ಮದುವೆ ಸಮಾರಂಭಕ್ಕೆ ಕುಟುಂಬಸ್ಥರು, ಆಪ್ತರು ಆಗಮಿಸಿದ್ದರು. ನವ ಜೋಡಿಗಳು ವೇದಿಕೆ ಮೇಲಿದ್ದರು. ತಾಳಿ ಕಟ್ಟಲು ಕೆಲವೇ ಕ್ಷಣ ಬಾಕಿ ಇತ್ತು. ಮಂತ್ರಗಳು, ವಾದ್ಯಘೋಷಗಳು ಮೊಳಗಿತ್ತು. ಆದರೆ ಎಲ್ಲರಲ್ಲಿದ್ದ ಸಂಭ್ರಮ ಒಂದೇ ಕ್ಷಣ ಮಾಯವಾಗಿತ್ತು. ಕಾರಣ ಏಕಾಕಿ ಜೇನುನೊಣ ದಾಳಿ ನಡೆಸಿತ್ತು. ನವ ಜೋಡಿಗಳು ಸೇರಿ ಹಲವರಿಗೆ ನೊಣ ಕಚ್ಚಿದೆ. ಇತ್ತ 12 ಮಂದಿ ಆಸ್ಪತ್ರೆ ದಾಖಲಾಗಿತ್ತು, ಇಬ್ಬರಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಭೋಪಾಲ್(ಫೆ.19) ಮದುವೆ ಸಮಾರಂಭದ ಸಂಭ್ರಮ ಖುಷಿ ಒಂದು ಕ್ಷಣದಲ್ಲಿ ಮಾಯವಾದ ಘಟನೆ ಮಧ್ಯಪ್ರದೇಶ ಗುನಾದಲ್ಲಿ ನಡೆದಿದೆ. ಮದುವೆಗಾಗಿ ಆಹ್ವಾನಿತ ಆತ್ಮೀಯರು, ಕುಟುಂಸ್ಥರು, ಆಪ್ತರು ಆಗಮಿಸಿದ್ದರು. ಮತ್ತೊಂದೆಡೆ ವಿವಿದ ಬಗೆಯ ತಿನಿಸುಗಳು, ಆಹಾರ ರೆಡಿಯಾಗಿತ್ತು. ವೇದಿಕೆಯಲ್ಲಿ ನವ ಜೋಡಿಗಳು ಕುಳಿತಿದ್ದರು. ಮಂತ್ರಗಳು, ವಾದ್ಯಘೋಷಗಳು ಮೊಳಗಿತ್ತು. ಮತ್ತೊಂದೆಡೆ ಚಿಕ್ಕ ಮಕ್ಕಳು ತಮ್ಮದೇ ಸಂಭ್ರಮದಲ್ಲಿ ತೊಡಗಿದ್ದರು. ಆದರೆ ಒಂದು ಕ್ಷಣದಲ್ಲಿ ಕುಳಿತಿದ್ದ ಅತಿಥಿಗಳು ದಿಕ್ಕಾಪಾಲಾಗಿ ಓಡಲು ಆರಂಭಿಸಿದ್ದಾರೆ. ನವ ಜೋಡಿಗಳಿಗೆ ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲೇ ಜೇನು ನೊಣಗಳು ದಾಳಿ ನಡೆಸಿತ್ತು. ಒಂದೇ ಬಾರಿ ನಡೆದ ದಾಳಿಯಲ್ಲಿ ಹಲವರು ತೀವ್ರವಾದ ಕಡಿತಕ್ಕೊಳಗಾಗಿದ್ದಾರೆ. ಕೆಲವರು ಓಡುವ ಭರದಲ್ಲಿ ಬಿದ್ದು ಗಾಯಗಳಾಗಿವೆ. 12 ಮಂದಿ ಆಸ್ಪತ್ರೆ ದಾಖಲಿಸಲಾಗಿದೆ. ಈ ಪೈಕಿ ಇಬ್ಬರ ಪರಿಸ್ಥಿತಿ ಗಂಭೀರವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗುನಾ ನಿವಾಸಿಗಳಾದ ವಧು ಹಾಗೂ ವರ ಇಬ್ಬರ ಕುಟುಂಬಸ್ಥರು ಮದುವೆ ಸಮಾರಂಭಕ್ಕೆ ಮಂಟಪ ಬುಕ್ ಮಾಡಿದ್ದಾರೆ. ಮಂಟಪ ಪರಿಶೀಲಿಸಿದ ಬಳಿಕ ಕುಟುಂಬಸ್ಥರು ಚೌಲ್ಟ್ರಿ ಸಿಬ್ಬಂದಿಗಳ ಬಳಿ ಜೇನು ನೊಣ ಗೂಡು ಕಟ್ಟಿರುವ ಕುರಿತು ಮಾಹಿತಿ ನೀಡಿದ್ದಾರೆ. ಈ ವೇಳೆ ಜೇನು ನೊಣ ಇದುವರಗೆ ಯಾರಿಗೂ ಅಡ್ಡಿ ಮಾಡಿಲ್ಲ, ಅದರಿಂದ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ. ಈ ಉತ್ತರದಿಂದ ಸಮಾಧಾನಗೊಳ್ಳದ ಕುಟುಂಬಸ್ಥರು ಜೇನು ನೊಣವನ್ನು ಓಡಿಸಿ ಮಂಟಪ ರೆಡಿ ಮಾಡುವಂತೆ ಸೂಚಿಸಿದ್ದಾರೆ.
