Asianet Suvarna News Asianet Suvarna News

ಬೀದಿಯಲ್ಲಿ ಬಿದ್ದ ಸಿಗರೇಟ್ ತುಂಡು ಹೆಕ್ಕಲು ಕಾಗೆಗಳಿಗೆ ತರಬೇತಿ

  • ಕಾಗೆಗಳಿಗೆ ತರಬೇತಿ ನೀಡುತ್ತಿರುವ ಸ್ವೀಡನ್‌ ಸಂಸ್ಥೆ
  • ಬೀದಿಯಲ್ಲಿ ಬಿದ್ದ ಸಿಗರೇಟು ತುಂಡು ಹೆಕ್ಕಲು ತರಬೇತಿ
  • ಟ್ರೈನಿಂಗ್‌ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌
Swedish firm trains crows to pick up cigarette butts akb
Author
Bangalore, First Published Feb 7, 2022, 10:23 AM IST

ಸ್ವೀಡನ್‌: ಇಲ್ಲಿನ ಸಂಸ್ಥೆಯೊಂದು ಬೀದಿಯಲ್ಲಿ ಬಿದ್ದ ಸಿಗರೇಟ್ ತುಂಡುಗಳನ್ನು ಹೆಕ್ಕಲು ಕಾಗೆಗಳಿಗೆ ತರಬೇತಿ ನೀಡುತ್ತಿದೆ.  ಪ್ರಕೃತಿಯನ್ನು ಸ್ವಚ್ಛಗೊಳಿಸುವವರು  (scavengers of nature)ಎಂದೇ ಕರೆಯಲ್ಪಡುವ ಕಾಗೆಗಳು ಈಗಾಗಲೇ ಬೀಸಾಡಿರುವಂತಹ ಆಹಾರ ವಸ್ತುಗಳನ್ನು ಎತ್ತಿಕೊಳ್ಳುವ ಗುಣವನ್ನು ಹೊಂದಿವೆ. ಈಗ, Södertälje ಹೆಸರಿನ ಸ್ವೀಡನ್‌ ಸಂಸ್ಥೆಯೊಂದು ಆಹಾರದ ಬದಲು ಸಿಗರೇಟ್ ತುಂಡುಗಳನ್ನು ಹೆಕ್ಕುವ ತರಬೇತಿಯನ್ನು ಕಾಗೆಗಳಿಗೆ ತರಬೇತಿ ನೀಡುತ್ತಿದೆ.

ದಿ ಗಾರ್ಡಿಯನ್‌ನ (The Guardian) ವರದಿಯ ಪ್ರಕಾರ, 'ಕಾಗೆಗಳು ಸ್ವಯಂಪ್ರೇರಿತವಾಗಿ ಈ ಕಾರ್ಯದಲ್ಲಿ ಭಾಗವಹಿಸುವ ಪಕ್ಷಿಗಳಾಗಿದ್ದು, ಅವುಗಳಿಗೆ ಕಲಿಸಲು ಸುಲಭ ಮತ್ತು ಅವುಗಳಿಗೆ ಪರಸ್ಪರ ಕಲಿಯಲು ಹೆಚ್ಚಿನ ಅವಕಾಶವಿದೆ. ಅಲ್ಲದೇ ಅವುಗಳು ಯಾವುದೇ ಕಸವನ್ನು ತಿನ್ನುವ ಅಪಾಯವಿಲ್ಲ ಎಂದು ಕೊರ್ವಿಡ್ ಕ್ಲೀನಿಂಗ್‌ನ (Corvid Cleaning) ಸಂಸ್ಥಾಪಕ ಕ್ರಿಶ್ಚಿಯನ್ ಗುಂಥರ್-ಹ್ಯಾನ್ಸೆನ್ (Christian Günther-Hanssen) ಹೇಳಿದ್ದಾರೆ. 

