಿ (ಜ.29): ಜಗತ್ತಿನ ಹೆಚ್ಚಿನ ಮಂದಿ ತಾವು ನೋಡಿದ ಅತ್ಯಂತ ರೋಮ್ಯಾಂಟಿಕ್‌ ಸ್ಥಳ ಯಾವುದು ಎನ್ನುವ ಪ್ರಶ್ನೆಗೆ ಮೊದಲ ಉತ್ತರವಾಗಿ ಫ್ರಾನ್ಸ್‌ನ ಐಫೆಲ್‌ ಟವರ್‌ ಅನ್ನು ಹೆಸರಿಸುತ್ತಾರೆ. ಆದರೆ, ಫ್ರಾನ್ಸ್‌ ಅಧ್ಯಕ್ಷ ಇಮಾನ್ಯುಯೆಲ್‌ ಮ್ಯಾಕ್ರನ್‌ ತಮಗೆ ಆಗ್ರಾದ ತಾಜ್‌ಮಹಲ್‌ ತಮ್ಮ ಫೇವರಿಟ್‌ ರೋಮ್ಯಾಂಟಿಕ್‌ ಸ್ಥಳ ಎಂದು ಹೇಳಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ವಿಡಿಯೋದಲ್ಲಿ ಈ ಬಗ್ಗೆ ಮಾತನಾಡಿರುವ ಮ್ಯಾಕ್ರನ್‌, ಕಳೆದ ಬಾರಿ ನೀವು ಭಾರತಕ್ಕೆ ಬಂದಿದ್ದಾಗ, ನಿಮ್ಮ ಪತ್ನಿಯೊಂದಿಗೆ ತಾಜ್‌ಮಹಲ್‌ಗೆ ಭೇಟಿ ನೀಡಿದ್ದೀರಿ. ತಾಜ್‌ ಮಹಲ್‌ ಹಾಗೂ ಐಫೆಲ್‌ ಟವರ್‌ ನಡುವೆ ಯಾವುದು ಅತ್ಯಂತ ರೋಮ್ಯಾಂಟಿಕ್‌ ಸ್ಥಳ ಎನ್ನುವ ಚರ್ಚೆಗೆ ನೀವು ಇಂದಾದರೂ ಕೊನೆ ಹಾಡುತ್ತೀರಾ?, ನಿಮ್ಮ ಪ್ರಕಾರ ಪ್ರಪೋಸಲ್‌ಗೆ ಇವರೆಡರಲ್ಲಿ ಯಾವುದು ಅತ್ಯಂತ ರೋಮ್ಯಾಂಟಿಕ್‌ ಸ್ಥಳ? ಎಂದು ಪತ್ರಕ್ರರ್ತೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ನಗುತ್ತಲೇ ಉತ್ತರಿಸುವ ಮ್ಯಾಕ್ರನ್‌, ನಿಜಕ್ಕೂ ಈ ಪ್ರಶ್ನೆಗೆ ಉತ್ತರ  ಹೇಳುವುದು ಕಷ್ಟ. ಯಾಕೆಂದರೆ, ನಿಮ್ಮ ಕಟ್ಟಿಗೆ ಅತ್ಯಂತ ಆಕರ್ಷಕವಾಗಿ ಹಾಗೂ ಅದೇ ಕಾಲದಲ್ಲಿ ರೋಮ್ಯಾಂಟಿಕ್‌ ಕೂಡ ಆಗಿರುವ ಸ್ಥಳದ ಬಗ್ಗೆ ಹೇಳುವುದಾದರೆ, ಅದಕ್ಕೆ ತಾಜ್‌ಮಹಲ್‌ ಎನ್ನುವುದೇ ನನ್ನ ಉತ್ತರ ಎಂದು ತಿಳಿಸಿದ್ದಾರೆ.

