Asianet Suvarna News Asianet Suvarna News

PM Narendra Modi: ದೇಶದಲ್ಲಿ ಈಗ ತಾರತಮ್ಯಕ್ಕೆ ಜಾಗವಿಲ್ಲದ ವ್ಯವಸ್ಥೆ

ಚಿಂತನೆ ಮತ್ತು ವಿಧಾನವು ನವನವೀನ ಮತ್ತು ನಿರ್ಧಾರಗಳು ಪ್ರಗತಿಪರವಾಗಿರುವ ಭಾರತದ ಹೊರಹೊಮ್ಮುವಿಕೆಯನ್ನು ನಾವು ನೋಡುತ್ತಿದ್ದೇವೆ. ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ದೃಢವಾಗಿ ನಿಂತಿರುವ ಸಮಾಜವನ್ನು ನಾವು ನಿರ್ಮಿಸುತ್ತಿದ್ದೇವೆ.
 

System Being Created Where There is no Place for any Discrimination PM Modi gvd
Author
Bangalore, First Published Jan 21, 2022, 3:10 AM IST

ನವದೆಹಲಿ (ಜ.21): ಚಿಂತನೆ ಮತ್ತು ವಿಧಾನವು ನವನವೀನ ಮತ್ತು ನಿರ್ಧಾರಗಳು ಪ್ರಗತಿಪರವಾಗಿರುವ ಭಾರತದ ಹೊರಹೊಮ್ಮುವಿಕೆಯನ್ನು ನಾವು ನೋಡುತ್ತಿದ್ದೇವೆ. ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ದೃಢವಾಗಿ ನಿಂತಿರುವ ಸಮಾಜವನ್ನು ನಾವು ನಿರ್ಮಿಸುತ್ತಿದ್ದೇವೆ. ತಾರತಮ್ಯಕ್ಕೆ ಜಾಗವಿಲ್ಲದ ವ್ಯವಸ್ಥೆಯನ್ನು ನಿರ್ಮಿಸುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಗುರುವಾರ ಹೇಳಿದರು.

ದೇಶದ 75ನೇ ಸ್ವಾತಂತ್ರ್ಯೋತ್ಸವದ ಸ್ಮರಣಾರ್ಥ, ‘ಸ್ವಾತಂತ್ರ್ಯದ ಅಮೃತ ಮಹೋತ್ಸವದಿಂದ ಸುವರ್ಣ ಭಾರತದತ್ತ’ ರಾಷ್ಟ್ರೀಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಧಾನಿ, ಅಮೃತ ಮಹೋತ್ಸವದ ಈ ಕಾಲವು ನಿದ್ರಿಸಿ ಕನಸು ಕಾಣುವುದಕ್ಕಾಗಿ ಅಲ್ಲ. ಬದಲಾಗಿ ಎಚ್ಚರದಿಂದಿದ್ದು ನಮ್ಮ ಸಂಕಲ್ಪಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಎಂದು ಹೇಳಿದರು. ಮುಂದಿನ 25 ವರ್ಷಗಳು ಕಠಿಣ ಪರಿಶ್ರಮ, ತ್ಯಾಗ ಮತ್ತು ಸಂಯಮದಿಂದ ತಪಸ್ಸು ಮಾಡಬೇಕಿದೆ. ನೂರಾರು ವರ್ಷಗಳ ಗುಲಾಮಗಿರಿಯಲ್ಲಿ ನಮ್ಮ ಸಮಾಜವು ಕಳೆದುಕೊಂಡಿರುವುದನ್ನು ಮರಳಿ ಪಡೆಯಲು ಈ ಅವಧಿ ಬಹಳ ಮುಖ್ಯ ಎಂದರು

