Asianet Suvarna News Asianet Suvarna News

ಮೊಘಲ್ ಅಲ್ಲ ಶಿವಾಜಿ! ಸ್ಪಾಟ್‌ನಲ್ಲಿ ಹೆಸರು ಬದಲಾಯಿಸಿದ ಯೋಗಿ!

ಹೆಸರು ಬದಲಿಸಿದ ಯೋಗಿ ಆದಿತ್ಯನಾಥ್/ ಗುಲಾಮಗಿರಿಯ ಹೆಸರು ಬೇಕಾಗಿಲ್ಲ/ಮೊಘಲ್ ಮ್ಯೂಸಿಯಂ ಅಲ್ಲ ಶಿವಾಜಿ ಮ್ಯೂಸಿಯಂ/ ಅಧಿಕಾರಿಗಳಿಗೆ ಖಡ್ ಸೂಚನೆ ರವಾನಿಸಿದ ಉತ್ತರ ಪ್ರದೇಶ ಸಿಎಂ

Mughals Can not be Our Role Models Yogi Adityanath Renames Agra Museum mh
Author
Bengaluru, First Published Sep 15, 2020, 6:32 PM IST

ಲಕ್ನೋ ( ಸೆ. 15)  ಮೊಘಲರು ಹೇಗೆ ನಮ್ಮ ಆದರ್ಶಗಳಾಗಲು ಸಾಧ್ಯ? ಎಂದು ಪ್ರಶ್ನೆ ಮಾಡಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್  ಒಂದು ದಿಟ್ಟ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.

ಆಗ್ರಾ ನಗರದಲ್ಲಿ ನಿರ್ಮಾಣವಾಗುತ್ತಿರುವ ಮ್ಯೂಸಿಯಂಗೆ ಛತ್ರಪತಿ ಶಿವಾಜಿ ಮಹಾರಾಜ್ ಹೆಸರು ಇಡುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಣೆ ಮಾಡಿದ್ದಾರೆ. ಶಿವಾಜಿ ಮಹಾರಾಜ ಮೊಘಲರ ಕಾಲದ ಆಡಳಿತದ ವಸ್ತುಗಳನ್ನು ಪ್ರದರ್ಶನಕ್ಕೆ ಇಡುವ ಈ ಮ್ಯೂಸಿಯಂಗೆ 'ಮೊಘಲ್ ಮ್ಯೂಸಿಯಂ' ಎಂದೇ ಹೆಸರಿಡಲು ಆಲೋಚನೆ ಮಾಡಲಾಗಿತ್ತು. ಆದರೆ ಯೋಗಿ ಎಲ್ಲವನ್ನು ಬದಲಾಯಿಸಿದ್ದಾರೆ. ಹಿರಿಯ ಅಧಿಕಾರಿಗಳೊಂದದಿಗೆ ಸಭೆ ನಡೆಸಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಎಷ್ಟು ಬ್ರಾಹ್ಮಣರ ಬಳಿ ಗನ್ ಲೈಸನ್ಸ್ ಇದೆ? ಮಾಹಿತಿ ಕೇಳಿದ ಸರ್ಕಾರ

ಆಗ್ರಾದ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿ, 'ಮೊಘಲರು ನಮ್ಮ ಹೀರೋಗಳಾಗಲು ಹೇಗೆ ಸಾಧ್ಯ?' ಎಂದು ಪ್ರಶ್ನಿಸಿದರು. ಗುಲಾಮಿತನ ಹೇರುವ ಇಂಥ ಸಂಗತಿಯನ್ನು ನಮ್ಮ ಸರ್ಕಾರ ಒಪ್ಪುವುದಿಲ್ಲ ಎಂದು ಹೇಳಿದರು.

ಜಗತ್ ಪ್ರಸಿದ್ಧ ತಾಜ್ ಮಹಲ್ ಪೊರ್ವದ್ವಾರದ ಬಳಿ ಮ್ಯೂಸಿಯಂ ನಿರ್ಮಾಣ ಮಾಡಲಾಗುತ್ತಿದ್ದು ಶಿವಾಜಿ ಮಹಾರಾಜ ಆಗ್ರಾದೊಂದಿಗೆ ಹೊಂದಿದ್ದ ಸಂಬಂಧಗಳನ್ನು, ದಾಖಲೆಗಳನ್ನು ಶೋಕೇಸ್ ಮಾಡಲಾಗುತ್ತದೆ.

141 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ  ಮ್ಯೂಸಿಯಂನ ಕಾಮಗಾರಿ ಪೂರ್ಣಗೊಂಡಿದ್ದು ಸಣ್ಣಪುಟ್ಟ ಕೆಲಸ ಬಾಕಿ ಇದೆ. ಶೀಘ್ರದಲ್ಲೇ ಇದರ ಕಾರ್ಯವು ಮುಗಿಯಲಿದ್ದು ಲೋಕಾರ್ಪಣೆಗೊಳ್ಳಲಿದೆ.

Follow Us:
Download App:
  • android
  • ios