ಇಂದು ಬೀದಿಯಲ್ಲಿ ಬಿದ್ದ ಸಿಗರೇಟು ತುಂಡುಗಳನ್ನು ಹೆಕ್ಕಲು ತಗಲುವ ಅಂದಾಜು ವೆಚ್ಚ ಪ್ರತಿ ಸಿಗರೇಟ್‌ ತುಂಡಿಗೆ 80 ಸ್ವೀಡಿಷ್‌ ಓರ್‌ಗಳು ಅಥವಾ ಅದಕ್ಕಿಂತ ಹೆಚ್ಚು ಕೆಲವರು ಹೇಳುತ್ತಾರೆ ನೂರು  ಓರ್‌ಗಳು ಎಂದು. ಹೀಗಾಗಿ ಕಾಗೆಗಳು ಈ ಕೆಲಸ ನಿರ್ವಹಿಸಿದರೆ ಮುನ್ಸಿಪಾಲಿಟಿಗೆ ಉಳಿತಾಯವಾಗುವುದು. ಕಾಗೆಗಳು ಎಷ್ಟು ಸಿಗರೇಟು ತುಂಡುಗಳನ್ನು ಹೆಕ್ಕುತ್ತವೆ ಎಂಬುದರ ಮೇಲೆ ಮುನ್ಸಿಪಾಲಿಟಿಗೆ ಎಷ್ಟು ಉಳಿತಾಯವಾಗುವುದು ಎಂಬುದು ಗೊತ್ತಾಗುತ್ತದೆ. 

ಏಳು ವರ್ಷದ ಮಾನವ ಮಗುವಿನ ಬುದ್ಧಿವಂತಿಕೆಯನ್ನು ಹೊಂದಿರುವ  ನ್ಯೂ ಕ್ಯಾಲೆಡೋನಿಯನ್ ಜಾತಿಯ ಕಾಗೆಗಳನ್ನು ಈ ಕೆಲಸಕ್ಕಾಗಿ ಬಳಸಲಾಗುತ್ತಿದೆ. ಆದಾಗ್ಯೂ, Södertälje ನಗರದಾದ್ಯಂತ ಈ ಕಾರ್ಯಾಚರಣೆಯನ್ನು ಸಮರ್ಥವಾಗಿ ಹೊರತರುವ ಮೊದಲು ಹಲವಾರು ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಇತ್ತ ಕಾಗೆಗಳಿಗೆ ತರಬೇತಿ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಹಕ್ಕಿ ಕಿರಿಕ್‌ಗೆ ಜನ ಹೈರಾಣು: ಹಾವಿನ ದ್ವೇಷ 12 ವರುಷ, ಕಾಗೆ ದ್ವೇಷ ಎಷ್ಟು ವರುಷ..?

ಪೂರ್ವಜರನ್ನು ಸ್ಮರಿಸಿ, ನೀರು ಹಾಗೂ ಮನೆಯಲ್ಲಿ ವಿಶೇಷವಾದ ಖಾದ್ಯ ತಯಾರಿಸಿ ಪೂರ್ವಿಕರ ಹೆಸರಿನಲ್ಲಿ ಕಾಗೆಗಳಿಗೆ(Crow) ನೀಡುವ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಇಂದು ಕಾಗೆಗಳ ಸಂತತಿಯೇ ಕಾಣದಾಗಿದ್ದರೂ ಅಂಕೋಲಾದಲ್ಲಿ ಕಳೆದ 10 ವರ್ಷದಿಂದ ಕಾಗೆಯೊಂದು ವ್ಯಕ್ತಿಯೊಬ್ಬನ ಸಲುಗೆ-ಸಂಪರ್ಕ ಬೆಳೆಸಿದ ಪರಿ ಸೋಜಿಗವಾಗಿದೆ.

