ನವದೆಹಲಿ(ಸೆ.21) ಚೀನಾದಿಂದ ಹರಡಿದ ಮಹಾಮಾರಿ ಇಡೀ ವಿಶ್ವವನ್ನೇ ಕಂಗೆಡಿಸಿದೆ, ಜನರನ್ನು ಹೊರ ಬಾರದಂತೆ ತಡೆದಿದೆ. ಸದ್ಯ ಅದೇ ಚೀನಾದ ಪ್ರವಾಸಿಗನೊಬ್ಬ ಆರು ತಿಂಗಳ ಬಳಿಕ ಮತ್ತೆ ಪ್ರವಾಸಿಗರ ಭೇಟಿಗೆ ಮುಕ್ತವಾದ ತಾಜ್‌ ಮಹಲ್‌ಗೆ ಮೊದಲು ಭೇಟಿ ನೀಡಿ ಪ್ರೇಮಸೌಧದ ಸೌಂದರ್ಯ ಆಸ್ವಾದಿಸಿದ್ದಾರೆ.

ಕೊರೋನಾದಿಂದಾಗಿ ಕಳೆದ ಆರು ತಿಂಗಳಿನಿಂದ ವಿಶ್ವ ವಿಖ್ಯಾತ ತಾಜ್‌ ಮಹಲ್ ಮುಚ್ಚಲಾಗಿತ್ತು. ಇದಕ್ಕೇ ಕಾರಣ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೋನಾ. ಇದರಿಂದಾಗಿ ಎಲ್ಲಾ ಪ್ರವಾಸಿ ಸ್ಥಳಗಳು ಮುಚ್ಚಲಾಗಿದ್ದು, ಜನರ ಅನಗತ್ಯವಾಗಿ ಓಡಾಟಕ್ಕೂ ಬ್ರೇಕ್ ಹಾಕಲಾಗಿತ್ತು. ಆದರೀಗ ಸರ್ಕಾರ ನಿಧಾನವಾಗಿ ಒಂದಾದ ಬಳಿಕ ಮತ್ತೊಂದರಂತೆ ಮುಚ್ಚಲಾದ ಸ್ಥಳಗಳಿಗೆ ಪ್ರವೇಶ ನೀಡಲಾರಂಭಿಸಿದೆ. ಹೀಗಿರುವಾಗ ಆರು ತಿಂಗಳ ಬಳಿಕ ತಾಜ್‌ ಮಹಲ್‌ ಭೇಟಿಗೂ ಅವಕಾಶ ನೀಡಲಾಗಿದ್ದು, ಚೀನಾದ ಲಿಯಾಂಗ್ ಶೀ ಶೇಂಗ್ ಎಲ್ಲರಿಗಿಂತ ಮೊದಲು ತಾಜ್‌ಗೆ ಭೇಟಿ ನೀಡಿದ್ದಾರೆ. 

ಮೊಘಲ್ ಅಲ್ಲ ಶಿವಾಜಿ! ಸ್ಪಾಟ್‌ನಲ್ಲಿ ಹೆಸರು ಬದಲಾಯಿಸಿದ ಯೋಗಿ!

ಇನ್ನು ಕೊರೋನಾ ವ್ಯಾಪಕವಾಗಿ ಹರಡುವ ಭೀತಿಯಿಂದ ಸರ್ಕಾರ ಲಾಕ್‌ಡೌನ್ ಹೇರಿದ್ದು, ಎಲ್ಲವನ್ನೂ ಮುಚ್ಚಲಾಗಿತ್ತು. ಪ್ರವಾಸಿಗರ ತಾಜ್‌ ಭೇಟಿಯನ್ನೂ ನಿಷೇಧಿಸಲಾಗಿತ್ತು. ಅತ್ತ ಆಗ್ರಾ ಕೋಟೆಯನ್ನೂ ಮುಚ್ಚಲಾಗಿತ್ತು. ಇದನ್ನು ಲಾಕ್‌ಡೌನ್‌ಗಿಂತ ಮುನ್ನ ಅಂದರೆ ಮಾರ್ಚ್ 17ರಂದೇ ಮುಚ್ಚಲಾಗಿತ್ತು. ಇದಾದ ಬಳಿಕ ಬರೋಬ್ಬರಿ  188 ದಿನಗಳು ಕಳದಿದ್ದು, ತಾಜ್ ಹಾಗೂ ಆಗ್ರಾ ಕೋಟೆಯನ್ನು ಮತ್ತೆ ತೆರೆಯಲಾಗಿದೆ.

ನಿಯಮಗಳು ಅನ್ವಯ:

ಪ್ರವಾಸಿಗರ ಭೇಟಿಗೆ ತಾಜ್‌ ಮಹಲ್ ತೆರೆಯಲಾಗಿದೆಯಾದರೂ, ಇಲ್ಲಿ ಭೇಟಿ ನೀಡುವವರು ಸರ್ಕಾರ ಸೂಚಿಸಿದ ಕೋವಿಡ್ 19 ಮಾರ್ಗಸೂಚಿಗನ್ನು ತಪ್ಪದೇ ಪಾಲಿಸಬೇಕು. ಸದ್ಯ ತಾಜ್‌ ಗೇಟ್ ಬಳಿ ಪ್ರವಾಸಿಗರ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗುತ್ತದೆ. ಇದಾಧ ಬಳಿಕವೇ ಒಳ ಪ್ರವೇಶಿಸಲು ಬಿಡಲಾಗುತ್ತದೆ. ಹೊಸ ಮಾರ್ಗಸೂಚಿ ಅನ್ವಯ ತಾಜ್‌ ಮಹಲ್‌ಗೆ ಒಂದು ದಿನ ಗರಿಷ್ಟ ಐದ ಸಾವಿರ ಮಂದಿ ಭೇಟಿ ನೀಡಬಹುದು. ಅತ್ತ ಆಗ್ರಾ ಕೋಟೆಗೆ ಗರಿಷ್ಟ 2,500 ಪ್ರವಾಸಿಗರಿಗಷ್ಟೇ ಭೇಟಿ ನೀಡಲು ಅವಕಾಶ ನೀಡಲಾಘುತ್ತದೆ. ಎರಡೂ ಸ್ಮಾರಕಗಳ ಬಳಿ ಇರುವ ಟಿಕೆಟ್‌ ಕೌಂಟರ್‌ ತೆರೆದಿರುವುದಿಲ್ಲ.

ಶಹಜಹಾನ್ ಇದ್ದಿದ್ದರೆ ಇಲ್ಲವಾಗಿರುತ್ತಿದ್ದ ತಾಜ್‌ಮಹಲ್‌ನ ತದ್ರೂಪಿ

ಆನ್‌ಲೈನ್ ಟಿಕೆಟ್ ಬುಕ್ಕಿಂಗ್: 

ಪ್ರವಾಸಿಗರು ಎಎಸ್‌ಐ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಟಿಕೆಟ್ ಬುಕ್ ಮಾಡಬೇಕು. ಈ ಸ್ಮಾರಕಗಳ ಬಳಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಲಾಗುತ್ತದೆ. ಇನ್ನು ಶಾಹ್‌ಜಹಾನ್‌ ಹಾಗೂ ಮುಮ್ತಾಜ್ ಮಹಲ್‌ರವರ ಗೋರಿ ಇರುವ ಮುಖ್ಯ ಕೋಣೆಗೆ ಒಂದು ಬಾರಿ ಕೇವಲ ಐದು ಮಂದಿಗಷ್ಟೇ ಪ್ರವೇಶ ನೀಡಲಾಗುತ್ತದೆ.