Asianet Suvarna News Asianet Suvarna News

ಸಫ್ದರ್‌ಜಂಗ್ ರೈಲು ನಿಲ್ದಾಣ ಸ್ವಚ್ಚಗೊಳಿಸಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್!

ಪ್ರಧಾನಿ ನರೇಂದ್ರ ಮೋದಿ ಸ್ವಚ್ಚ ಭಾರತ ಅಭಿಯಾನ ಆಂದೋಲನದಲ್ಲಿ ಪಾಲ್ಗೊಂಡ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ದೆಹಲಿಯ ಸಫ್ದರ್‌ಜಂಗ್ ರೈಲು ನಿಲ್ದಾಣ ಸ್ವಚ್ಚಗೊಳಿಸಿದ್ದಾರೆ.

Swachhata Hi Seva Union Minister Rajeev Chandrasekhar participate cleanness drive at Safdurjung railway station in Delhi ckm
Author
First Published Oct 1, 2023, 5:38 PM IST

ನವದೆಹಲಿ(ಅ.01) ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 1 ರಂದು ಸ್ವಚ್ಚಾತ ಅಭಿಯಾನ ನಡೆಸುವಂತೆ ಕರೆ ನೀಡಿದ್ದಾರೆ. ಈ ಕರೆಗೆ ಒಗೊಟ್ಟಿರುವ ಕೋಟ್ಯಾಂತರ ಭಾರತೀಯರು ಇಂದು ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮಹಾತ್ಮಾ ಗಾಂಧಿ ಜಯಂತಿ ಪ್ರಯುಕ್ತ ದಿನಾಂಕ 1, ಒಂದು ಗಂಟೆ, ಒಗ್ಗಟ್ಟಾಗಿ ಶ್ರಮದಾನದ ಮೂಲಕ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಳ್ಳೋಣ ಎಂಬ ಮೋದಿ ಮನವಿಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸ್ಪಂದಿಸಿದ್ದಾರೆ. ಇಂದು ದೆಹಲಿ ಸಫ್ದರ್‌ಜಂಗ್ ರೈಲ್ವೇ ನಿಲ್ದಾಣದಲ್ಲಿ ರಾಜೀವ್ ಚಂದ್ರಶೇಖರ್ ಹಾಗೂ ಹಲವು ಸ್ವಯಂ ಸೇವಕರು ಸ್ವಚ್ಚತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ನಿಲ್ದಾಣವನ್ನು ಸ್ವಚ್ಚಗೊಳಿಸುವ ಮೂಲಕ ಮಹತ್ವದ ಸಂದೇಶ ರವಾನಿಸಿದ್ದಾರೆ.

ಒಂದು ಗಂಟೆ ಸಮಯ ಸ್ವಚ್ಚತೆಗಾಗಿ ಮೀಸಲಿಟ್ಟ ಸಚಿವ ರಾಜೀವ್ ಚಂದ್ರಶೇಖರ್, ಶ್ರಮದಾನದ ಮೂಲಕ ರೈಲು ನಿಲ್ದಾಣ ಸ್ವಚ್ಚಗೊಳಿಸಿದ್ದಾರೆ. ದೇಶದ ಜನತೆ ತಮ್ಮ ಸಾಮೂಹಿಕ ನಡವಳಿಕೆಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಹಲವು ಆಂದೋಲನಗಳನ್ನು, ಕಾರ್ಯಕ್ರಮವನ್ನು ರೂಪಿಸಿದ್ದಾರೆ. ದೇಶ ಹಲವು ದಶಕಗಳ ವರೆಗೆ ಸಾರ್ವಜನಿಕ ಪ್ರದೇಶದಲ್ಲಿನ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಿರಲಿಲ್ಲ. ಆದರೆ ಮೋದಿ ಸ್ವಚ್ಚ ಭಾರತ್ ಮಿಶನ್ ಉತ್ತೇಜಿಸುವ ನಿಟ್ಟಿನಲ್ಲಿ ಇದೀಗ ಒಂದು ಗಂಟೆ ಶ್ರಮದಾನದ ಮೂಲಕ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಳ್ಳುವ ಆಂದೋಲನಕ್ಕೆ ಕರೆ ಕೊಟ್ಟಿದ್ದಾರೆ. ಈ ಅಭಿಯಾನದಲ್ಲಿ ಪಾಲ್ಗೊಳ್ಳುವುದು ಸಂತಸ ತಂದಿದೆ. ಕೋವಿಡ್ ಬಳಿಕ ಸ್ವಚ್ಚತೆಗೆ ನಾವು ತೆಗೆದುಕೊಳ್ಳಬೇಕಾದ ಎಚ್ಚರಿಕೆಗೆ ಇದು  ಸಹಕಾರಿಯಾಗಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಮೋದಿ ಕರೆಗೆ ಒಗ್ಗೂಡಿದ ಜನತೆ: ದೇಶದ 6.4 ಲಕ್ಷ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ; ಆಂದೋಲನದಲ್ಲಿ ಭಾಗಿಯಾದ ಪ್ರಧಾನಿ