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಯನ್ನು ಹಾಳುಮಾಡುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಅವುಗಳನ್ನು ಸಮರ್ಥವಾಗಿ ಎದುರಿಸಿ ದೇಶದ ಸರಿಯಾದ ಚಿತ್ರಣವನ್ನು ಪ್ರಸ್ತುತಪಡಿಸುವ ಅಗತ್ಯವಿದೆ. ಇದನ್ನು ಕೇವಲ ರಾಜಕೀಯ ಎಂದು ನಿರ್ಲಕ್ಷಿಸಲು ಸಾಧ್ಯವಿಲ್ಲ. ಇದು ನಮ್ಮ ದೇಶದ ಪ್ರತಿಷ್ಠೆಯ ಪ್ರಶ್ನೆ. ಜಗತ್ತು ಭಾರತವನ್ನು ಸರಿಯಾಗಿ ತಿಳಿದುಕೊಳ್ಳುವಂತೆ ಮಾಡುವುದು ನಮ್ಮ ಜವಾಬ್ದಾರಿ ಎಂದು ಕರೆ ನೀಡಿದರು. ಭಾರತ ವಿರೋಧಿ ಪ್ರಚಾರವನ್ನು ಎದುರಿಸುವಲ್ಲಿ ಬ್ರಹ್ಮಕುಮಾರಿಗಳು ಮತ್ತು ಇತರ ಅಂತಾರಾಷ್ಟ್ರೀಯ ಸಂಸ್ಥೆಗಳು ಯಾವ ಪಾತ್ರವನ್ನು ವಹಿಸುತ್ತವೆ ಎಂಬುದನ್ನು ವಿವರಿಸಿದರು.

Pariksha Pe Charcha 2022: ಫೆಬ್ರವರಿಯಲ್ಲಿ ನಡೆಯಲಿದೆ 5ನೇ ಆವೃತ್ತಿಯ ಪರೀಕ್ಷಾ ಪೆ ಚರ್ಚಾ!

ಇದೇ ವೇಳೆ, ಸುವರ್ಣ ಭವಿಷ್ಯವನ್ನು ರೂಪಿಸಿಕೊಳ್ಳಲು, ಎಲ್ಲವನ್ನೂ ಅರ್ಪಿಸಬೇಕು. ಹಕ್ಕುಗಳಿಗಿಂತ ಕರ್ತವ್ಯಕ್ಕೆ ಆದ್ಯತೆ ನೀಡಬೇಕು. ನಮ್ಮ ಗಮನ ಭವಿಷ್ಯದತ್ತ ಇರಬೇಕು ಎಂದು ಸಲಹೆ ನೀಡಿದರು. ಸ್ವಾತಂತ್ರ್ಯ ನಂತರದ 75 ವರ್ಷಗಳಲ್ಲಿ ಕರ್ತವ್ಯಗಳನ್ನು ನಿರ್ಲಕ್ಷಿಸಿದ್ದು ಮತ್ತು ಅವುಗಳಿಂದ ವಿಮುಖರಾದ ಪರಿಣಾಮ ದೇಶದ ಜನರ ಜೀವನದ ಮೇಲೆ ಉಂಟಾಗಿದೆ ಎಂಬುದನ್ನು ಒಪ್ಪಿಕೊಳ್ಳಬೇಕಿದೆ. ಈ ಅವಧಿಯಲ್ಲಿ ನಾವು ಹಕ್ಕುಗಳಿಗಾಗಿ ಧ್ವನಿ ಎತ್ತುವುದಕ್ಕಾಗಿ ಮತ್ತು ಹೋರಾಡುವುದಕ್ಕಾಗಿ ಸಮಯವನ್ನುಮೀಸಲಿಡಬೇಕಿದೆ ಎಂದು ಒತ್ತಿ ಹೇಳಿದರು.