ಆ ಬಳಿಕ ತಮ್ಮ ಮಾತಿಗೆ ಸ್ಪಷ್ಟನೆಯನ್ನೂ ನೀಡುವ ಮ್ಯಾಕ್ರನ್‌, ನಾನು ಐಫೆಲ್‌ ಟವರ್‌ನ ಎದುರಲ್ಲೇ ವಾಸವಿದ್ದೇನೆ. ಹಾಗಾಗಿ ನನಗೆ ಅದರ ಬಗ್ಗೆ ಅಷ್ಟೇನೂ ಕುತೂಹಲ ಅನಿಸೋದಿಲ್ಲ ಎಂದಿರುವ ಅವರು, ಭಾರತದ ನಾಗರೀಕರಿಗೆ ಅವರ ಜೀವನದ ರೋಮ್ಯಾಂಟಿಕ್‌ ಕ್ಷಣಗಳನ್ನು ಕಳೆಯಲು ಪ್ಯಾರಿಸ್‌ಗೆ ಬರಬೇಕು ಎಂದು ನಾನು ಆಹ್ವಾನಿಸುತ್ತೇನೆ. ಅದು ಐಫೆಲ್ ಟವರ್‌ನ ಎದುರಲ್ಲೇ ಆಗಿರಬೇಕು ಎನ್ನುವುದು ನನ್ನ ಆಸೆ ಎಂದರು. ಆ ಮೂಲಕ ತಮ್ಮ ದೇಶದ ಸುಪ್ರಸಿದ್ಧ ಐಫೆಲ್‌ ಟವರ್‌ ಬಗ್ಗೆಯೂ ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಶನದಲ್ಲಿ ಹಲವಾರು ವಿಚಾರಗಳ ಬಗ್ಗೆ ಮಾತನಾಡಿರುವ ಮ್ಯಾಕ್ರನ್‌, 'ಫ್ರಾನ್ಸ್‌ನ ಅಧ್ಯಕ್ಷರಾಗಿ ಇದು ನನ್ನ 2ನೇ ಅವಧಿ. ಆದರೆ, ಇನ್ನಷ್ಟು ಯುವಕನಾಗಬೇಕು ಎನ್ನುವುದು ನನ್ನ ಆಸೆ. ನನ್ನ ಮೊದಲ ಅವಧಿಗೆ ಹೋಲಿಸಿದರೆ ನನಗೆ ಈಗ ಸಾಕಷ್ಟು ಅನುಭವ ಬಂದಿದೆ. ಮೊದಲ ಬಾರಿಗೆ ಆಯ್ಕೆಯಾದಾಗ ನನಗೆ ಅನುಭವದ ಕೊರತೆ ಇತ್ತು. ಆದರೆ, ದೇಶಕ್ಕಾಗಿ ಏನನ್ನಾದರೂ ಮಾಡಬೇಕು. ಹೊಸ ಪ್ರಾಜೆಕ್ಟ್‌ಗಳನ್ನು ಪರಿಚಯಿಸಬೇಕು ಎನ್ನುವ ಶಕ್ತಿ ಇತ್ತು. ನಾನು ಬಹಳಷ್ಟು ಕಲಿತಿದ್ದೇನೆ. ಅದೇ ಕಾರಣಕ್ಕಾಗಿ ದೇಶಕ್ಕೆ ಮತ್ತೊಮ್ಮೆ ಸೇವೆ ನೀಡಬೇಕು ಎಂದು ನಿರ್ಧಾರ ಮಾಡಿ 2ನೇ ಬಾರಿಗೆ ಆಯ್ಕೆಯಾದೆ ಎಂದು ಹೇಳಿದ್ದಾರೆ.

ಈ ಹಂತದಲ್ಲಿ ಭಾರತದ ಬಗ್ಗೆ ಒಂದು ಮಾತು ಹೇಳಬೇಕು. ಇಡೀ ದೇಶದ ಶಕ್ತಿ ಇಂದು ಯುವಕರಲ್ಲಿ ಕಾಣುತ್ತಿದೆ. ಭಾರತದಲ್ಲಿ ಸಾಕಷ್ಟು ಯುವ ಜನಸಂಖ್ಯೆ ಇದು, ಇಂದು ವಿಶ್ವದ ರೋಮಾಂಚಕ ಸಮಾಜ ಎನಿಸಿದೆ. ಸಾಕಷ್ಟು ಪ್ರತಿಭೆಗಳನ್ನು ಭಾರತದಲ್ಲಿ ಕಾಣುತ್ತಿದ್ದೇವೆ. ಕಲೆ, ವಿಜ್ಞಾನ ಕ್ಷೇತ್ರದಲ್ಲಿ ಲೆಕ್ಕವಿಲ್ಲದಷ್ಟು ಪ್ರತಿಭೆಗಳನ್ನು ನೋಡುತ್ತಿದ್ದೇವೆ. ಅದರೊಂದಿಗೆ ಭಾರತದಲ್ಲಿ ಅತ್ಯಂತ ಶ್ರೇಷ್ಠವಾದ ಶಿಕ್ಷಣ ವ್ಯವಸ್ಥೆ ಇದೆ.  ಇದೇ ಕಾರಣಕ್ಕಾಗಿ ಇಂದು ಭಾರತ ಒಂದು ದೇಶವಾಗಿ ವಿಭಿನ್ನವಾಗಿ ನಿಂತಿದೆ. ಪ್ರಧಾನಿ ಮೋದಿ ಅವರೊಂದಿಗಿನ ಚರ್ಚೆಯ ವೇಳೆಯಲ್ಲೂ ನಾನು ಇದನ್ನೇ ಹೇಳಿದ್ದೆ. ನಾನು ಭಾರತದ ಜನತೆಯ ಜೊತೆಗೆ ಲಿಂಕ್‌ ಆಗುವುದನ್ನು ಎದುರು ನೋಡುತ್ತಿದ್ದೇನೆ ಎಂದು ಮ್ಯಾಕ್ರನ್‌ ತಿಳಿಸಿದ್ದಾರೆ.