ಭಾರತದ ಯುವ ಸಮೂಹ ಸ್ವಚ್ಚ ಭಾರತ್ ಮಿಶನ್‌ನ ಪ್ರಮುಖ ಪಾಲುದಾರರಾಗಿದ್ದಾರೆ. ಇದೇ ವೇಳೆ ಮೋದಿ ದೂರದೃಷ್ಟಿಯ ಯೋಜನೆಗಳನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಜವಾಬ್ದಾರಿ ಹೊತ್ತಿದ್ದಾರೆ. ಸಂಪೂರ್ಣ ಭಾರತವನ್ನು ಸ್ವಚ್ಚಗೊಳಿಸುವ ಸಂಕಲ್ಪದೊಂದಿಗೆ ಪ್ರಧಾನಿ ನೇರಂದ್ರ ಮೋದಿ, ಕೆಂಪು ಕೋಟೆಯಲ್ಲಿ ಸ್ವಚ್ಚ ಭಾರತ್ ಮಿಶನ್ ಘೋಷಣೆ ಮಾಡಿದ್ದರು. ಈ ಯೋಜನೆ ದೇಶದ ಸಾರ್ವಜನಿಕರಲ್ಲಿ ಮಹತ್ತರ ಬದಲಾವಣೆ ತರಲಿದೆ. ಈ ಕಾರ್ಯಕ್ರಮ ದೇಶದ ನಾಗರೀಕರಲ್ಲಿ ಬದಲಾವಣೆ ತರಲಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ ಧ್ಯೇಯದೊಂದಿಗೆ ಭಾರತ ಮುನ್ನಡೆಯುತ್ತಿದೆ ಎಂದು ರಾಜೀವ್ ಚಂದ್ರಶೇಕರ್ ಹೇಳಿದ್ದಾರೆ.

ಕಸ ಮುಕ್ತ ಭಾರತ ಅಭಿಯಾನದಲ್ಲಿ ದೇಶಾದ್ಯಂತ ಹಲವರು ಭಾಗವಹಿಸಿದ್ದಾರೆ. ಕಳೆದ 14 ದಿನಗಳಲ್ಲಿ 32 ಕೋಟಿಗೂ ಹೆಚ್ಚು ಮಂದಿ ಈ ಅಭಿಯಾನದಲ್ಲಿ ಪಾಲ್ಗೊಂಡು ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅಂದರೆ ಪ್ರತಿ ದಿನ ಸರಾಸರಿ 2.3 ಕೋಟಿ ಮಂದಿ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡು ಭಾರತಕ್ಕೆ ಹೊಸ ಕಳೆ ನೀಡಿದ್ದಾರೆ. 15 ಕೋಟಿ ನಾಗರೀಕರು ಸ್ವಚ್ಚತಾ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವುದಾಗಿ ಅಂದಾಜಿಸಲಾಗಿದೆ. 3.68 ಲಕ್ಷ ಸ್ವಚ್ಚ ಭಾರತ್ ಮಿಷನ್ ಚಟುವಟಿಕೆಗಳಿಗೆ ಸ್ವಯಂ ಸೇವಕರನ್ನೂ ಒದಗಿಸಲಾಗಿದೆ. ಕಡಲತೀರಗಳನ್ನು ಸ್ವಚ್ಚಗೊಳಿಸುವುದು, ನದಿ ತೀರ, ಕಲ್ಯಾಣಿ ಪುನರುಜ್ಜೀವನ, ತ್ಯಾಜ್ಯಾ ವಿಲೇವಾರಿ ತಾಣ ಸ್ವಚ್ಚಗೊಳಿಸುವುದು ಸೇರಿದಂತೆ ಹಲವು ಚಟುವಟಿಕೆಗಳನ್ನು ಒಳಗೊಂಡಿದೆ.  

ಉತ್ತರಕನ್ನಡದ ಹಾಲಕ್ಕಿ ಮಹಿಳೆಯ ಸಮಾಜಮುಖಿ ಕಾರ್ಯಕ್ಕೆ ಮನಸೋತ ಉದ್ಯಮಿ ಆನಂದ್ ಮಹೀಂದ್ರಾ

Follow Us:
Download App:
  • android
  • ios