ಹೆಜ್ಜೇನು ದಾಳಿಗೆ ಹೆದರಿ ಬಾವಿಗೆ ಹಾರಿದ ಯುವಕ!
ಮಂಟಪದ ಸಿಬ್ಬಂದಿಗಳು, ಮಾಲೀಕರು ಜೇನು ನೊಣದ ಕುರಿತು ನಿರ್ಲಕ್ಷ್ಯ ವಹಿಸಿದ್ದಾರೆ. ಮದುವೆ ಹಿಂದಿನ ದಿನ ಚೌಲ್ಟ್ರಿಗೆ ತೆರಳಿದ ಕುಟುಂಬಸ್ಥರು ಮತ್ತೆ ಇದೇ ವಿಚಾರವಾಗಿ ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ. ಈ ಮಾತನ್ನು ಕಡೆಗಣಿಸಿದ ಸಿಬ್ಬಂದಿಗಳು ಜೇನು ನೊಣಗಳನ್ನು ಒಡಿಸುವ ಕೆಲಸ ಮಾಡಲಿಲ್ಲ. ಇತ್ತ ಮದುವೆ ದಿನ ಎಲ್ಲಾ ಅತಿಥಿಗಳು ಆಗಮಿಸಿದ್ದಾರೆ. ಇದೇ ವೇಳೆ ಜೇನು ನೊಣಗಳು ದಾಳಿ ನಡೆಸಿದೆ.
ಜೇನು ನೊಣ ದಾಳಿ ನಡೆಸುತ್ತಿದ್ದಂತೆ ಅತಿಥಿಗಳು ದಿಕ್ಕಾಪಾಲಾಗಿ ಓಡಿದ್ದಾರೆ. ಕೆವರು ಓಡುವ ಭರದಲ್ಲಿ ಬಿದ್ದಿದ್ದಾರೆ. ಮತ್ತೆ ಎದು ಓಡಲು ಆಗದೆ ಇತ್ತ ನೋಣಗಳ ಕಡಿತವನ್ನು ತಪ್ಪಿಸಿಕೊಳ್ಳಲು ಆಗದ ಅತಂತ್ರ ಸ್ಥಿತಿಗೆ ತಲುಪಿದ್ದಾರೆ. ನವ ಜೋಡಿಗಳು ಜೇನು ನೊಣ ದಾಳಿ ಮಾಡಿದೆ. ಇತ್ತ ಹಲವರು ಜೇನು ನೊಣದ ದಾಳಿಗೆ ತುತ್ತಾಗಿದ್ದಾರೆ.
ಹೆಜ್ಜೇನು ದಾಳಿಗೆ ಕಾಫಿ ಮಂಡಳಿ ಮಾಜಿ ಅಧ್ಯಕ್ಷ M.S.ಭೋಜೇಗೌಡ ಸಾವು
12 ಮಂದಿ ಮೇಲೆ ಜೇನು ನೊಣಗಳು ಗಂಭೀರವಾಗಿ ಕಚ್ಚಿದೆ. ಹೀಗಾಗಿ ಗಂಭೀರವಾಗಿ ಕಡಿತಕ್ಕೊಳಗಾದ 12 ಮಂದಿಯನ್ನು ಆಸ್ಪತ್ರೆ ದಾಖಲಿಸಲಾಗಿದೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಬ್ಬಂದಿಗಳನ್ನು ವಿಚಾರಣೆ ನಡೆಸಿದ್ದಾರೆ.