2030ರ ವೇಳೆಗೆ 30,000 ಭಾರತೀಯ ವಿದ್ಯಾರ್ಥಿಗಳಿಗೆ ಫ್ರಾನ್ಸ್‌ ಸ್ವಾಗತ: ಗಣತಂತ್ರ ದಿನಕ್ಕೆ ಮ್ಯಾಕ್ರನ್ ಶುಭಾಶಯ

ಇಂದು ಮೇಕ್‌ ಇನ್‌ ಇಂಡಿಯಾ ಅತ್ಯಂತ ಬಲಿಷ್ಠ ಕಾರ್ಯಕ್ರಮವಾಗಿ ರೂಪುಗೊಂಡಿದೆ. ಇದರ ಕಾರಣದಿಂದಾಗಿ ರಕ್ಷಣೆ, ಬಾಹ್ಯಾಕಾಶ ಹಾಗೂ ಇಂಧನ ಕ್ಷೇತ್ರಗಳಲ್ಲಿ ನಾವು ಸಾಕಷ್ಟು ಒಪ್ಪಂದಗಳನ್ನು ಮಾಡಿಕೊಳ್ಳಲು ಸಾಧ್ಯವಾಗಿದೆ. ಹಲವಾರು ಭಿನ್ನ ಕ್ಷೇತ್ರಗಳಲ್ಲಿ ನಾವು ಜೊತೆಯಾಗಿ ಸಾಗುತ್ತಿದ್ದೇವೆ. ಎರಡೂ ದೇಶಗಳ ನಡುವೆ ಇರುವ ಗೌರವ ಬಹಳ ಪ್ರಮುಖವಾದದ್ದು ಎಂದು ಮ್ಯಾಕ್ರನ್‌ ಹೇಳಿದ್ದಾರೆ. ಭಾರತ ನಮಗೆ ಮೊದಲಿನಿಂದಲೂ ಪ್ರಮುಖ ಜೊತೆಗಾರ ದೇಶ. ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ. ದೇಶದೊಂದಿಗೆ ನಾವು ವಿಶೇಷವಾದ ಸಂಬಂಧ ಹೊಂದಿದ್ದೇವೆ. ಇಲ್ಲಿನ ವಲಯದಲ್ಲಿ ಭಾರತ ಹೊಂದಿರುವ ವಿಶೇಷ ಪ್ರಾಬಲ್ಯದ ಬಗ್ಗೆ ನನಗೆ ಮೊದಲಿನಿಂದಲೂ ಕುತೂಹಲವಿದೆ. ಇದು ಬಹಳ ಪ್ರಮುಖ.  ಕಲೆ, ಸಂಸ್ಕೃತಿ ಹಾಗೂ ಪರಂಪರೆಗೆ ಮೌಲ್ಯ ನೀಡುವ ದೇಶ ಭಾರತ. ಫ್ರಾನ್ಸ್‌ ಕೂಡ ಇದೇ ಮೌಲ್ಯಗಳನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

ಮೋದಿ ಜತೆ ಇಂದು ಫ್ರೆಂಚ್‌ ಅಧ್ಯಕ್ಷರ ರೋಡ್‌ಶೋ: ರಾಜಸ್ಥಾನದ ಪಾರಂಪರಿಕ ತಾಣಗಳ ಪ್ರವಾಸ

Follow Us:
Download App:
  • android
  • ios