ಇದೇ ವೇಳೆ, ದೇಶದ ಪ್ರತಿಯೊಬ್ಬರೂ ತಮ್ಮ ಹೃದಯಗಳಲ್ಲಿ ಕರ್ತವ್ಯದ ದೀಪವನ್ನು ಬೆಳಗಬೇಕು. ನಾವೆಲ್ಲರೂ ದೇಶವನ್ನು ಕರ್ತವ್ಯದ ಪಥದಲ್ಲಿ ಕೊಂಡೊಯ್ಯಬೇಕು. ಆಗ ಸಮಾಜದಲ್ಲಿರುವ ಎಲ್ಲಾ ಅನಿಷ್ಟಗಳು ದೂರಾಗಿ, ದೇಶವು ಹೊಸ ಎತ್ತರವನ್ನು ತಲುಪುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಭಾರತದಲ್ಲಿ 1930ರಲ್ಲಿ ಸ್ಥಾಪನೆಯಾದ ಬ್ರಹ್ಮಕುಮಾರಿ ಚಳವಳಿ ಸದ್ಯ 130ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಕಬಂದಬಾಹುಗಳನ್ನು ವಿಸ್ತರಿಸಿದೆ. ಲೋಕಸಭಾ ಸಭಾಪತಿ ಓಂ ಬಿರ್ಲಾ, ರಾಜಸ್ಥಾನ ರಾಜ್ಯಪಾಲ ಕಲ್‌ರಾಜ್‌ ಮಿಶ್ರಾ, ರಾಜಸ್ಥಾನ ಮತ್ತು ಗುಜರಾತ್‌ ಮುಖ್ಯಮಂತ್ರಿಗಳಾದ ಅಶೋಕ್‌ ಗೆಹ್ಲೋಟ್‌ ಮತ್ತು ಭೂಪೇಂದ್ರ ಪಟೇಲ್‌, ಕೇಂದ್ರ ಸಚಿವ ಜಿ.ಕಿಶನ್‌ ರೆಡ್ಡಿ, ಭೂಪೇಂದರ್‌ ಯಾದವ್‌ ಮತ್ತಿತರರು ಆನ್‌ಲೈನ್‌ ಕಾರ‍್ಯಕ್ರಮದಲ್ಲಿ ಭಾಗಿಯಾಗಿದ್ದರು.

ಮಕ್ಕಳ ಶೋನಲ್ಲಿ ಪ್ರಧಾನಿ ಅವಹೇಳನ: ಝೀ ತಮಿಳು ವಾಹಿನಿಗೆ ನೋಟಿಸ್‌!

ಸಿಎಂ ಜೊತೆ ಪ್ರಧಾನಿ ಕೊರೋನಾ ಸಭೆ: ದೇಶದಲ್ಲಿ ಕೊರೋನಾ ವೈರಸ್ ಆತಂಕ ಹೆಚ್ಚಾಗುತ್ತಿದೆ. ಒಂದೊಂದೆ ರಾಜ್ಯಗಳು ಲಾಕ್ ಆಗುತ್ತಿವೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿಗಳ ಜೊತೆ ಕೊರೋನಾ ಸ್ಥಿತಿಗತಿಗಳ ಸಭೆ ನಡೆಸಿದ್ದಾರೆ. ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿಗಳ ಜೊತೆ ಮೋದಿ ಕೊರೋನಾ ಸ್ಥಿತಿಗತಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಮೋದಿ ಮಹತ್ವದ ಸೂಚನೆ ನೀಡಿದ್ದಾರೆ. ಲಾಕ್‌ಡೌನ್ ಅಸ್ತ್ರಕ್ಕಿಂತ ಮೈಕ್ರೋಕಂಟೈನ್ಮೆಂಟ್ ಜೋನ್, ಹೋಮ್ ಐಸೋಲೇಶನ್, ಟ್ರಾಕ್ ಹಾಗೂ ಟ್ರೀಟ್ಮೆಂಟ್‌ಗೆ ಹೆಚ್ಚಿನ ಆದ್ಯತೆ ನೀಡುವಂತೆ ಮೋದಿ ಸೂಚಿಸಿದ್ದಾರೆ.

Follow Us:
Download App:
  • android
  • ios