ಕಾಗೆಗಳ ಜೀವನ ಶೈಲಿಯೆ ವ್ಯತಿರಿಕ್ತವಾದದು. ಅವು ಮನುಷ್ಯನ ಹತ್ತಿರ ಸುಳಿಯಲಾರದು. ಆದರೆ ಕಂತ್ರಿ (ಮಾಧವನಗರ)ದ ನಿವೃತ್ತ ನೌಕರ ವಿಠ್ಠಲ ಶೆಟ್ಟಿ ಅವರು ಕರೆದಾಗ ಕೈ ಮೇಲೆ ಬಂದು ಕಾಗೆ ಕುಳಿತು ಗಮನ ಸೆಳೆಯುತ್ತಿದೆ. ವಿಠ್ಠಲ ಶೆಟ್ಟಿ ಅವರು  ಚಪಾತಿಯನ್ನು ಕೈಯಲ್ಲಿ ಹಿಡಿದು ಆತ್ಮೀಯವಾಗಿ ಬಾರೋ ಬಾರೋ ಎನ್ನುತ್ತಾರೆ. ಕೂಡಲೇ ಹಾರಿ ಬರುವ ಕಾಗೆ ಅವರ ಕೈಯಲ್ಲಿ ಕುಳಿತುಕೊಳ್ಳುತ್ತದೆ. 10 ರಿಂದ 15 ನಿಮಿಷ ಕೈ ಮೇಲೆ ಕುಳಿತು ಆನಂತರ ಹಾರಿ ಹೋಗುತ್ತದೆ. ಪ್ರತಿ ದಿನ ಬೆಳಗ್ಗೆ 10 ಗಂಟೆಗೆ, ಹಾಗೆ ಮಧ್ಯಾಹ್ನ 3 ಗಂಟೆಗೆ ಮತ್ತು ಸಂಜೆ 6 ಗಂಟೆಗೆ ತಪ್ಪದೇ ಬರುವ ಈ ಕಾಗೆ ಕುಟುಂಬದ ಸದಸ್ಯರೊಂದಿಗೆ ಆತ್ಮೀಯತೆ ಬೆಳೆಸಿಕೊಂಡಿದೆ. ವಿಠ್ಠಲ ಶೆಟ್ಟಿ ಅವರು ಎಂದಾದರೂ ಮನೆ ಬಿಟ್ಟು ಒಂದೆರಡು ದಿನ ಹೊರಗಡೆ ಹೋದಾಗ, ಈ ಕಾಗೆ ಅವರ ಮನೆಯ ಬಾಗಿಲಲ್ಲೆ ಕುಳಿತು ಕಾದಿರುತ್ತದೆ.

Chitradurga: ಓಬಳಾಪುರದಲ್ಲಿ ಜನರ ತಲೆ, ಭುಜಕ್ಕೆ ಕುಕ್ಕಿ ಒಂಟಿ ಕಾಗೆ ಕಾಟ: ಹೈರಾಣಾದ ಜನತೆ..!

ಕಳೆದ 10 ವರ್ಷದ ಹಿಂದೆ ಒಂದು ಕಾಲು ಇಲ್ಲದ ಕಾಗೆಯೊಂದು ಇವರ ಮನೆಯ ಹತ್ತಿರ ಹಾರಾಡುತ್ತಿತಂತೆ. ವಿಠ್ಠಲ ಶೆಟ್ಟಿಅವರು ಈ ಕಾಗೆಗೆ ಕಾಲು ಇರದೇ ಇರುವುದನ್ನುಕಂಡು ತಿಂಡಿ ನೀಡಿ ಆತ್ಮೀಯತೆ ತೋರಿಸಿದ್ದರಂತೆ. 6 ತಿಂಗಳ ನಂತರ ಇದೇ ಕಾಗೆ 2 ಕಾಗೆ ಮರಿಗಳನ್ನು ಹೊತ್ತು ವಿಠ್ಠಲ ಶೆಟ್ಟಿಅವರ ಮನೆಯಂಗಳಕ್ಕೆ ಬಂದಿತ್ತು ಎನ್ನಲಾಗಿದೆ. ಅದರಲ್ಲಿ ಒಂದು ಕಾಗೆ ಅಸ್ವಸ್ಥ ಸ್ಥಿತಿಯಲ್ಲಿದ್ದರೆ, ಇನ್ನೊಂದು ಕಾಗೆ ಚುರುಕಾಗಿತ್ತು. ಚುರುಕಾಗಿದ್ದ ಕಾಗೆಯನ್ನು ತಾಯಿ ತೆಗೆದುಕೊಂಡು ಹಾರಿ ಹೋಯಿತು. ಅಸ್ವಸ್ಥವಾಗಿದ್ದ ಕಾಗೆಗೆ ಉಪಚರಿಸಿ, ಆಹಾರ ನೀಡಿದರಂತೆ. ಚೇತರಿಸಿಕೊಂಡ ಮರಿ ಕಾಗೆ ಹಾರಿ ಹೋದರೂ ಸಹ ಪ್ರತಿ ದಿನ, ಶೆಟ್ಟಿ ಅವರು ಕರೆದಾಗ ಬಂದು, ನೀಡಿದ್ದನ್ನು ತಿಂದು ಹೋಗುತ್ತಿದೆಯಂತೆ

Follow Us:
Download App:
  • android
  • ios